ಕಲಬುರಗಿ: ಹಸಿರು ಕ್ರಾಂತಿಯ ಹರಿಕಾರ ಡಾ.ಬಾಬು ಜಗಜೀವನರಾಮ್ ಜಯಂತೋತ್ಸವ ಕಾರ್ಯಕ್ರಮವನ್ನು ಅನ್ನಪೂರ್ಣ ಕ್ರಾಸ ಹತ್ತಿರ ಇರುವ ಬಾಬು ಜಗಜೀವನ ರಾಮ್ ಪ್ರತಿಮೆ ಬಳಿ ಏ.5ರಂದು ನಡೆಸಲು ಪರವಾನಿಗೆ ನೀಡುವಂತೆ ಡಾ.ಬಾಬು ಜಗಜೀವನ ರಾಮ್ ಜಯಂತೋತ್ಸವ ಸಮಿತಿ ಅಧ್ಯಕ್ಷ ದತ್ತುಭಾಸಗಿ ಅವರು, ಮಹಾನಗರ ಪಾಲಿಕೆಯ ಆಯುಕ್ತರಿಗೆ ಪತ್ರಬರೆದು ಮನವಿ ಮಾಡಿದ್ದಾರೆ.
ಈ ಕಾರ್ಯಕ್ರಮಕ್ಕೆ ಎಲ್ಲ ಅಗತ್ಯ ಮೂಲ ಸೌಕರ್ಯ ಕಲ್ಪಿಸುವಂತೆ ಮನವಿ ಮಾಡಿರುವ ಅವರು, ಏ. 5 ರಂದು ಬಹಿರಂಗ ಸಭೆ ನಡೆಸಲಾಗುವುದು, ಇದೇ ಕಾರ್ಯಕ್ರಮದಲ್ಲಿ ಎಸ್. ಎಸ್.ಎಲ್.ಸಿ.ಸೇರಿದಂತೆ ವಾರ್ಷಿಕ ಪರೀಕ್ಷೆಯಲ್ಲಿ ಅತಿ ಹೆಚ್ಚು ಅಂಕ ಒಡೆದ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಬಹುಮಾನ ಹಾಗೂ ಕ್ರೀಡಾ ಕೂಟದ ವಿಜೇತ ತಂಡಗಳಿಗೆ ಪ್ರಶಸ್ತಿ ನೀಡಲಾಗುವುದು.
ಡಾ. ಬಾಬು ಜಗಜೀವನರಾಮ್ ಜಿಲ್ಲಾ ಜಯಂತೋತ್ಸವ ಸಮಿತಿ ನಿಯೋಗ, ಪಾಲಿಕೆ ಅಧಿಕಾರಿಗಳಿಗೆ ಭೇಟಿ ಮಾಡಿ, ಏ.5 ರಂದು ಡಾ. ಬಾಬು ಜಗಜೀವನರಾಮ್ ಜಯಂತೋತ್ಸವ ಕಾರ್ಯಕ್ರಮವನ್ನು ಬೆಳಗ್ಗೆ 10.45 ಗಂಟೆಗೆ ಅನ್ನಪೂರ್ಣಾ ಕ್ರಾಸ್ ಪುತ್ಥಳಿಯ ಎದುರುಗಡೆ ಆಯೋಜಿಸಲು ಹಾಗೂ ಇಲ್ಲಿಯೇ ಬಹಿರಂಗ ಸಭೆಯನ್ನು ನಡೆಸಲು ಅನುಮತಿ ನೀಡಬೇಕು.
ಸದರಿ ಬಹಿರಂಗ ಸಭೆಗೆ ಅತಿಥಿಗಳಿಗೆ ಹಾಗೂ ಸಾರ್ವಜನಿಕರಿಗೆ ಆಸನ ವ್ಯವಸ್ಥೆ, ಖುರ್ಚಿ ಮತ್ತು ಪೆಂಡಾಲ್ ವ್ಯವಸ್ಥೆ ಹಾಗೂ ಕುಡಿಯುವ ನೀರಿನ ವ್ಯವಸ್ಥೆ ಹಾಗೂ ಸ್ವಚ್ಛತೆಯನ್ನು ಕಾಪಾಡಲು ಕ್ರಮ ಕೈಗೊಳ್ಳಬೇಕು. ಜಯಂತೋತ್ಸವ ಕಾರ್ಯಕ್ರಮದ ಯಶಸ್ವಿಗೆ ಮಹಾನಗರ ಪಾಲಿಕೆ ವತಿಯಿಂದ ಎಲ್ಲರಿತಿಯ ಮೂಲ ಸೌಕರ್ಯ ಕಲ್ಪಿಸಬೇಕು ಇಲ್ಲಿ ಶಾಂತಿಯುತವಾಗಿ ಜಯಂತೋತ್ಸವ ಆಚರಿಸಲು ಪರವಾನಿಗೆ ಮತ್ತು ಸೂಕ್ತ ಬಂದೊಬಸ್ತ ಕಲ್ಪಿಸಬೇಕು ಎಂದು ಸಮಿತಿ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಮನವಿ ಮಾಡಿದ್ದಾರೆ.