ಸಜ್ಜನ ರಾಜಕಾರಣಿ ಸರಡಗಿ ಆಗಲುವಿಕೆಗೆ ಸಂಸದ ಡಾ. ಉಮೇಶ್ ಜಾಧವ್ ಸಂತಾಪ

0
14

ಕಲಬುರಗಿ: ಸಜ್ಜನ ರಾಜಕಾರಣಿ ಎಂದೇ ಖ್ಯಾತರಾದ ಮಾಜಿ ಲೋಕಸಭಾ ಸದಸ್ಯರು ಹಾಗೂ ವಿಧಾನ ಪರಿಷತ್ ಸದಸ್ಯರಾಗಿದ್ದ ಇಕ್ಬಾಲ ಅಹಮದ್ ಸರಡಗಿ ಯವರ ಅಗಲವಿಕೆ ಕಲ್ಬುರ್ಗಿ ಜಿಲ್ಲೆಗೆ ಹಾಗೂ ರಾಜ್ಯಕ್ಕೆ ಭಾರಿ ನಷ್ಟ ಎಂದು ಸಂಸದರಾದ ಡಾ. ಉಮೇಶ್ ಜಾಧವ್ ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.

ಕಲ್ಬುರ್ಗಿಯ ರಾಜಕಾರಣದ ಇತಿಹಾಸದಲ್ಲಿ ಅತ್ಯಂತ ಸರಳ ಸಜ್ಜನಿಕೆಯಿಂದ ಪ್ರಾಮಾಣಿಕವಾಗಿ ರಾಜಕಾರಣವನ್ನು ಮಾಡಿ ಜನರಿಗಾಗಿ ಸ್ಪಂದಿಸಿದ ಸರಡಗಿಯವರ ಅಗಲುವಿಕೆಯಿಂದ ಕಲ್ಯಾಣ ಕರ್ನಾಟಕ ಭಾಗಕ್ಕೆ ದೊಡ್ಡ ಆಘಾತ ಮತ್ತು ನಷ್ಟ ಉಂಟಾಗಿದೆ. ಎರಡು ಬಾರಿ ಲೋಕಸಭೆಯಲ್ಲಿ ಕಲಬುರ್ಗಿಯನ್ನು ಪ್ರತಿನಿಧಿಸಿ ಈ ಭಾಗದ ಅಭಿವೃದ್ಧಿಗೆ ತಮ್ಮದೇ ಆದ ಕೊಡುಗೆಯನ್ನು ನೀಡಿದ್ದರು. ಜೊತೆಗೆ ವಿಧಾನಪರಿಷತ್ ಸದಸ್ಯರಾಗಿ ಈ ಭಾಗದ ಸಮಸ್ಯೆಗಳ ಬಗ್ಗೆ ಗಮನಸೆಳೆದು ನಿಸ್ಪೃಹ ಸೇವೆಗೈ ದು ಜನಪ್ರಿಯರಾಗಿದ್ದರು.

Contact Your\'s Advertisement; 9902492681

ಶಿಕ್ಷಣ ಸಂಸ್ಥೆಯನ್ನು ಕಟ್ಟಿ ಈ ಭಾಗದಲ್ಲಿ ಉನ್ನತ ಶಿಕ್ಷಣದ ಅವಕಾಶವನ್ನು ಪಡೆಯುವಂತೆ ಮಾಡಿದ ಒಬ್ಬ ಶಿಕ್ಷಣ ತಜ್ಞರಾಗಿ ಗುರುತಿಸಿಕೊಂಡವರು. ವೈಯಕ್ತಿಕವಾಗಿ ತುಂಬಾ ಆತ್ಮೀಯರಾಗಿದ್ದ ಸರಡಗಿಯವರ ಅಗಲುವಿಕೆ ನನಗೆ ತೀವ್ರ ದುಃಖವನ್ನುಂಟು ಮಾಡಿದೆ. ಈ ಭಾಗದ ರಾಜಕಾರಣದ ಹಿರಿಯ ಕೊಂಡಿಯೊಂದು ಕಳಸಚಿದಂತಾಗಿದ್ದು ಅವರ ಆದರ್ಶ ನಮಗೆಲ್ಲ ಪ್ರೇರಣೆಯಾಗಲಿ.

ಸರಡಗಿಯವರ ಆತ್ಮಕ್ಕೆ ದೇವರು ಚಿರಶಾಂತಿ ಕರುಣಿಸಲಿ ಹಾಗೂ ಅವರ ಅಗಲುವಿಕೆಯಿಂದ ಕುಟುಂಬಕ್ಕಾದ ನೋವನ್ನು ಸಹಿಸುವ ಶಕ್ತಿಯನ್ನು ದೇವರು ದಯಪಾಲಿಸಲಿ ಎಂದು ಪ್ರಾರ್ಥಿಸುವುದಾಗಿ ಸಂಸದ ಡಾ. ಉಮೇಶ್ ಜಾಧವ್ ತಮ್ಮ ಶೋಕ ಸಂದೇಶದಲ್ಲಿ ತಿಳಿಸಿದ್ದಾರೆ.

ಕಾರಣಾಂತರದಿಂದ ದೆಹಲಿಯಲ್ಲಿ ಇರುವುದರಿಂದ ಭೇಟಿ ನೀಡಲು ಅಸಾಧ್ಯ ವಾದುದಕ್ಕೆ ಕುಟುಂಬದವರಕ್ಷಮೆ ಕೋರುತ್ತೇನೆ ಎಂದು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here