ವಿ.ಟಿ.ಯುನಲ್ಲಿ ವಿಶ್ವ ರೆಡ್‌ ಕ್ರಾಸ್‌ ದಿನಾಚರಣೆ

0
81

ಕಲಬುರಗಿ: ಇಂದಿನ ಯುವ ಸಮುದಾಯ ಕೇವಲ ಓದಿಗೆ ಅಷ್ಟೆ ತಮ್ಮ ಜೀವನ ಮುಡುಪಾಗಿಟ್ಟಿರುವುದಲ್ಲದೇ, ಸಮಾಜ ಕಾರ್ಯಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ನೊಂದವರ ಬಾಳಿಗೆ ಬೆಳಕಾಗಬೇಕಾಗಿದೆ. ಅಭ್ಯಾಸದ ಜೊತೆ ಜೊತೆಗೆ ಪ್ರಸ್ತುತ ಸಮಯದಲ್ಲಿ ಯುವಕರು ಸಮಾಜಮುಖಿಯಾಗಿ, ಕೆಲಸ ಮಾಡಬೇಕೆಂದು ವಿ.ಟಿ.ಯುವಿನ ನಿರ್ದೇಶಕರಾದ ಡಾ. ಬಸವರಾಜ ಗಾದಗೆ ಹೇಳಿದರು.

ಅವರು, ಮೇ 23 ರಂದು ನಗರದ ವಿಶ್ವೇಶ್ವರಯ್ಯ ತಾಂತ್ರಿಕ ಮಹಾ ವಿದ್ಯಾಲಯ ಪ್ರಾದೇಶಿಕ ಕಚೇರಿಯ ಸಭಾಂಗಣದಲ್ಲಿ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಕಲಬುರಗಿ ಜಿಲ್ಲಾ ಶಾಖೆಯು ಹಮ್ಮಿಕೊಂಡ “ವಿಶ್ವ ರೆಡ್‌ ಕ್ರಾಸ್‌ ದಿನಾಚರಣೆವನ್ನು ಉದ್ಘಾಟಿಸಿ ಮಾತನಾಡಿದರು.

Contact Your\'s Advertisement; 9902492681

ಸಮಾರಂಭದಲ್ಲಿ ರೆಡ್‌ ಕ್ರಾಸ್‌ ಸಂಸ್ಥೆ ಕುರಿತು ವಿಶೇಷ ಉಪನ್ಯಾಸ ನೀಡಿರುವ ಡಾ. ಶೀವಲಿಲಾ ಚಟ್ನಳ್ಳಿಯವರು, ಅತಿವೃಷ್ಟಿ ಅನಾವೃಷ್ಟಿ ಮತ್ತು ಅನೇಕ ಭಯಾನಕ ಸಂದರ್ಭದಲ್ಲಿ ರೆಡ್‌ ಕ್ರಾಸ್‌ ಸಂಸ್ಥೆಯು “ಸಂಜೀವಿನ”ಯಾಗಿ ಕೆಲಸಮಾಡುತ್ತಿದೆ. ಸಮೃದ್ಧ ಸಮಾಜ ನಿರ್ಮಾಣಕ್ಕಾಗಿ ಇಂದಿನ ಯುವಕರು ಸಮಾಜ ಸೇವೆಯಲ್ಲಿ ಪಾಲ್ಗೋಂಡು ಸ್ವಯಂ ಪ್ರೇರಿತವಾಗಿ ಸಮಾಜ ಕಾರ್ಯ ಮಾಡಬೇಕೆಂದು ಹೇಳಿದರು.

ಇದೇ ಸಂದರ್ಭದಲ್ಲಿ ರೆಡ್‌ ಕ್ರಾಸ್‌ ಸಂಸ್ಥೆಯುಲ್ಲಿ ಸಭಾಪತಿಗಳಾಗಿ ಬಹಳ ಶೇವೆ ಸಲ್ಲಿಸಿದ ನಿಕಟಪೂರ್ವ ಸಭಾಪತಿ  ಅಪ್ಪಾರಾವ ಅಕ್ಕೋಣೆ ಹಾಗೂ ರೆಡ್‌ ಕ್ರಾಸ್‌ ಸಂಸ್ಥೆಯ ಹೆಚ್ಚಿನ ಕಾರ್ಯ ಚಟುವಿಟಿಕೆಗಳನ್ನು ಮಾಡಿರುವುದಕ್ಕೆ  ಡಾ. ನಾಗೇಂದ್ರಪ್ಪ ಬಡಿಗೇರ, ಶರದ್‌ ಎಮ್.‌ ರೇಷ್ಮೀ ಹಾಗೂ ಡಾ. ಪ್ರಕಾಶ ಮೊರೆಗೆ ಅವರಿಗೆ ವಿಶ್ವ ರೆಡ್‌ ಕ್ರಾಸ್‌ ದಿನಾಚರಣೆಯ ಪ್ರಯುಕ್ತ ಸನ್ಮಾನಿಸಲಾಯಿತ್ತು.

ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಜಂಟಿ ಕಾರ್ಯದರ್ಶಿ  ಸುರೇಶ ಬಡಿಗೇರ ಅವರು ಸರ್ವರನ್ನು ಸ್ವಾಗತ್ತಿಸಿ ಪ್ರಸ್ತಾವಿಕವಾಗಿ ಮಾತನಾಡಿದರು ಹಾಗೂ ವಿ.ಟಿ.ಯು ಮಹಾ ವಿದ್ಯಾಲಯ ಪ್ರಾಧ್ಯಾಪಕರಾದ ಡಾ. ಕೆ. ಶಿವರಾಮನ ಗೌಡ ಅವರು ನಿರೂಪಿಸಿದರು.

ಕಾರ್ಯಕ್ರಮದ ವೇದಿಕೆ ಮೇಲೆ ಭಾರತೀಯ ರೆಡ್‌ ಕ್ರಾಸ್‌ ಸಂಸ್ಥೆಯ ಜಿಲ್ಲಾ ಶಾಖೆಯ ಗೌ. ಕಾರ್ಯದರ್ಶಿ  ರವೀಂದ್ರ ಶಾಬಾದಿ, ವಿ.ಟಿ.ಯು ಪ್ರಾಧ್ಯಾಪಕರಾದ ಡಾ. ಶಂಬುಲಿಂಗಪ್ಪ ಬಿ. ಕಾರ್ಯಕ್ರಮ ಅಧಿಕಾರಿ ಡಾ. ಶರಣಗೌಡ ಬಿರಾದಾರ, ರೆಡ್‌ ಕ್ರಾಸ್‌ ಸಂಸ್ಥೆಯ ಪದಾಧಿಕಾರಿಗಳಾದ ರಾಜೇ ಶೀವಶರಣಪ್ಪ, ಡಾ. ಪದ್ಮಣಾ ರಾಸಣಗಿ, ಡಾ. ಶಂಕರಪ್ಪ ಹತ್ತಿ, ಡಾ. ಪರಮೇಶ್ವರ ಶೆಟಗಾರ,  ವಿಶ್ವನಾಥ ಕೋರವಾರ, ಹಾಗೂ ಉಪನ್ಯಾಸಕರು ಮತ್ತು ವಿದ್ಯಾರ್ಥಿಗಳು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here