ಗುಲ್ಬರ್ಗ ವಿವಿಯಲ್ಲಿಲ್ಲ ಬೋಧಕ ಸಿಬ್ಬಂದಿ.. ಸರ್ಕಾರಕ್ಕೆ ಆಟ, ವಿದ್ಯಾರ್ಥಿಗಳಿಗಿಲ್ಲ ಸರಿಯಾದ ಪಾಠ..!

1
186

ಕಲಬುರಗಿ: ಗುಲ್ಬರ್ಗಾ ವಿಶ್ವವಿದ್ಯಾಲಯ ಅಂದ್ರೆ ಸರ್ಕಾರಕ್ಕೆ ಅದ್ಯಾಕೆ ಅಷ್ಟೊಂದು ನಿರ್ಲಕ್ಷ್ಯ ಅಂತಾ ಗೊತ್ತಾಗ್ತಿಲ್ಲ. ಶೈಕ್ಷಣಿಕವಾಗಿ ಹಿಂದುಳಿದ ಕಲಬುರ್ಗಿ ಭಾಗದ ವಿದ್ಯಾರ್ಥಿಗಳು ಸಾಕಷ್ಟು ಉಜ್ವಲ ಭವಿಷ್ಯದ ಕನಸುಗಳನ್ನು ಕಟ್ಟಿಕೊಂಡು ಈ ವಿವಿಗೆ ಬರ್ತಾರೆ. ಆದ್ರೆ, ಇಲ್ಲಿ ವಿದ್ಯಾರ್ಥಿಗಳ ಕನಸಿಗೆ ಕೊಳ್ಳಿ ಇಡ್ತಿರೋದು ಬೇರೆ ಯಾರು ಅಲ್ಲ, ಸರ್ಕಾರ.

ಗುಲ್ಬರ್ಗಾ ವಿವಿಯಲ್ಲಿ ವಿದ್ಯಾರ್ಥಿಗಳಿಗೆ ಪಾಠ ಮಾಡಬೇಕಾದ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳೇ ಇಲ್ಲ. ದಶಕಗಳೇ ಕಳೆದ್ರೂ ಹುದ್ದೆಗಳನ್ನ ಭರ್ತಿ ಮಾಡುವಂತಹ ಕೆಲಸ ಮಾತ್ರ ಆಗಿಲ್ಲ. ವಿವಿಯಲ್ಲಿ ಖಾಯಂ ಕುಲಪತಿ, ಬೋಧಕ, ಬೋಧಕೇತರ ಹುದ್ದೆಗಳು ಸೇರಿ ವಿವಿಧ ವಿಭಾಗಗಳಲ್ಲಿ ಸುಮಾರು 300ಕ್ಕೂ ಹೆಚ್ಚು ಹುದ್ದೆಗಳು ಖಾಲಿ ಇರುವುದು ವಿದ್ಯಾರ್ಥಿಗಳ ಉನ್ನತ ವ್ಯಾಸಂಗಕ್ಕೆ ಅಡ್ಡಿಯಾಗ್ತಿದೆ.

ಕುಲಪತಿಗಳನ್ನ ನೇಮಕ ಮಾಡಬೇಕಿದ್ದ ಉನ್ನತ ಶಿಕ್ಷಣ ಇಲಾಖೆ ಇದ್ಯಾವುದರ ಬಗ್ಗೆಯೂ ತೆಲೆ ಕೆಡಿಸಿಕೊಳ್ಳುತ್ತಿಲ್ಲ. ಹಾಗಾಗಿಯೇ ಒಬ್ಬೊಬ್ಬರ ಡೀನ್‌ ಶೀಪ್‌ ಅವಧಿ ಮುಗಿದ ನಂತರ ಮತ್ತೊಬ್ಬ ಹಿರಿಯ ಡೀನ್‌ಗೆ ಪ್ರಭಾರಿ ಕುಲಪತಿಯನ್ನಾಗಿ ನೇಮಕ ಮಾಡುವ ಮೂಲಕ ಕಾಲ ತಳ್ಳಿಕೊಂಡು ಬರ್ತಿದೆ ಸರ್ಕಾರ. ಪ್ರಭಾರಿ ಕುಲಪತಿಗಳ ಕೈಯಲ್ಲಿ ನೇಮಕಾತಿಯ ಯಾವುದೇ ಅಧಿಕಾರ ಇಲ್ಲದಿರುವ ಕಾರಣ ಆಟಕ್ಕುಂಟು ಲೆಕ್ಕಕ್ಕೆ ಇಲ್ಲದಂತಾಗಿದೆ.

Contact Your\'s Advertisement; 9902492681

ಇದು ಒಂದೆಡೆಯಾದ್ರೆ ಉನ್ನತ ವ್ಯಾಸಂಗದ ಮೂಲಕ ಹತ್ತಾರು ಕನಸುಗಳನ್ನು ಹೊತ್ತಿರುವ ವಿದ್ಯಾರ್ಥಿಗಳಿಗೆ ಭವಿಷ್ಯದ್ದೆ ಚಿಂತೆಯಾಗಿದೆ. ಹೀಗಾಗಿ ಸರ್ಕಾರ ಆದಷ್ಟು ಬೇಗ ವಿವಿಯಲ್ಲಿ ಸಿಬ್ಬಂದಿಯನ್ನು ನೇಮಕ ಮಾಡೋ ಮೂಲಕ ವಿದ್ಯಾರ್ಥಿಗಳ ಕನಸಿಗೆ ಬೆನ್ನೆಲುಬಾಗಬೇಕಾಗಿದೆ.

1 ಕಾಮೆಂಟ್

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here