ಲಾಕ್ ಡೌನ್: ನಾನು ತಿಂದ ಒಂದು ಬೆತ್ತದ ರು”ಚಿ”: ನಿರ್ಗತಿಕರಾಗುತ್ತಿರುವ ಆಟೋ ಚಾಲಕ ಸಮುದಾಯ.?

0
145
  • ಸಾಜಿದ್ ಅಲಿ

ಕಲಬುರಗಿ: ಕೊರೋನಾ ಮಹಾಮಾರಿ ವಿಶ್ವದೆಲ್ಲೆಡೆ ವ್ಯಾಪಿಸುತ್ತಿದ್ದು, ಭಾರತಕ್ಕೆ ಆಗಮಿಸುತ್ತಿದಂತೆ ಜನ ಜೀವನ ಅಸ್ತವ್ಯಸ್ಥಗೊಳಿಸಿ, ಕೋಟಿಗಟ್ಟಲೇ ಜನರನ್ನು ನಿರ್ಗತಿಕರಾಗಿ ಮಾಡಿ ಹಸಿವೆಗಾಗಿ ತತ್ತರಿಸುವಂತೆ ಮಾಡಿದೆ. ಈ ಸಂದರ್ಭದಲ್ಲಿ ಜನರ ಮಾನವೀಯತೆಯ ಪರೀಕ್ಷೆ ಕೂಡ ಪ್ರಕೃತಿ ನಡೆಸುತ್ತಿದೆ ಎಂಬ ವಾತಾವರಣ ನಿರ್ಮಾಣವಾಗಿದೆ. ಜನರಿಗೆ ಡೆಷ್ಟಿನೇಶಗೆ ತಲುಪಿಸಲು ಹಗಲಿರುಳು ಶ್ರಮಿಸುವ ಆಟೋ ಚಾಲಕ ಬಂಧುಗಳ ಪರಿಸ್ಥಿತಿ ಹೇಗಿದೆ. ಬೀದಿಗೆ ಬಂದರೆ ಲಾಠಿ ರುಚಿ ತಿನ್ನುವ ಸ್ಥಿತಿಯಲ್ಲಿ ದೇಶ ಇದ್ದು, ಜನರೇ ಬೀದಿಗೆ ಇಳಿಯದಿದ್ದಾಗ ಇವರು ಯಾವ ರೀತಿ ತಮ್ಮ ಜೀವನ ನಡೆಸುತ್ತಿರಬಹುದು ಎಂಬುದು ಉಹಿಸಲು ಸಾಧ್ಯವಿಲ್ಲ.

ಜನರು ರಸ್ತೆಗೆ ಇಳಿದರೆ ಸಾಕು ಆಟೋ ಚಾಲಕರು ಅವರ ಮನೆಗೆ ಹಾಗೂ ಡೆಷ್ಟಿನೇಶನಗೆ ಸುರಕ್ಷಿತವಾಗಿ ತಲುಪಿಸುವುದು ಇವರ ಕಾರ್ಯ. ಅದೇ ರೀತಿಯಲ್ಲಿ ಬೆಲೆ ಬಾಳುವ ವಸ್ತುಗಳು ಪ್ರಯಾಣಿಕರು ತಮ್ಮ ಆಟೋದಲ್ಲಿ ಬಿಟ್ಟು ಹೋದರೆ ಪ್ರಮಾಣಿಕವಾಗಿ ಅವರಿಗೆ ತಲುಪಿಸುವ ಅವರ ಸಾಧನೆ ಆಗಾಗ ವರದಿಯಾಗುವುದು, ನಿನ್ನೆಯಷ್ಟೆ ಸೋಮವಾರಪೇಟೆ ಪಟ್ಟಣದ 62 ವರ್ಷದ ಆಟೋ ಚಾಲಕ ಅನಾಥ ಶವಗಳ ಸಾಗಿಸಿ ಅಂತ್ಯ ಸಂಸ್ಕಾರ ಮಾಡುವ ಚಾಲಕನ ಸಾವಿನ ಸುದ್ದಿ ರಾಜ್ಯವೆ ಕಳವಳ ವ್ಯಕ್ತಪಡಿಸಿತು.

Contact Your\'s Advertisement; 9902492681

ಬೀದಿಗೆ ಇಳಿದರೆ ಸಾಕು ಪ್ರತಿದಿನ ಪೊಲೀಸ್ ಮತ್ತು ಆಟೋ ಚಾಲಕರ ನಡುವೆ ಹಾವು ಮತ್ತು ಮುಂಗುಸಿ ಆಟ ನಡೆಯುತ್ತಿರುತ್ತದೆ. ನಾಲ್ಕು ಕಾಸು ಮನೆಗೆ ವೈಯಬೇಕು ಎನ್ನುವಷ್ಟರಲ್ಲಿ ಪೊಲೀಸಪ್ಪ ಏನಾದರು ಸಿಕ್ಕಿದರೆ ಯಮರಾಜ ಸಿಕ್ಕಂತೆ ಪರಿಸ್ಥಿತಿ ಇವರದಾಗಿರುತ್ತದೆ, ನಾಲ್ಕು ಐದು ಬೆತ್ತದ ರುಚಿ, ಒಂದಿಷ್ಟು ಅವಾಚ್ಯ ಬೈಗಳ ಧಮ್ಕಿಗಳು ಆಗಾಗ ಸಿಗುತ್ತವೆ. ಇದರ ನಡುವೆ ಅವರು ಆಟೋ ಸಿಜ್ ಮಾಡದಿದ್ದರೆ ಮತ್ತು ಫೈನ್ ಹಾಕದಿದ್ದರೆ ಸಾಕು ಎಂಬಂತೆ ಗೋಳಾಡಿ ಮಂಡಿ ಉರುವರಿವರು.

ಆಗಾಗ ಒಳ್ಳೆ ಪೊಲೀಸ್ ಆಧಿಕಾರಿಗಳು ಇವರ ಕಾರ್ಯವನ್ನು ಪ್ರಶಂಶಿ, ಧೈರ್ಯ ತುಂಬುವರು ಕೆಲಸ ಮಾಡುವುದುಂಟು. ಆದ್ದರಿಂದ ಕೆಲವು ಪೊಲೀಸರನ್ನು ಕಂಡರೆ ಅಪಾರವಾದ ಗೌರವದಿಂದ ಹೇಳಿಕೊಳ್ಳುವುದು ನಾವು ಆಟೋ ಚಾಲಕರು ಎಂದು.

ಜಿಲ್ಲಾವಾರು ಆಟೋ ಚಾಲಕರ ಸಂಘಗಳು ಇದ್ದು, ಕಲಬುರಗಿ ಜಿಲ್ಲೆಯಲ್ಲಿ ಸುಮಾರು 50ಕ್ಕೂ ಹೆಚ್ಚು ಆಟೋ  ಸ್ಟ್ಯಾಂಡ್ ಗಳು ಇವೆ. ಆದರು ಸಹ ಇವೊತ್ತು ಇವರು ನಿರ್ಗತಿಕರು. ಅದಕ್ಕೆ ಹಲವು ಕಾರಣ ಇರಬಹುದು ಆದರೆ ಈ ಲಾಕ್ ಡೌನ್ ಪರಸ್ಥಿತಿಯಲ್ಲಿ ಇವರ ಕೈ ಹಿಡಿಯುವವರು ಯಾರು? ದೇಣಿಗೆಗೂ ಕೈ ಚಾಚದ ಹಲವು ಚಾಲಕರು ಒಂದು ರೌಂಡ್ ಹೋಗಿ ನಾಲ್ಕು ಕಾಸು ತಂದು ಮನೆ ನಡೆಸಬೇಕೆಂಬ ಹಂಬಲ, ರೋಡಿಗೆ ಇಳಿದ ಕ್ಷಣ ಸಾಮಾಜಿ ಅಂತರ, ಲಾಕ್ ಡೌನ್ ನಿಯಮ ಉಲ್ಲಂಘನೆಗಾಗಿ ಬೆತ್ತದ ಏಟಿನ ಸುರಿಮಳೆ ಮತ್ತು ಆಟೋ ಸಿಜ್ ಆಗುವ ಸಾಧ್ಯತೆ. ಇವರು ಕಾರ್ಯಾಂಗದ ಒಂದು ಭಾಗವಾಗಿದ್ದರು. ಇವರ ಬಗ್ಗೆ ಕಾಳಜಿ ಪ್ರವೃತರಾಗುವ ಮನಸ್ಸುಗಳಿಗಾಗಿ ಕಣ್ಣು ಬಿಡುಬಂತದಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here