ಪೌರಕಾರ್ಮಿಕರೊಂದಿಗೆ ಮಹಾನಗರಪಾಲಿಕೆ ಆಯುಕ್ತರ ಸಂವಾದ

1
109

ಕಲಬುರಗಿ: ಕಲಬುರಗಿ ಮಹಾನಗರ ಪಾಲಿಕೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಖಾಯಂ ಹಾಗೂ ಹೊರಗುತ್ತಿಗೆ ಪೌರ ಕಾರ್ಮಿಕರ ಯೋಗಕ್ಷೇಮ ಕುರಿತು ಕಲಬುರಗಿ ಮಹಾನಗರಪಾಲಿಕೆ ಆಯುಕ್ತೆ ಬಿ. ಫೌಜಿಯಾ ತರನ್ನುಮ್ ಅವರು ಇತ್ತೀಚೆಗೆ ಕಲಬುರಗಿ ನಗರದ ಇಂದಿರಾ ಸ್ಮಾರಕ ಭವನದಲ್ಲಿ ಕಾರ್ಮಿಕರೊಂದಿಗೆ ಸಂವಾದ ನಡೆಸಿದರು.

ಪ್ರತಿದಿನ ಪೌರ ಕಾರ್ಮಿಕರಿಗೆ ಬೆಳಗಿನ ಉಪಹಾರ ಸರಬರಾಜು ಮತ್ತು ಗುಣಮಟ್ಟದ ಕುರಿತು ಅಧಿಕಾರಿಗಳಿಂದ ಮಾಹಿತಿ ಪಡೆದು ನಗರದ ನೈರ್ಮಲೀಕರಣ ಕಾರ್ಯಕ್ಕೆ ಪೌರ ಕಾರ್ಮಿಕರಿಗೆ ನೀಡಲಾಗುವ ಸಾಧನ ಸಲಕರಣೆಗಳು ಆರೋಗ್ಯದ ಹಿತದೃಷ್ಠಿಯಿಂದ ತಪ್ಪದೇ ಉಪಯೋಗ ಮಾಡಿಕೊಳ್ಳಬೇಕೆಂದು ತಿಳಿಸಿದರು.

Contact Your\'s Advertisement; 9902492681

ಕಲಬುರಗಿ ನಗರದ ನೈರ್ಮಲಿಕರಣಕ್ಕೆ ಹೆಚ್ಚು ಒತ್ತು ನೀಡುವುದು ಅಗತ್ಯವಿದ್ದು, ಸ್ವಚ್ಚ ನಗರವನ್ನಾಗಿಸಲು ಪೌರ ಕಾರ್ಮಿಕರು ಪಣ ತೊಡಬೇಕು. ಪೌರ ಕಾರ್ಮಿಕರಿಗೆ ಸಿಗಬೇಕಾದ ಎಲ್ಲ ಸೌಲಭ್ಯಗಳು ಪಾಲಿಕೆ ಹಾಗೂ ಸಕಾರದಿಂದ ಒದಗಿಸಲಾಗುವುದು ಎಂದು ಹೇಳಿದರು.

1 ಕಾಮೆಂಟ್

  1. ಹಿಂತಾ ಪ್ರಯತ್ನ ಮಾಡುವ ದಕ್ಷ ಅಧಿಕಾರಿಗಳಿಗೆ ಒಂದು ಸ್ಥಳದಲ್ಲಿ ಕೇಲವು ವರ್ಷಗಳ ಕಾಲ ಪ್ರಾಮಾಣಿಕ ಕೆಲಸ ಮಾಡುವ ಅವಕಾಶ ನೀಡಬೇಕು …. ಆಗ ಮಾತ್ರ ಅವರು ಹಾಕಿಕೊಂಡು ಯೋಚನೆಗಳು ಜಾರಿಗೆ ತರಲು ಸಾಧ್ಯವಾಗುತ್ತದೆ ಆದರೆ ಬಂದ ದಾರಿಗೆ ಸುಂಕ ವಿಲ್ಲದಂತೆ ಕೆಲವೇ ದಿನಗಳಲ್ಲಿ ವರ್ಗಾವಣೆ ಕೃಪೆ ….

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here