ಬಾಂಬೆ: ನಟ ಸಲ್ಮಾನ್ ಖಾನ್ ಮತ್ತು ಐಶ್ವರ್ಯಾ ರೈ ಸಂಬಂಧ ಬಗ್ಗೆ ಟ್ರೋಲ್ ಮಾಡಲಾಗಿದ್ದ ಪೋಸ್ಟ್ ನ್ನು ಶೇರ್ ಮಾಡಿ ಟೀಕೆಗೆ ಗುರಿಯಾಗಿದ್ದ ನಟ ವಿವೇಕ್ ಒಬೇರಾಯ್ ಕ್ಷಮೆ ಕೇಳಿದ್ದಾರೆ.
ದೇಶದಲ್ಲಿ ನಡೆಯುತ್ತಿರುವ ಲೋಕಸಭೆ ಚುನಾವಣೆ ಕುರಿತು ಪ್ರಸ್ತುತ ರಾಜಕೀಯ ಬೆಳವಣಿಗೆಯನ್ನು, ಸಲ್ಮಾನ್ ಖಾನ್ ಹಾಗೂ ಐಶ್ವರ್ಯಾ ರೈ ಸಂಬಂಧಕ್ಕೆ ಹೋಲಿಸಿ ಟ್ರೋಲ್ ಮಾಡಿದ್ದ ಫೋಟೋ ಶೇರ್ ಮಾಡಿದ್ದಕ್ಕೆ ವಿವೇಕ್ ಒಬೆರಾಯ್ ಭಾರಿ ಟೀಕೆಗೆ ಗುರಿಯಾಗಿದ್ದರು. ತಮ್ಮ ಟ್ವೀಟ್ಗೆ ತೀವ್ರ ಖಂಡನೆ ವ್ಯಕ್ತವಾದ ಹಿನ್ನೆಲೆ ವಿವೇಕ್ ಒಬೆರಾಯ್ ಆ ಫೋಟೋವನ್ನ ಡಿಲೀಟ್ ಮಾಡಿ ಕ್ಷಮೆ ಯಾಚಿಸಿದ್ದಾರೆ.
ಕೆಲವೊಮ್ಮೆ ಒಬ್ಬರಿಗೆ ಮೊದಲ ನೋಟದಲ್ಲಿ ತಮಾಷೆ ಎನ್ನಿಸುವ ವಿಷಯ ಮತ್ತೊಬ್ಬರಿಗೆ ಹಾಗೆ ಕಾಣಲ್ಲ. ನನ್ನ ಟ್ವೀಟ್ನಿಂದ ಒಬ್ಬ ಮಹಿಳೆಗೆ ಬೇಸರವಾಗಿದ್ದರೂ, ಕ್ಷಮಿಸಿ, ಟ್ವೀಟ್ ಡಿಲೀಟ್ ಮಾಡಿದ್ದೀನಿ ಎಂದು ಅವರು ಬರೆದುಕೊಂಡಿದ್ದಾರೆ.