ಕಲಬುರಗಿ: ಬಹುಜನ ಸಮಾಜ ಪಾರ್ಟಿಯ ಜಿಲ್ಲಾ ಸಮಿತಿಯನ್ನು ರದ್ದು ಪಡಿಸಲಾಗಿದೆ ಎಂದು ಬಹುಜನ ಸಮಾಜ ಪಾರ್ಟಿಯ ರಾಜ್ಯ ಪ್ರಧಾನ ಕಾರ್ಯದರ್ಶಿ ಮಹಾದೇವ ಬಿ. ಧನ್ನಿ ತಿಳಿಸಿದ್ದಾರೆ.
ಬಹುಜನ ಸಮಾಜ ಪಾರ್ಟಿ ಕರ್ನಾಟಕ ರಾಜ್ಯ ಘಟಕದ ಕೇಂದ್ರ ಕಛೇರಿಯ ಬೆಂಗಳೂರಿನಲ್ಲಿ ರಾಜ್ಯ ಸಮಿತಿಯ ಸಭೆಯನ್ನು ಕರೆಯಲಾಗಿತ್ತು. ಈ ಸಭೆಯಲ್ಲಿ ರಾಜ್ಯ ಸಮಿತಿಯ ಎಲ್ಲಾ ಪದಾಧಿಕಾರಿಗಳು ಹಾಗೂ ರಾಜ್ಯದ ಎಲ್ಲಾ ಜಿಲ್ಲಾ ಘಟಕದ ಪದಾಧಿಕಾರಿಗಳು ಪಾಲ್ಗೊಂಡಿದ್ದರು ಎಂದು ತಿಳಿಸಿದರು.
ರಾಜ್ಯ ಸಮಿತಿಯಲ್ಲಿ ಬಹುಜನ ಸಮಾಜ ಪಾರ್ಟಿಯ ಸಂಘಟನೆಯನ್ನು ಬಲಿಷ್ಠಗೊಳಿಸುವುದಕ್ಕಾಗಿ ಕೆಲವು ಮುಖ್ಯವಾದ ತಿರ್ಮಾನಗಳನ್ನು ತೆಗೆದು ಕೊಳ್ಳಲಾಯಿತು. ಮತ್ತು ಮುಂಬರುವಂತಹ ಗ್ರಾಮ ಪಂಚಾಯತ್ ಮತ್ತು ತಾಲೂಕ ಪಂಚಾಯತ್ ಚುನವಣೆಯನ್ನು ಗಮನದಲ್ಲಿ ಇಟ್ಟುಕೊಂಡು, ಬಹುಜನ ಸಮಾಜದ ಎಲ್ಲಾ ಸಮುದಾಯಗಳನ್ನು ಒಗ್ಗೂಡಿಸಿ ಬಹುಜನ ಸಮಾಜದ ಪಕ್ಷದಡಿಯಲ್ಲಿ ಎಸ್.ಸಿ.ಎಸ್.ಟಿ ಮತ್ತು ಒಬಿಸಿ ಹಾಗೂ ಧಾರ್ಮಿಕ ಅಲ್ಪಸಂಖ್ಯಾತರನ್ನು ಸಂಘಟಿಸಿ ಪಕ್ಷದ ಎಲ್ಲಾ ಸಮಿತಿಗಳಲ್ಲಿ ಅವರನ್ನು ಜವಾಬ್ದಾರಿಗಳ್ನಾಗಿ ನಾಯಕತ್ವ ಕೊಡುವುದರ ಜೊತೆಗೆ ಹಾಗೂ ಬಾಹಿಚಾರ ಸಂಬಂಧವನ್ನು ಬೆಸೆಯುವುದರ ಜೊತೆಗೆ ಮುಂಬರುವ ಚುನಾವಣೆಯನ್ನು ಎದುರಿಸುವುದರಗೋಸ್ಕರ್ ರಾಜ್ಯ ಸಮಿತಿಯ ತಿರ್ಮಾನಗಳನ್ನು ತೆಗೆದು ಕೊಳ್ಳಲಾಯಿತು ಎಂದರು.
ಕಲಬುರಗಿ ಜಿಲ್ಲೆಯ ಬಹುಜನ ಸಮಾಜ ಪಾರ್ಟಿಯ ಸಮಿತಿಗೆ ಸಭೆಯನ್ನು ಕರೆದು ಸಮಿತಿಯನ್ನು ಇನ್ನು ಪಕ್ಷವನ್ನು ಬಲಿಷ್ಠ ಮತ್ತು ಎಲ್ಲಾ ಸಮುದಾಯ ಪ್ರತಿನಿಧಿಗಳನ್ನು ಜಿಲ್ಲಾ ಸಮಿತಿಯಲ್ಲಿ ಪ್ರತಿನಿಧಿಸುವಂತೆ ನೋಡಿಕೊಳ್ಳುವುದಕೋಸ್ಕರ್ ರಾಜ್ಯ ಸಮಿತಿಯ ನಿರ್ದೇಶನದಂತೆ ಈಗಿರಿವ ಜಿಲ್ಲಾ ಸಮಿತಿಯನ್ನು ರಾಜ್ಯ ಪ್ರಧಾನ ಕಾರ್ಯದರ್ಶಿಗಳು ಹಾಗೂ ಕಲಬುರಗಿ ವಲಯ ಉಸ್ತುವಾರಿ ಮಹಾದೇವ ಬಿ.ಧನ್ನಿಯವರ ಸಮಿತಿಯನ್ನು ರದ್ದುಗೊಳಿಸಿ ಈ ಹಿಂದೆ ಇರುವ ಯಾವುದೇ ಪದಾಧಿಕಾರಿಗಳೂ ಪಕ್ಷದ ಸಂಘಟನೆ ಮತ್ತು ಯಾವುದೇ ಚಟುವಟಿಕೆಗಳಲ್ಲಿ ರಾಜ್ಯ ಪ್ರಧಾನ ಕಾಂiiದರ್ಶಿಗಳ ಗಮನಕ್ಕೆ ತರದೆ ಕಾರ್ಯಗಳು ಮಾಡುವಂತಿಲ್ಲ ಎಂದು ಸಭೆಯಲ್ಲಿ ತಿಳಿಸಲಾಯಿತು ಎಂದು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದರು.