8ಕ್ಕೆ ರಾಜ್ಯ ಬಂದ್ ಕರೆಗೆ ಸಹಕರಿಸಿ: ರೈತ ಮುಖಂಡ ಶರಣಪ್ಪ ಮರಳಿ

0
34

ರಾಯಚೂರು: ಎಪಿಎಂಸಿ ಕಾಯಿದೆ,ಭೂ ಸುಧಾರಣೆ ಕಾಯ್ದೆ ತಿದ್ದುಪಡಿ ವಿರೋಧಿಸಿ ದಿ.೨೮ ರಂದು ರಾಜ್ಯಬಂದ್ ಗೆ ಕರೆ ನೀಡಿದೆ ಎಂದು ಕರ್ನಾಟಕ ರಾಜ್ಯ ರೈತ ಸಂಘ (ಕೋಡಿಹಳ್ಳಿ)ದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಹೇಳಿದರು.

ಅವರಿಂದು ನಗರದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸರ್ಕಾರ ರೈತ ವಿರೋಧಿ ನೀತಿಗಳನ್ನು ಜಾರಿ ಮಾಡುತ್ತಿದೆ. ಈ ಹಿಂದಿನ ಸರಕಾರಗಳು ರೈತರಿಗೆ ಉಪಯೋಗವಾಗುವ ಕಾಯ್ದೆಯನ್ನು ಜಾರಿಗೆ ತಂದಿದ್ದರು. ಆದರೆ ಈಗಿನ ಸರ್ಕಾರ ರೈತ ವಿರೋಧಿ ಕಾಯ್ದೆ ಜಾರಿಗೆ ತರುವ ಮೂಲಕ ರೈತರನ್ನು ದಿವಾಳಿಯನ್ನಾಗಿ ಮಾಡುತ್ತಿದ್ದು ಎಂದು ಆರೋಪಿಸಿದರು.

Contact Your\'s Advertisement; 9902492681

ಲಾಕ್ ಡೌನ್ ವೇಳೆ ರೈತರು ಅನೇಕ ಕಷ್ಟ ಗಳನ್ನು ಅನುಭವಿಸಿದ್ದರು, ಸರ್ಕಾರ ನೆರವಿಗೆ ಬರಲಿಲ್ಲ, ಜನ ಊಟಕ್ಕೆ ಪರದಾಡಿದರು.ಇದೀಗ ಸರ್ಕಾರ ಮನ ಬಂದತೆ ಕಾಯ್ದೆ ಯನ್ನ ಜಾರಿಗೆ ತರಲು ಹೊರಟಿರುವುದನ್ನ ಖಂಡಿಸಿದರು.
ಸಾವಿರಾರು ಖಾಸಗಿ ಕಂಪನಿಗಳಿಗೆ ತಾಜ್ಯಕ್ಕೆ ಕಾಲಿಡುತ್ತಿದ್ದು,ಇದರಿಂದ ರೈತರು ದಿವಾಳಿಯನ್ನಾಗಿ ಮಾಡಲಿದ್ದಾರೆ ಎಂದರು.

ರೈತ ವಿರೋಧಿ, ಕಾರ್ಮಿಕ ವಿರೋಧಿ, ಜನ ವಿರೋಧಿ ಕಾಯ್ದೆಗಳಾದ ಎಪಿಎಂಸಿ ಕಾಯ್ದೆ ತಿದ್ದುಪಡಿ, ಭೂ ಸುದಾರಣೆ ತಿದ್ದುಪಡಿ ಅಗತ್ಯ ವಸ್ತುಗಳ ಕಾಯ್ದೆಗಳ ವಿರೋಧಿಸಲಾಗುವುದು. ಇದೇ 28 ರಂದು ರಾಜ್ಯ ಬಂದ್ ಕರೆ ನೀಡಿದೆ ಎಲ್ಲಾ ವರ್ತಕರು ಅಂಗಡಿಗಳ ಮಾಲೀಕರ ಸಂಘ ಸಂಸ್ಥೆಗಳು ಸಹಕರಿಸಬೇಕು ಎಂದರು.
ಈ ಸಂದರ್ಭದಲ್ಲಿ ಸಿಎಚ್ ರವಿಕುಮಾರ್ ಮಲ್ಲಿಕಾರ್ಜುನ ರೆಡ್ಡಿ ಗಂಗಪ್ಪ ಏಗನೂರು ವೆಂಕಟೇಶ, ನರಸಪ್ಪ, ಇತರರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here