ತಾಲೂಕಿನಾದ್ಯಂತ ಬಂದಾಗಿರುವ ಶುದ್ಧ ಕುಡಿಯುವ ನೀರಿನ ಘಟಕ ಆರಂಭಿಸಲು ಒತ್ತಾಯ

0
59

ಸುರಪುರ: ತಾಲೂಕಿನಾದ್ಯಂತ ಅನೇಕ ಗ್ರಾಮಗಳಲ್ಲಿ ಸರಕಾರ ಜನರಿಗೆ ಶುದ್ಧ ಕುಡಿಯುವ ನೀರು ಒದಗಿಸಲು ಘಟಕ ಮಂಜೂರು ಮಾಡಿದೆ ಆದರೆ ಕುಡಿಯುವ ನೀರು ಸರಬರಾಜು ವಿಭಾಗದ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ಕೆಟ್ಟು ನಿಂತಿರುವ ಘಟಕಗಳನ್ನು ದುರಸ್ಥಿಗೊಳಿಸದೆ ನಿರ್ಲಕ್ಷ್ಯ ತೋರಿದ್ದರ ಕುರಿತು ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ತಾಲೂಕಿನ ಲಕ್ಷ್ಮೀಪುರ ಮಂಗಳೂರು ಬೋನಾಳ ಬೈಚಬಾಳ ಚಿಕ್ಕನಹಳ್ಳಿ ಸೇರಿದಂತೆ ಅನೇಕ ಗ್ರಾಮಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳನ್ನು ನಿರ್ಮಿಸಲಾಗಿದೆ.ಆದರೆ ಈ ಘಟಕಗಳು ಕೆಟ್ಟು ನಿಂತು ವರ್ಷಗಳಾದರು ಇದುವರೆಗೆ ದುರಸ್ಥಿಗೊಳಿಸಲು ಅಧಿಕಾರಿಗಳು ಮನಸ್ಸು ಮಾಡುತ್ತಿಲ್ಲ.ಇದಿರಿಂದ ಜನರು ಕಲುಷಿತ ನೀರೆ ಗತಿ ಎಂಬಂತಾಗಿದ್ದಾರೆ.

Contact Your\'s Advertisement; 9902492681

ಘಕಗಳ ದುರಸ್ಥಿಗಾಗಿ ಅನೇಕ ಸಂಘ ಸಂಸ್ಥೆಗಳು ಜಿಲ್ಲಾ ಪಂಚಾಯತಿ ಇಂಜಿನಿಯರಿಂಗ್ ಕಚೇರಿ ಹಾಗು ತಾಲೂಕು ಪಂಚಾಯತಿ ಮುಂದೆ ಪ್ರತಿಭಟನೆ ಧರಣಿಯಂತಹ ಹೋರಾಟಗಳನ್ನು ನಡೆಸಿದರು.

ಪ್ರಯೋಜನೆಯಾಗಿಲ್ಲ.ಅಧಿಕಾರಿಗಳ ನಿರ್ಲಕ್ಷ್ಯ ಎಂದಿನಂತೆ ಮುಂದುವರೆದಿದೆ.ಇದರಿಂದ ತಾಲೂಕಿನ ಜನರು ಬೇಸತ್ತು ನಿರಂತರ ಹೋರಾಟದ ಹಾದಿ ಹಿಡಿಯುವಂತಾಗಿದೆ.
ಈ ಕುರಿತು ವೀರಶೈವ ಲಿಂಗಾಯತ ಯುವ ವೇದಿಕೆ ರಾಜ್ಯ ಸಂಚಾಲಕ ಚಂದ್ರಶೇಖರ ಡೊಣೂರ ಮಾತನಾಡಿ,ತಾಲೂಕಿನ ಲಕ್ಷ್ಮೀಪುರ ಗ್ರಾಮದಲ್ಲಿ ಶುಧ್ಧ ಕುಡಿಯುವ ನೀರಿನ ಘಟಕ ನಿರ್ಮಿಸಿ ಒಂದು ವರ್ಷವಾಗಿದೆ.

ಆದರೆ ಈ ಘಟಕಕ್ಕೆ ಇದುವರೆಗೆ ವಿದ್ಯೂತ್ ಸಂಪರ್ಕವನ್ನೆ ಕಲ್ಪಿಸಿಲ್ಲ,ಇದರಿಂದ ಗ್ರಾಮದಲ್ಲಿ ಹೆಸರಿಗೆ ಮಾತ್ರ ಶುದ್ಧ ಕುಡಿಯುವ ನೀರಿನ ಘಟಕ ನಿರ್ಮಾಣವಾಗಿದೆ.ಆದರೆ ಜನತೆಗೆ ಇದರ ಉಪಯೋಗವಿಲ್ಲದೆ ಸರಕಾರ ಹಣ ವ್ಯರ್ಥಗೊಳಿಸಿದಂತಾಗಿದೆ.ಕೂಡಲೆ ತಾಲೂಕು ಆಡಳಿತ ಎಚ್ಚೆತ್ತು ಎಲ್ಲಾ ಗ್ರಾಮಗಳಲ್ಲಿನ ಶುಧ್ಧ ಕುಡಿಯುವ ನೀರಿನ ಘಟಕಗಳನ್ನು ದುರಸ್ಥಿಗೊಳಿಸುವ ಮತ್ತು ಕಾರ್ಯಾಂಭಗೊಳಿಸುವತ್ತ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.

ತಾಲೂಕಿನ ಅನೇಕ ಗ್ರಾಮಗಳಲ್ಲಿ ಕೆಟ್ಟು ನಿಂತಿರುವ ಶುದ್ಧ ಕುಡಿಯುವ ನೀರಿನ ಘಟಕ ದುರಸ್ಥಿಗೊಳಿಸಬೇಕು ಇಲ್ಲವಾದಲ್ಲಿ ಇದಕ್ಕೆ ಸಂಬಂಧಿಸಿದ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಬೇರೆಯವರನ್ನು ನಿಯೋಜಿಸಬೇಕು ಇಲ್ಲವಾದಲ್ಲಿ ಸಾರ್ವಜನಿಕರೊಂದಿಗೆ ಹೋರಾಟ ನಡೆಸಲಾಗುವುದು. – ಚಂದ್ರಶೇಖರ ಡೊಣೂರ ವೀಲಿಂಯು ವೇದಿಕೆ ರಾಜ್ಯ ಸಂಚಾಲಕ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here