ಸುರಪುರ: ನಗರದ ಕಬಾಡಗೇರಾ ಖುರೇಶಿ ಮೊಹಲ್ಲಾದ ಮದ್ಯದಲ್ಲಿನ ಸಾವಜನಿಕ ಶೌಚಾಲಯದ ಬಳಿಯಲ್ಲಿ ಮೂರು ದಿನದ ನವಜಾತ ಗಂಡು ಶಿಶುವೊಂದು ಪತ್ತೆಯಾಗಿದೆ.
ಅನಾಥವಾಗಿದ್ದ ಶಿಶುವನ್ನು ನೋಡಿದ ಸ್ಥಳಿಯರು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಮಾಹಿತಿ ನೀಡಿದ್ದರಿಂದಾಗಿ,ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಅಧಿಕಾರಿ ಪ್ರಭಾಕರ ಕವಿತಾಳ ಇವರು ಮಕ್ಕಳ ರಕ್ಷಣಾ ಇಲಾಖೆಗೆ ತಿಳಿಸಿದ್ದರಿಂದಾಗಿ ಸ್ಥಳಕ್ಕೆ ಯಾದಗಿರಿ ಮಕ್ಕಳ ರಕ್ಷಣಾ ಅಧಿಕಾರಿ ಅಶೋಕ ರಾಜನ್ ದಶರಥ ನಾಯಕ ಮಹಿಳಾ ರಕ್ಷಕಿ ಅನಿತಾ ಹಡಪದ ಅವರು ಮಕ್ಕಳ ರಕ್ಷಣಾ ಘಟಕದ ಅಧೀಕ್ಷಕಿ ನಾಗಮ್ಮ ಹಿರೇಮಠ ಅವರೊಂದಿಗೆ ಸ್ಥಳಕ್ಕೆ ಬಂದು ಶಿಶುವನ್ನು ರಕ್ಷಿಸಿದ್ದಾರೆ.
ನಂತರ ಪೊಲೀಸ್ ಠಾಣೆಗೆ ಬಂದು ಇನ್ಸ್ಪೇಕ್ಟರ್ ಎಸ್.ಎಮ್.ಪಾಟೀಲ್ ಅವರಿಗೆ ವಿಷಯ ತಿಳಿಸಿ ದೂರು ನೀಡಿದ ನಂತರ ಮಗುವಿನ ಆರೋಗ್ಯ ರಕ್ಷಣೆಗಾಗಿ ಯದಗಿರಿ ಸರಕಾರಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ.ಈ ಕುರಿತು ಮಕ್ಕಳ ರಕ್ಷಣಾ ಅಧಿಕಾರಿ ಅಶೋಖ ರಾಜನ್ ಮಾಹಿತಿ ನೀಡಿ ಮಂಗಳವಾರ ಮಗುವನ್ನು ಕಲಬುರ್ಗಿಯ ಅಮೂಲ್ಯ ಶಿಶು ಗೃಹಕ್ಕೆ ಕಳುಹಿಸಿಕೊಡಲಾಗುವುದು ಎಂದು ತಿಳಿಸಿದ್ದಾರೆ.
ಸುರಪುರ ಠಾಣೆಯಲ್ಲಿ ದೂರು ದಾಖಲಿಸಿಕೊಳ್ಳಲಾಗಿದೆ.ಈ ಸಂದರ್ಭದಲ್ಲಿ ಅಂಗನವಾಡಿ ಮೇಲ್ವಿಚಾರಕಿ ಪದ್ಮಾ ನಾಯಕ ಇತರರಿದ್ದರು.