ಇತ್ತೀಚಿನ ದಿನಗಳಲ್ಲಿ ನಮ್ಮ ಎಲ್ಲಾ ಪಕ್ಷದ ರಾಜಕಾರಣಿಗಳು ಒಬ್ಬರಿಗೊಬ್ಬರು ಆರೋಪ ಪ್ರತ್ಯಾರೋಪ ಮಾಡುವದರಲ್ಲಿ, ರ‍್ಯಾಲಿ ,ಯಾತ್ರೆಗಳಲ್ಲೇ ಕಾಲಹರಣ ಮಾಡುತ್ತಿದ್ದಾರೆ. ಸತ್ತ ವ್ಯಕ್ತಿಗಳ ಮೇಲೆ ರಾಜಕಾರಣ ಮಾಡುವುದು. ಹತ್ತಾರು ಹಗರಣದಲ್ಲಿ ಬಾಗಿಯಾಗಿ ಜೈಲು ಹೋಗಿಬಂದ್ದು ನೋಡಿದರೆ ನಮ್ಮ ರಾಜಕಾರಣಿ ಮುಂಬರುವ ಚುನಾವಣೆಯಲ್ಲಿ ನಾಯಕರು ಹೇಗಿದ್ದರೆ ಚನ್ನಾಗಿರುತ್ತದೆ ಎಂದು ಅಲೋಚಿಸಬೇಕಿದೆ.
ಆತ ಸರಳ, ಸಜ್ಜನರಾಗಿರಬೇಕು ಮತ್ತು ಎಲ್ಲಾವರ್ಗದ ಜನಗಳ ಕಷ್ಟಗಳಿಗೆ ಸಕಾಲದಲ್ಲಿ ಸ್ಪಂದಿಸುವವರಾಗಿರಬೇಕು. ಜನಪರ ಚಿಂತಕರಾಗಿರಬೇಕು, ಕ್ಷೇತ್ರದ ಅಭಿವೃದ್ಧಿಗಾಗಿ ದುಡಿಯುವವರಾಗಿರಬೇಕು. ರಸ್ತೆ, ಶಿಕ್ಷಣ, ಆರೋಗ್ಯ, ಸ್ವಚ್ಛತೆ, ಕುಡಿಯುವ ನೀರು ಮೊದಲಾದ ಮೂಲಭೂತ ಸೌಕರ್ಯಗಳಿಗೆ ಒತ್ತು ಕೊಡುವವರಾಗಿರಬೇಕು. ಈ ಎಲ್ಲಾ ವಿಷಯಗಳಿಗೆ ಪ್ರಥಮ ಆಧ್ಯತೆ ಕೊಡುವವರಾಗಿದಬೇಕು.
ಜನರಸಮಸ್ಯೆಗಳನ್ನು ಶಾಶ್ವತ ಪರಿಹಾರ ಕಲ್ಪಿಸುವುದು, ಅಭಿವೃದ್ಧಿಗೆ ಪ್ರಥಮ ಆಧ್ಯತೆ ನೀಡುವವರಾಗಿರಬೇಕು ಜನಸಾಮಾನ್ಯರಿಗೆ ಸದಾ ನೆರವಿಗೆ ಸಿಗುವವರಾಗಿರಬೇಕು ತಮ್ಮ ಕ್ಷೇತ್ರದ ಸಂಪೂರ್ಣ ಕುಂದು ಕೊರತೆಗಳ ಬಗ್ಗೆ ಮಾಹಿತಿ ಉಳ್ಳವರಾಗಿರಬೇಕು ಅಧಿಕಾರಿಗಳೊಂದಿಗೆ ಉತ್ತಮ ಬಾಂಧವ್ಯ ವಂದಿದವರಾಗಿರಬೇಕು ಯಾವುದೇ ಅಪರಾಧ, ಹಗರಣ ಇನ್ನಿತರ ಯಾವುದೇ ಪ್ರಕರಣಗಳಲ್ಲಿ ಬಾಗಿಯಾಗಿರಬಾರದು ಮತ್ತು ಅಪರಾಧಿ ಕುಟುಂಬ ಹಿನ್ನಲೆಯುಳ್ಳವರಾಗಿರಬಾರದು.
ರಾಜಕಾರಣಿಯಾದವರು ತಮ್ಮ ನಡತೆ ಪ್ರಮಾಣ ಪತ್ರ ಹಾಗೂ ಹಗರಣ ಅಥವಾ ಲೋಪದೋಷಗಳು ಕಂಡು ಬಂದರೆ ಸ್ವಯಂ ರಾಜನಾಮೆ ನೀಡುವುದಾಗಿ ಒಂದು ದೃಢೀಕರಣ ಪತ್ರವನ್ನು ಚುನಾವಣಾ ಪೂರ್ವದಲ್ಲಿ ಕ್ಷೇತ್ರದ ಜನತೆಗೆ ಪ್ರತಿ ಒಬ್ಬ ಮತದಾರರಿಗೂ ಒಂದೊಂದು ದೃಢೀಕರಣ ಪತ್ರನಿಡುವುದರ ಮೂಲಕ ತಮ್ಮ ಅಧಿಕಾರವಧಿಯಲ್ಲಿ ಯಾವುದೆ ತಪ್ಪಗಳನ್ನು ಕಂಡುಬಂದ ತಕ್ಷಣ ಅಪರಾಧವೆಂದು ಸಾಬೀತು ಆದರೆ ತಾವು ನೀಡಿದ ದೃಢೀಕರಣ ರಾಜನಾಮೆ ಪತ್ರ ಒಪ್ಪುವ ವ್ಯಕ್ತಿಯಾಗಿರಬೇಕು. ತಮ್ಮ ಹುದ್ದೆಯನ್ನು ತ್ಯೇಜಿಸಬೇಕು. ಅಂತಹ ರಾಜಕಾರಣಿ ಇರಬೇಕಲ್ಲವೇ? ನೀವೇನಂತಿರಿ.
-ಸಾಯಿಕುಮಾರ ಇಜೇರಿ
8197742111