ಮರಾಠ ಅಭಿವೃಧ್ಧಿ ನಿಗಮ ವಿರೋಧಿಸಿ ಜಯಕರ್ನಾಟಕ ಪ್ರತಿಭಟನೆ

0
7

ಸುರಪುರ: ರಾಜ್ಯದಲ್ಲಿ ಮರಾಠ ಅಭಿವೃಧ್ಧಿ ನಿಗಮ ರಚನೆ ಮಾಡುವ ಮೂಲಕ ಮುಖ್ಯಮಂತ್ರಿ ಯಡಿಯೂರಪ್ಪನವರು ರಾಜ್ಯದಲ್ಲಿ ಬೆಂಕಿ ಹಚ್ಚುವ ಕೆಲಸ ಮಾಡುತ್ತಿದ್ದಾರೆ ಎಂದು ಜಯಕರ್ನಾಟಕ ಸಂಘಟನೆ ತಾಲೂಕು ಅಧ್ಯಕ್ಷ ರವಿ ನಾಯಕ ಬೈರಿಮಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ನಗರದ ತಹಸೀಲ್ ಕಚೇರಿ ಮುಂದೆ ಹಮ್ಮಿಕೊಂಡಿದ್ದ ಪ್ರತಿಭಟನೆಯ ನೇತೃತ್ವವಹಿಸಿ ಮಾತನಾಡಿ,ರಾಜ್ಯದಲ್ಲಿನ ರೈತರು ಕಾರ್ಮಿಕರು ಕೆಲಸವಿಲ್ಲದೆ ಪರದಾಡುತ್ತಿದ್ದಾರೆ,ಅವರ ಬಗ್ಗೆ ಗಮನ ಹರಿಸದೆ ಮುಂದೆ ನಡೆಯುವ ಚುನಾವಣೆಯ ಓಟಿಗಾಗಿ ಮರಾಠ ಅಭಿವೃಧ್ಧಿ ನಿಗಮ ರಚನೆ ಮಾಡಿ ೫೦ ಕೋಟಿ ಅನುದಾನ ನೀಡುವ ಮೂಲಕ ಕನ್ನಡಿಗರನ್ನು ಅಪಮಾನಿಸುವ ಕೆಲಸ ಮಾಡುತ್ತಿದ್ದಾರೆ.ಕೂಡಲೆ ನಿಗಮವನ್ನು ರದ್ದು ಮಾಡಬೇಕು ಮತ್ತು ಕನ್ನಡಪರ ಹೋರಾಟಗಾರರ ಬಗ್ಗೆ ಕೇವಲವಾಗಿ ಮಾತನಾಡುವ ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ ಅವರ ಶಾಸಕ ಸ್ಥಾನದಿಂದ ಅನರ್ಹಗೊಳಿಸಿ ಪಕ್ಷದಿಂದ ಹೊರ ಹಾಕಬೇಕೆಂದು ಆಗ್ರಹಿಸಿದರು.

Contact Your\'s Advertisement; 9902492681

ಇದಕ್ಕು ಮುನ್ನ ತಹಸೀಲ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿ ಸರಕಾರದ ವಿರುಧ್ಧ ಮತ್ತು ಶಾಸಕ ಬಸನಗೌಡ ಯತ್ನಾಳ ವಿರುಧ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.ನಂತರ ಮುಖ್ಯಮಂತ್ರಿಗಳಿಗೆ ಬರೆದ ಮನವಿಯನ್ನು ತಸಹೀಲ್ದಾರ ಸುಬ್ಬಣ್ಣ ಜಮಖಂಡಿ ಅವರ ಮೂಲಕ ಸಲ್ಲಿಸಿದರು.

ಈ ಸಂದರ್ಭದಲ್ಲಿ ಸಂಘಟನೆ ನಗರ ಘಟಕದ ಅಧ್ಯಕ್ಷ ಮಲ್ಲಪ್ಪ ನಾಯಕ ತಾಲೂಕು ಕಾರ್ಯಾಧ್ಯಕ್ಷ ಶರಣಪ್ಪ ಬೈರಿಮಡ್ಡಿ ಯಲ್ಲಪ್ಪ ನಾಯಕ ಕಲ್ಲೋಡಿ ಹಣಮಂತ್ರಾಯ ಮೇಟಿಗೌಡ ಬಸವರಾಜ ಪಾಟೀಲ ಶಖಾಪುರ ದೇದು ನಾಯಕ ಜಾಲಿಬೆಂಚಿ ರಾಘವೇಂದ್ರ ಗೋಗಿಕರ್ ಮೌನೇಶ ದಳಪತಿ ಬಸವರಾಜ ಬಿಲಕಲ್ ನಬೀಶಾಬಸವರಾಜ ಮಲ್ಲಾ ವಾಸುದೇವ ನಾಯಕ ಬಸವರಾಜ ಕವಡಿಮಟ್ಟಿ ಖಾಜಾ ಹುಸೇನ ರಂಗಂಪೇಟೆ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here