ಕಲಬುರಗಿ: ಕೋವಿಡ್ ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ದಲಿತ ಸಮುದಾಯಕ್ಕೆ ಕೋವಿಡ್ ಪರಿಹಾರ ವಿಶೇಷ ಪ್ಯಾಕೇಜ್ ಘೋಷಣೆ ಮಾಡುವಂತೆ ಆಗ್ರಹಿಸಿ ದಲಿತ ಹಕ್ಕುಗಳ ಸಮಿತಿ ನೇತೃತ್ವದಲ್ಲಿ ನಗರದಲ್ಲಿ ತಮ್ಮ ಮನೆ ಮುಂದೆ ಪ್ರತಿ ಭಟನೆ ನಡೆಸಲಾಯಿತು.
ದೇಶದಲ್ಲಿ ಕೋವಿಡ್ ಎರಡನೇ ಅಲೆ, ಮೂರನೇ ಅಲೆ ಮುಂದುವರೆದಿದ್ದು, ಇದರಿಂದ ದಲಿತ ಸಮುದಾಯ ಆಹಾರ, ಆರೋಗ್ಯ ಮತ್ತು ಉದ್ಯೋಗವಿಲ್ಲದೆ ಸಂಕಷ್ಟ ಎದುರಿ ಸುವಂತಾಗಿದೆ. ಈ ಕಾರಣಕ್ಕಾಗಿ ಸರ್ಕಾರ ಬಿಪಿಎ ಲ್ ಕಾರ್ಡ್ ಹೊಂದಿರುವ ದಲಿತರಿಗೆ ಮತ್ತು ಇತರೆ ಬಡವರಿಗೆ ರೂ.೧೦ ಸಾವಿರ ಪರಿಹಾರವನ್ನು ತಕ್ಷಣವೇ ನೀಡ ಬೇಕು, ೧೦ ಕೆ.ಜಿ.ಅಕ್ಕಿ ಜೊತೆ ಅಗತ್ಯ ವಸ್ತುಗಳನ್ನು ವಿತರಿಸಬೇಕು, ದಲಿತ ವಿದ್ಯಾರ್ಥಿಗಳಿಗೆ ನೀಡ ಬೇಕಿದ್ದ ವಿದ್ಯಾರ್ಥಿ ವೇತನ ಮತ್ತು ಹಾ ಸ್ಟೆ ಲ್ ವಿದ್ಯಾರ್ಥಿಗಳ ಊಟಕ್ಕೆ ನೀಡುತ್ತಿದ್ದ ಹಣವನ್ನು ಲೆಕ್ಕ ಹಾಕಿ ನೀಡ ಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಈ ಪ್ರತಿಭಟನೆಯಲ್ಲಿ ಸುಧಾಮ ಧನ್ನಿ, ಗೌತಮ ಚಂದನ, ಮೀನಾಕ್ಷಿ ಧನ್ನಿ, ಪ್ರಿಯಾ ಚಂದನ, ತುಸೀಲ್, ರೋಹಿತ, ಕೃಷ್ಣ, ಬೃಂದಾ ಇದ್ದರು.