ವಿಕಲಚೇತನ ಉದ್ಯೋಗಸ್ಥ ಮಹಿಳೆಯರಿಂದ ವಸತಿ ನಿಲಯ ಪ್ರವೇಶಕ್ಕಾಗಿ ಅರ್ಜಿ ಆಹ್ವಾನ

0
14

ಕಲಬುರಗಿ: ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯ ಅಧೀನದಲ್ಲಿ ಹಾಗೂ ಕಲಬುರಗಿ ಜಿಲ್ಲೆಯ ಮಹಾದೇವಿ ತಾಯಿ ಮಹಿಳಾ ವಿದ್ಯಾವರ್ಧಕ ಸಂಘದ ಅಡಿಯಲ್ಲಿ 2021-22ನೇ ಸಾಲಿಗೆ ನಡೆಸಲಾಗುತ್ತಿರುವ ವಿಕಲಚೇತನ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಯರ ವಸತಿ ನಿಲಯಕ್ಕೆ ಪ್ರವೇಶ ಪ್ರಕ್ರಿಯೆಯು ಪ್ರಾರಂಭವಾಗಿದೆ ಎಂದು ಕಲಬುರಗಿ ಜಿಲ್ಲಾ ವಿಕಲಚೇತನ ಅಧಿಕಾರಿಗಳಾದ ಸಾಧಿಕ್ ಹುಸೇನ್ ಖಾನ್ ಅವರು ತಿಳಿಸಿದ್ದಾರೆ.

ಈ ವಸತಿ ನಿಲಯದಲ್ಲಿ ವಿಕಲಚೇತನ ವಿದ್ಯಾರ್ಥಿನಿಯರಿಗೆ ಉಚಿತವಾಗಿ ಗುಣಮಟ್ಟದ ಊಟ, ವಸತಿ, ಆರೋಗ್ಯ ಸೌಲಭ್ಯ ದೊರೆಯಲಿದೆ. ವಸತಿ ನಿಲಯ ಪ್ರವೇಶಕ್ಕಾಗಿ ಅರ್ಹ ವಿಕಲಚೇತನ ಉದ್ಯೋಗಸ್ಥ ಮಹಿಳೆಯರು ಹಾಗೂ ವಿದ್ಯಾರ್ಥಿನಿಯರು ಕಲಬುರಗಿ ಐವಾನ್ ಶಾಹಿಯ ಪಿ.ಡಿ.ಎ. ಇಂಜಿನಿಯರಿಂಗ್ ಕಾಲೇಜ ಹತ್ತಿರದ ಮನೀಶ ಬೇಕರಿ, ಗ್ರಾಮೀಣ ಶಿಶು ಅಭಿವೃದ್ದಿ ಯೋಜನಾಧಿಕಾರಿ ಕಚೇರಿ ಪಕ್ಕದಲ್ಲಿರುವ ವಿಕಚೇತನ ಉದ್ಯೋಗಸ್ಥ ಮಹಿಳೆಯರ ಹಾಗೂ ವಿದ್ಯಾರ್ಥಿನಿಲಯ ವಸತಿ ನಿಲಯಕ್ಕೆ ಹಾಗೂ ಮೊಬೈಲ್ ಸಂಖ್ಯೆ 9535775700, 9353357502 ಗಳಿಗೆ ಸಂಪರ್ಕಿಸಲು ಕೋರಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here