ಶಹಾಬಾದ: ನಿರಂತರ ಮಳೆ ಜನಜೀವನ ಅಸ್ಥವ್ಯಸ್ಥ

0
28

ಶಹಾಬಾದ: ತಾಲೂಕಿನಲ್ಲಿ ಶುಕ್ರವಾರ ಮಧ್ಯಾನದಿಂದ ಪ್ರಾರಂಭವಾದ ಮಳೆ ರಾತ್ರಿಯೆಲ್ಲಾ ಸುರಿದ ಪರಿಣಾಮ ರಸ್ತೆಯ ಮೇಲೆಲ್ಲಾ ನೀರು ಆವರಿಸಿ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಯಿತು.

ನಗರದ ಬಸವೇಶ್ವರ ವೃತ್ತದಿಂದ ಶಾಸ್ತ್ರಿ ವೃತ್ತದವರೆಗಿನ ರಸ್ತೆ ಸಂಪೂರ್ಣ ಜಲಾವೃತಗೊಂಡು ಸಂಚಾರಕ್ಕೆ ತೊಂದರೆಯಾಯಿತು.ಅಲ್ಲದೇ ನಗರದ ಕೆಲವು ಪ್ರದೇಶಗಳಲ್ಲಿ ಚರಂಡಿ ತುಂಬಿಕೊಂಡು ರಸ್ತೆಯ ಮೇಲೆ ನೀರು ಹರಿದ ಪರಿಣಾಮ ಪ್ಲಾಸ್ಟಿಕ್, ಕಸ-ಕಡ್ಡಿ ರಸ್ತೆಯ ಆವರಿಸಿಕೊಂಡಿತು. ನಗರದ ನಿಜಾಮ ಬಜಾರ ಪ್ರದೇಶದಲ್ಲಿ ಹಾಗೂ ನಗರಸಭೆಯ ವ್ಯಾಪ್ತಿಯ ಟೀಚರ್ ಕಾಲೋನಿಯಲ್ಲಿ ಚರಂಡಿ ನಿರ್ಮಾಣವಾಗದಿರುವುದರಿಂದ ಮಳೆ ನೀರು ಸಂಪೂರ್ಣ ಬಡಾವಣೆಯ ಮನೆಯ ಸುತ್ತಮುತ್ತಲಿನ ಪ್ರದೇಶದಲ್ಲಿ ಜಲಾವೃತಗೊಂಡು ಸಾರ್ವಜನಿಕರು ಮನೆಯಿಂದ ಹೊರಬಾರದಂತಾಯಿತು.

Contact Your\'s Advertisement; 9902492681

ಇನ್ನು ಕೆಲವು ಪ್ರದೇಶಗಳಲ್ಲಿ ಗಿಡ ಮರಗಳು ಬಿದ್ದಿರುವುದು ಕಂಡು ಬಂದಿತು. ನಗರದ ಹನುಮಾನ ನಗರದ ಬಾಲಕರ ವಸತಿ ನಿಲಯದ ಮುಂಭಾಗದಲ್ಲಿ ಸುಮಾರು ಎರಡು ವರ್ಷಗಳಿಂದ ಚರಂಡಿ ನಿರ್ಮಾಣ ಮಾಡುತ್ತೆವೆ ಎಂದು ತಗ್ಗು ತೋಡಿ ಕಾಮಗಾರಿ ಮಾಡದೇ ಹೋಗಿದ್ದಾರೆ.ಅಲ್ಲದೇ ಇನ್ನೊಂದು ಬದಿಯಲ್ಲಿ ಕಳಪೆ ಹಾಗೂ ಅವೈಜ್ಞಾನಿಕ ಚರಂಡಿ ನಿರ್ಮಾಣ ಮಾಡಿರುವುದರಿಂದ ರಸ್ತೆಯ ಮೇಲೆ ನೀರು ನಿಲ್ಲುವಂತಾಗಿದೆ. ನಗರದ ಮುಖ್ಯ ರಸ್ತೆ ಸಂಪೂರ್ಣ ಆವರಿಸಿಕೊಂಡು ಚರಂಡಿ ನೀರು ರಸ್ತೆಯ ಮೇಲೆ ಹರಿದಾಡುತ್ತಿರುವುದರಿಂದ ನಗರಸಭೆಯ ಅಧಿಕಾರಿಗಳಿಗೆ ಸಾರ್ವಜನಿಕರು ಹಿಡಿಶಾಪ ಹಾಕುತ್ತಿದ್ದಾರೆ.

ಮಳೆ ಬಂದಾಗಲೊಮ್ಮೆ ನಗರಸಭೆಯ ವ್ಯಾಪ್ತಿಯ ಎಲ್ಲಾ ಚರಂಡಿಗಳು ತುಂಬಿಕೊಂಡು ಹರಿದು ನಿಜಾಮ ಬಜಾರದ ರೇಲ್ವೆ ಕೆಳ ಸೇತುವೆ ಮೂಲಕ ಹಾದು ಹೋಗುವ ರಸ್ತೆ ಸಂಪೂರ್ಣ ನೀರು ಆವರಿಸಿಕೊಂಡು ಗೋಳಾ(ಕೆ) ಗ್ರಾಮಕ್ಕೆ ಹೋಗುವ ಜನರ ಸಂಚಾರಕ್ಕೆ ತೊಂದರೆಯಾಗುತ್ತಿದೆ.ಈ ಬಗ್ಗೆ ಹಲವಾರು ವರ್ಷಗಳಿಂದ ಅಧಿಕಾರಿಗಳಿಗೆ ತಿಳಿಸಿಲಾಗಿದೆ.ಆದರೆ ಪರಿಹಾರ ಮಾತ್ರ ಶುನ್ಯವಾಗಿದೆ.ಕೂಡಲೇ ಸಾರ್ವಜನಿಕರ ಸಂಚಾರಕ್ಕೆ ತೊಂದರೆಯಾಗದಂತೆ ವೈಜ್ಷಾನಿಕ ಚರಂಡಿ ನಿರ್ಮಿಸಿ ನೀರು ಸೇತುವೆ ಹತ್ತಿರ ನಿಲ್ಲದಂತೆ ಕ್ರಮ ಕೈಗೊಳ್ಳಬೇಕೆಂಬುದು ಗ್ರಾಮಸ್ಥರ ಆಗ್ರಹವಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here