ವಿವಿಧ ಬೇಡಿಕೆಗಳ ಈಡೇರಿಸಲು ಸಾಮೂಹಿಕ ಸಂಘಟನೆಗಳ ಪ್ರತಿಭಟನೆ

0
12

ಸುರಪುರ: ವಿವಿಧ ಬೇಡಿಕೆಗಳನ್ನು ಈಡೇರಿಸಲು ಆಗ್ರಹಿಸಿ ಸಾಮೂಹಿಕ ಸಂಘಟನೆಗಳಿಂದ ಪ್ರತಿಭಟನೆಯನ್ನು ನಡೆಸಲಾಯಿತು.ನಗರದ ಮಹಾತ್ಮ ಗಾಂಧೀ ವೃತ್ತದಲ್ಲಿ ಸೋಮವಾರ ಪ್ರತಿಭಟನೆ ನಡೆಸಿದ ವಿವಿಧ ಸಂಘಟನೆಗಳಾದ ಸಿಐಟಿಯು,ಕರ್ನಾಟಕ ಪ್ರಾಂತ ರೈತ ಸಂಘ,ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ ಸಂಘ ಹಾಗು ದಲಿತ ಹಕ್ಕುಗಳ ಸಮಿತಿ ಇವರುಗಳ ಸಹಭಾಗಿತ್ವದಲ್ಲಿ ಪ್ರತಿಭಟನೆ ನಡೆಸಿ ಸರಕಾರಗಳ ವಿರುದ್ಧ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು, ಆಗಸ್ಟ್ ೯ ಐತಿಹಾಸಿಕ ಕ್ವಿಟ್ ಇಂಡಿಯಾ ಚಳವಳಿಯ ಸವಿನೆನಪಿನ ದಿನವಾಗಿದೆ.ಅದರ ಅಂಗವಾಗಿ ಇಂದು ದೇಶಾದ್ಯಂತ ಕೃಷಿ ಕೂಲಿ ಕಾರ್ಮಿಕರು ಒಂದಾಗಿ ಹೋರಾಟ ನಡೆಸಿ ಮನವಿ ಸಲ್ಲಿಸಲಾಗುತ್ತಿದೆ ಎಂದರು.ಅಲ್ಲದೆ ನಮ್ಮ ವಿವಿಧ ಬೇಡಿಕೆಗಳಾದ ಕೇಂದ್ರ ಸರಕಾರ ಕೃಷಿ ಮತ್ತು ವಿದ್ಯುತ್ ಜನವಿರೋಧಿ ಕಾನೂನುಗಳನ್ನು ಕೈಬಿಡಬೇಕು,ರೈತರ ಎಲ್ಲಾ ಬೆಳೆಗಳಿಗೂ ಖಾತರಿ ಖರೀದಿಯೊಂದಿಗೆ ಸಮಗ್ರ ಉತ್ಪಾದನಾ ವೆಚ್ಚ ಮತ್ತು ಶೇ ೫೦ ರ ಪ್ರಕಾರ ಕನಿಷ್ಠ ಬೆಂಬಲ ಬೆಲೆ ಖಾತರಿಯಾಗಿ ದೊರೆಯುವಂತೆ ಕಾಯ್ದೆ ಮಾಡುವ ಜೊತೆಗೆ ಋಣಮುಕ್ತ ಕಾಯ್ದೆ ಅಂಗೀಕರಿಸಬೇಕು.

Contact Your\'s Advertisement; 9902492681

ಭೂಸುಧಾರಣ ಕಾಯ್ದೆಯನ್ನು ಕೈಬಿಡಬೇಕು ಮತ್ತು ಭೂ ಸಾಗುವಳಿ ಮಾಡುವವರಿಗೆ ಸರಕಾರ ಭೂ ಸಾಗುವಳಿ ಚೀಟಿ ನೀಡಬೇಕು. ರಾಜ್ಯದಲ್ಲಿನ ನಿವೇಶನ ರಹಿತರಿಗೆ ನಿವೇಶನ ನೀಡಲು ಸಮಗ್ರ ಯೋಜನೆ ಜಾರಿಗೊಳಿಸಬೇಕು.ರಾಜ್ಯದ ಭೂ ಸುಧಾರಣಾ ಕಾಯ್ದೆ,ಎಪಿಎಮ್‌ಸಿ ಕಾಯ್ದೆ ಹಾಗು ಜಾನುವಾರು ಹತ್ಯಾ ಕಾಯಿದೆಗಳ ಜನವಿರೋಧಿ ತಿದ್ದುಪಡಿಯನ್ನು ವಾಪಸ್ಸು ಪಡೆಯಬೇಕು.ಪೆಟ್ರೋಲ್ ಡಿಸೇಲ್ ಅಡುಗೆ ಅನಿಲ ಖಾದ್ಯ ತೈಲದ ಬೆಲೆ ಏರಿಕೆಯನ್ನು ನಿವಾರಿಸಬೇಕು ಎನ್ನುವುದು ಸೇರಿದಂತೆ ೧೩ ಬೇಡಿಕೆಗಳನ್ನು ಸಲ್ಲಿಸಿದರು.

ಈ ಸಂದರ್ಭದಲ್ಲಿ ಪ್ರತಿಭಟನಾ ಸ್ಥಳಕ್ಕೆ ಶಾಸಕ ರಾಜುಗೌಡ ಆಗಮಿಸಿ ಪ್ರತಿಭಟನಾಕಾರರ ಮನವಿಯನ್ನು ಆಲಿಸಿ ನಂತರ ಮಾತನಾಡಿ,ತಾವೆಲ್ಲರು ಬಿಸಿಲಿನಲ್ಲಿ ಕುಳಿತು ಹೋರಾಟ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ.ಆದ್ದರಿಂದ ತಮ್ಮೆಲ್ಲ ಬೇಡಿಕೆಗಳನ್ನು ಆಲಿಸಿದ್ದು ಸ್ಥಳಿಯವಾಗಿ ಪರಿಹರಿಸಲು ಸಾಧ್ಯವಾದವುಗಳನ್ನು ಪರಿಹರಿಸಲು ಪ್ರಯತ್ನಿಸುವೆ ಹಾಗು ರಾಜ್ಯ ಸರಕಾರಕ್ಕೆ ಸಲ್ಲಿಸಿದ ಬೇಡಿಕೆಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ತರುವುದಾಗಿ ಭರವಸೆ ನೀಡಿದರು.

ನಂತರ ಪ್ರಧಾನ ಮಂತ್ರಿಗಳಿಗೆ ಬರೆದ ಮನವಿಯನ್ನು ಸ್ವೀಕರಿಸಿದರು,ಈ ಸಂದರ್ಭದಲ್ಲಿ ತಹಸೀಲ್ದಾರ್ ಸುಬ್ಬಣ್ಣ ಜಮಖಂಡಿ ಜೊತೆಗಿದ್ದರು.ಪ್ರತಿಭಟನೆಯಲ್ಲಿ ಸುರೇಖಾ ಕುಲಕರ್ಣಿ,ಬಸಮ್ಮ ಆಲ್ಹಾಳ,ರಾಧಾ ಲಕ್ಷ್ಮೀಪುರ,ಶಹಾಜಾದಿ ಬೇಗಂ,ಸೌಭಾಗ್ಯ ಮಾಲಗತ್ತಿ,ಬಸವರಾಜ ನಾಟೆಕಾರ್,ಪ್ರಕಾಶ ಆಲ್ಹಾಳ,ಮರೆಪ್ಪ ಕಕ್ಕೇರಿ,ಶರಣು ಹಸನಾಪುರ,ಶರಣಬಸವ ಜಂಬಲದಿನ್ನಿ,ಧರ್ಮಣ್ಣ ದೊರೆ,ರಾಮಯ್ಯ ಬೋವಿ,ಖಾಜಾಸಾಬ ದಳಪತಿ,ಸಿದ್ದಮ್ಮ ಬೋನ್ಹಾಳ,ಮುತ್ತಮ್ಮ ಅಮ್ಮಾಪುರ ಸೇರಿದಂತೆ ನೂರಾರು ಜನರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here