ಸಚಿವ ಮುರುಗೇಶ ನಿರಾಣಿಯವರಿಂದ ಸಮಿತಿಯ ಮುಖಂಡರಿಗೆ ಸ್ಪಷ್ಟೀಕರಣ

0
41

ಕಲಬುರಗಿ :ಕಲ್ಯಾಣಕರ್ನಾಟಕಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿಯವರ ನೇತೃತ್ವದಲ್ಲಿ ಇಂದು ಜಿಲ್ಲಾಉಸ್ತುವಾರಿ ಸಚಿವರಾದ ಮುರುಗೇಶ ನಿರಾಣಿಯವರಿಗೆ ಭೇಟಿಯಾಗಿ ಬಾಗಲಕೋಟೆಯಲ್ಲಿ ಕಲಬುರಗಿಜನರು ನೀರಾವರಿಕ್ಷೇತ್ರದಲ್ಲಿ ಸೋಮಾರಿಗಳು ಎಂಬ ರೀತಿಯಲ್ಲಿ ಹೇಳಿಕೆ ನೀಡಿದ್ದರು.

ಈ ವಿಷಯಕ್ಕೆ ಸಂಬಂಧಿಸಿ ಇಂದುಅವರನ್ನು ಸ್ಪಷ್ಟೀಕರಣ ಕೇಳಿದಾಗ ತಾವು ಮಾತನಾಡುವಾಗ ಆ ರೀತಿಯ ಶಬ್ದ ಬಳಕೆಯಾಗಿದ್ದು, ನನ್ನ ಮನಸ್ಸಿಗೆ ಬಹಳ ನೋವಾಗಿದೆ. ನನ್ನಉದ್ದೇಶ ಕಲಬುರಗಿ ಮತ್ತು ಕಲಬುರಗಿರೈತರ ಹಾಗೂ ಇಲ್ಲಿಯ ನೀರಾವರಿ ಯೋಜನೆಗಳ ಅಭಿವೃದ್ಧಿಯದೃಷ್ಟಿಕೋನದಿಂದ ಕಾಳಜಿ ವಹಿಸಿ ಮಾತನಾಡಿರುವೆ.

Contact Your\'s Advertisement; 9902492681

ಇದರಿಂದಕಲಬುರಗಿ ಮಹಾಜನತೆಗೆ ನೋವಾಗಿದ್ದು,ಇದಕ್ಕೆನಾನು ವಿಶಾದ ವ್ಯಕ್ತಪಡಿಸುತ್ತೇನೆ. ಅಷ್ಟೇ ಅಲ್ಲದೇ ಈ ವಿಷಯ ಸಾರ್ವಜನಿಕ ವಿಷಯವಾಗಿರುವುದರಿಂದ ನಾನು ಯಾವುದೇ ಪ್ರತಿಷ್ಠೆಗೆ ಒಳಗಾಗದೆ ಕಲಬುರಗಿಜನಮಾನಸಕ್ಕೆಕ್ಷಮೆಯಾಚನೆಕೇಳಲು ಸಹ ನನಗೆ ಯಾವುದೇರೀತಿಯಸ್ವಾಭಿಮಾನದ ಪ್ರತಿಷ್ಟೆಇಲ್ಲವೆಂದುಸ್ಪಷ್ಟೀಕರಣ ನೀಡಿದರು.

ಇದೇ ಸಂದರ್ಭದಲ್ಲಿಅವರು ಮಾತನಾಡಿ ಕಲಬುರಗಿಜಿಲ್ಲೆಯರಚನಾತ್ಮಕ ಪ್ರಗತಿಯ ಬಗ್ಗೆ ಸಮಿತಿ ಬರುವ ದಿನಗಳಲ್ಲಿ ಹಮ್ಮಿಕೊಳ್ಳಲು ನಿರ್ಧರಿಸಿರುವ ವಿಚಾರ ಸಂಕಿರಣಕಾರ್ಯಕ್ರಮದಲ್ಲಿ ಭಾಗ ವಹಿಸಲು ಆದಷ್ಟು ಶೀಘ್ರ ದಿನ ನೀಡುವುದಾಗಿ ಭರವಸೆ ನೀಡಿದರು.

ಈ ಸಂದರ್ಭದಲ್ಲಿ ಮುಖಂಡರಾದ ಸಿದ್ಧಾರೆಡ್ಡಿ ಬಲಕಲ್, ಜ್ಞಾನಮಿತ್ರ ಸ್ಯಾಮ್ಯೂವೆಲ್, ಸಾಲೋಮನ ದಿವಾಕರ, ಸುನೀಲಕುಮಾರಎಚ್. ಕೇದಾರನಾಥ, ಮಲ್ಲಿಕಾರ್ಜುನ, ಶರಣಪ್ಪ ಸೇರಿದಂತೆಅನೇಕರು ಉಪಸ್ಥಿತರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here