ಮಾಚಗುಂಡಾಳ ಗ್ರಾಮದ ಅನಾರೋಗ್ಯ ಪೀಡಿತರಿಗೆ ಮಾಜಿ ಶಾಸಕ ಆರ್.ವಿ.ನಾಯಕ ಭೇಟಿ

0
5

ಸುರಪುರ: ತಾಲೂಕಿನ ಮಾಚಗುಂಡಾಳ ಗ್ರಾಮದಲ್ಲಿ ಕುಡಿಯುವ ನೀರಿನ ಸರಬರಾಜು ಮಾಡುವ ಟ್ಯಾಂಕ್‌ನ್ನು ಸ್ವಚ್ಚಗೋಳಿಸದ ಕಾರಣ ಕುಡಿಯುವ ನೀರು ಕಲುಶಿತಗೊಂಡು ಗ್ರಾಮದಲ್ಲಿನ ಸುಮಾರು ೨೦೦ರಕ್ಕೂ ಹೆಚ್ಚು ಜನರು ವಾಂತಿ, ಬೆದಿಯಿಂದ ನರಳಿ ಸುರಪುರ ನಗರದ ಸಾರ್ವಜನಿಕ ಆಸ್ಪತ್ರೇಯಲ್ಲಿ ಚೀಕಿತ್ಸೆ ಪಡೆಯುತ್ತಿದ್ದಾರೆ.

ಈ ಸುದ್ದಿ ತಿಳಿದ ತಕ್ಷಣ ಮಾಜಿ ಶಾಸಕರಾದ ರಾಜಾ ವೆಂಟಕಪ್ಪ ನಾಯಕರವರು ಆಸ್ಪತ್ರೇಗೆ ಭೇಟಿ ನೀಡಿ ರೋಗಿಗಳ ಆರೋಗ್ಯ ವಿಚಾರಿಸಿದರು, ಇದೆ ಸಮಯದಲ್ಲಿ ತಾಲ್ಲೂಕು ವೈಧ್ಯಾಧಿಕಾರಿಗಳಾದ ಡಾ. ಆರ್.ವಿ.ನಾಯಕ ಮತ್ತು ಡಾ. ಓಂಪ್ರಕಾಶ ಅಂಬುರೇ ಅವರ ಜೊತೆ ರೋಗಿಗಳ ಯೋಗ ಕ್ಷೇಮ ಮತ್ತು ಆಸ್ಪತ್ರೇಯಲ್ಲಿನ ಔಷದಿಯ ಸೌಲಭ್ಯಗಳ ಬಗ್ಗೆ ಚರ್ಚಿಸಿ ಸೌಲಭ್ಯಗಳ ಕೋರತೆ ಇದ್ದಲ್ಲಿ ಜಿಲ್ಲಾಧಿಕಾರಿಗಳ ಜೊತೆ ಔಷದಿಯ ಸರಬರಾಜು ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.

Contact Your\'s Advertisement; 9902492681

ಈ ಸಂದರ್ಭದಲ್ಲಿ, ಎರಡು ದಿನಗಳಿಂದ ಮಾಚಗುಂಡಾಳ ಗ್ರಾಮಸ್ಥರು, ಆರೋಗ್ಯ ಸಂಕಷ್ಟದಲ್ಲಿರುವ ಬಗ್ಗೆ ಗಮನದಲ್ಲಿದ್ದರೂ ಕೂಡಾ ಬಾದ್ಯಾಪೂರ ಗ್ರಾಮ ಪಂಚಾಯತ ಅಭಿವೃದ್ಧಿ ಅಧಿಕಾರಿಗಳು ನಿರ್ಲಕ್ಷವಹಿಸಿರುತ್ತಾರೆ. ಸದರಿ ಅಭಿವೃದ್ಧಿಕಾರಿಯವರಿಗೆ ಮಾಚಗುಂಡಾಳ ಗ್ರಾಮಸ್ಥರು ಹಾಗೂ ಗ್ರಾಮ ಪಂಚಯಾತ ಸದಸ್ಯರು ಅನೇಕ ಬಾರಿ ನೀರಿನ ಟ್ಯಾಂಕ್‌ನ್ನು ಸ್ವಚ್ಚಗೋಳಿಸಬೇಕು ಮತ್ತು ಕಾಲಕಾಲಕ್ಕೆ ಬ್ಲಿಚಿಂಗ್ ಪೌಡರ ಹಾಕಬೇಕು ಹಾಗೂ ಫಾಗಿಂಗ್ ಕೂಡ ಮಾಡಬೇಕೆಂದು ಮನವಿ ಮಾಡಿದರು.

ಪಂಚಾಯತಿಯವರು ನಿರ್ಲಕ್ಷವಹಿಸಿರುತ್ತಾರೆಂದು ಮಾಚಗುಂಡಾಳ ಗ್ರಾಮಸ್ಥರು ಮತ್ತು ಗ್ರಾಮ ಪಂಚಾಯತ ಸದಸ್ಯರು ನನಗೆ ಖುದ್ದಾಗಿ ಬಂದು ಹೇಳಿರುತ್ತಾರೆ. ಆದ್ದರಿಂದ ಗ್ರಾಮ ಪಂಚಾಯತ ಅಭಿವೃಧ್ದಿ ಅಧಿಕಾರಿಯು ನಿರ್ಲಕ್ಷವಹಿಸಿರುವುದರ ಬಗ್ಗೆ ಪರೀಶಿಲಿಸಿ ಅವರ ಮೇಲೆ ಕ್ರಮ ಕೈಗೋಳ್ಳಬೇಕೆಂದು ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು ಯಾದಗಿರವರಿಗೆ ಒತ್ತಾಯಿಸುತ್ತೇನೆ ಎಂದರು.

ಈ ಸಂದರ್ಭದಲ್ಲಿ ಮುಖಂಡರಾದ ಮಲ್ಲಣ್ಣ ಸಾಹು ನರಸಿಂಗಪೇಟ, ಮಾನಪ್ಪ ಕವಲ್ದಾರ ಬಾದ್ಯಾಪೂರ, ಬಸವರಾಜ ಶ್ರೀನಿವಾಸಪೂರ, ಯಂಕೋಬ ದೊಡ್ಡಿ, ದೇವು ದೊಡ್ಡಿ, ನಾಗರಾಜ, ಬಾಲದಂಡಪ್ಪ ಇನ್ನಿತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here