ಪಿಎಸ್‌ಐ ಹುದ್ದೆ ನೇಮಕಾತಿಯಲ್ಲಿನ ಅನ್ಯಾಯ ಸರಿಪಡಿಸಿ: ಅರ್ಷದ್ ದಖನಿ

0
12

ಸುರಪುರ:ರಾಜ್ಯದಲ್ಲಿ ೫೪೫ ಪಿಎಸ್‌ಐ ಸವಿಲ್ ಹುದ್ದೆಗಳ ನೇಮಕಾತಿಯಲ್ಲಿ ಕಲ್ಯಾಣ ಕರ್ನಾಟಕ ಭಾಗದ ಅಭ್ಯಾರ್ಥಿಗಳು ಉತ್ತಮ ಅಂಕ ಪಡೆದಿದ್ದರು ಅವರನ್ನು ಕೇವಲ ಕಲ್ಯಾಣ ಕರ್ನಾಟಕ ಭಾಗಕ್ಕೆ ಸೀಮಿತಿಗೊಳಿಸುವ ಮೂಲಕ ಈ ಭಾಗದ ಅಭ್ಯಾರ್ಥಿಗಳ ಮೆರಿಟ್ ಕಡೆಗಣಿಸಿದಂತಾಗಿದೆ.ಅದರಿಂದ ಕಲ್ಯಾಣ ಕರ್ನಾಟಕ ಭಾಗದ ೭೭ ಜನ ಉದ್ಯೋಗ ವಂಚಿತರಾಗುತ್ತಿದ್ದಾರೆ.ಆದ್ದರಿಂದ ಕೂಡಲೇ ಸರಕಾರ ಈಗ ಪ್ರಕಟಿಸಿರುವ ತಾತ್ಕಾಲಿಕ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಬೇಕು ಎಂದು ರಾಷ್ಟ್ರೀಯ ಟಿಪ್ಪು ಸುಲ್ತಾನ ಯುವಕ ಸಂಘದ ರಾಷ್ಟ್ರೀಯ ಅಧ್ಯಕ್ಷ ಅರ್ಷದ್ ದಖನಿ ಸರಕಾರಕ್ಕೆ ಒತ್ತಾಯಿಸಿದ್ದಾರೆ.

ಇದರ ಕುರಿತು ಸರಕಾರಕ್ಕೆ ಕಲ್ಯಾಣ ಕರ್ನಾಟಕ ಭಾಗದಲ್ಲಿ ಅನೇಕ ಜನ ಶಾಸಕರು ಸಂಸದರಿದ್ದರು ಇದರ ಕುರಿತು ಕೇವಲ ಸುರಪುರ ಶಾಸಕರಾದ ನರಸಿಂಹ ನಾಯಕ (ರಾಜುಗೌಡ) ಅವರೊಬ್ಬರೆ ವಿರೋಧ ವ್ಯಕ್ತಪಡಿಸುವ ಮೂಲಕ ಈ ಭಾಗದ ಅಭ್ಯಾರ್ಥಿಗಳ ಬೆಂಬಲಕ್ಕೆ ನಿಂತಿದ್ದಾರೆ.ಇನ್ನುಳಿದ ಶಾಸಕರು ಸಂಸದರಿಗೆ ಏನಾಗಿದೆ ಎಂದು ಪ್ರಶ್ನಿಸಿದ್ದಾರೆ.ಕೂಡಲೇ ಎಲ್ಲರು ಇದರ ವಿರುಧ್ಧ ಧ್ವನಿ ಎತ್ತಬೇಕು,ಕೂಡಲೇ ಈ ಭಾಗದ ಅಭ್ಯಾರ್ಥಿಗಳಿಗೆ ಆಗಿರುವ ಅನ್ಯಾಯವನ್ನು ಸರಕಾರ ಸರಿಪಡಿಸಬೇಕು ಇಲ್ಲವಾದಲ್ಲಿ ಉಗ್ರ ಹೋರಾಟವನ್ನು ನಡೆಸಲಾಗುವುದು ಅಲ್ಲದೆ ಪ್ರತ್ಯೇಕ ರಾಜ್ಯಕ್ಕೆ ಧ್ವನಿ ಎತ್ತಬೇಕಾಗಲಿದೆ ಎಂದು ಎಚ್ಚರಿಸಿದ್ದಾರೆ.

Contact Your\'s Advertisement; 9902492681

ಈ ಭಾಗದ ಅಭ್ಯಾರ್ಥಿಗಳ ಪರವಾಗಿ ಧ್ವನಿ ಎತ್ತುವ ಮೂಲಕ ಕಾಳಜಿ ಮೆರೆದ ಶಾಸಕರಾದ ರಾಜುಗೌಡ ಅವರಿಗೆ ರಾಷ್ಟ್ರೀಯ ಟಿಪ್ಪು ಸುಲ್ತಾನ ಯುವಕ ಸಂಘ ಅಭಿನಂದನೆ ಸಲ್ಲಿಸುತ್ತದೆ ಎಂದು ಅವರು ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here