ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಅಂತಾರಾಷ್ಟ್ರೀಯ ಯೋಗ ದಿನ

0
150

ಕಲಬುರಗಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ಗೋದುತಾಯಿ ನಗರದಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಯೋಜಿಸಿದ ಯೋಗ ಪಾಕ್ಷಿಕ ಕಾರ್ಯಕ್ರಮ ಯಶಸ್ವಿಯಾಗಿ ನಡೆಯಿತು.

ಇ.ಎಸ್.ಐ.ಸಿ ಸಹಯೋಗದಲ್ಲಿ ಕಳೆದ ೭ನೇ ಜೂನ್ ೨೦೨೨ ರಿಂದ ೨೧ನೇ ಜೂನ್ ೨೦೨೨ ರವರೆಗೆ ಆಯೋಜಿಸಲಾದ ಯೋಗ ಪಾಕ್ಷಿಕವನ್ನು ಭಾನುವಾರ ಮದರ್ ತೆರೆಸಾ ಚಾರಿಟೇಬಲ್ ಟ್ರಸ್ಟ್‌ನ ಅಡಿಯಲ್ಲಿರುವ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಆಚರಿಸಲಾಯಿತು. ಯೋಗದಿಂದ ಆರೋಗ್ಯ, ಆರೋಗ್ಯದಿಂದ ಸಮೃದ್ಧಿ ಎಂಬ ಘೋಷ ವಾಕ್ಯದೊಂದಿಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

Contact Your\'s Advertisement; 9902492681

ಇದನ್ನೂ ಓದಿ: ಪ್ರತಿಭಾ ಪ್ರೋತ್ಸಾಹಧನ ಹಸ್ತಾಂತರ

ಈ ಕಾರ್ಯಕ್ರಮದಲ್ಲಿ ಇ.ಎಸ್.ಐ.ಸಿ ವತಿಯಿಂದ ಯೋಗ ತರಬೇತುದಾರರಾದ ಭಂಡಯ್ಯ ಸ್ವಾಮಿ ಅವರು ದಿನನಿತ್ಯ ಯೋಗ ಮಾಡುವುದರಿಂದ ಆಗುವ ಲಾಭಗಳು, ಉತ್ತಮ ಆರೋಗ್ಯ, ಏಕಾಗ್ರತೆ, ಮಾನಸಿಕ ನಿಯಂತ್ರಣ, ಒತ್ತಡ ನಿವಾರಣೆ, ಕುಳಿತುಕೊಳ್ಳುವ ಶಾರೀರಿಕ ಭಂಗಿ, ಮಾನಸಿಕ ಉತ್ಸಾಹ ಹಾಗೂ ಜೀವನದಲ್ಲಿ ಚಟುವಟಿಕೆಯಿಂದಿರಲು ಯೋಗ ಹಾಗೂ ಧ್ಯಾನ ಬಹಳ ಮಹತ್ವದ ಪಾತ್ರವಹಿಸುತ್ತದೆ ಎಂದು ಯೋಗದ ಕುರಿತು ತಿಳಿ ಹೇಳಿದರು. ಅಲ್ಲದೇ ಈ ಸಂದರ್ಭದಲ್ಲಿ ಯೋಗಾಸನವನ್ನು ಪ್ರದರ್ಶನ ಮಾಡಿ ತೋರಿಸಿದರು.

ಇ.ಎಸ್.ಐ.ಸಿ ಆಸ್ಪತ್ರೆಯ ವೈದ್ಯರಾದ ಡಾ.ಶೃತಿ, ಡಾ.ಆದಿತ್ಯ, ಡಾ.ನಶೀರ್ ಡಾ.ಅಮೃತಾ, ಡಾ.ರೇಷ್ಮಾ ಡಾ.ಅಮೋಘ ಇನ್ನು ಹಲವು ವೈದ್ಯರ ತಂಡ ಆರೋಗ್ಯ ಶಿಬಿರದಲ್ಲಿ ಭಾಗವಹಿಸಿ ಆರೋಗ್ಯದ ಕುರಿತು ಸಲಹೆ ಸೂಚನೆಗಳನ್ನು ನೀಡಿದರು.

ಇದನ್ನೂ ಓದಿ: ಗೋವಿಂದ್ ಕಾರಜೋಳಗೆ ಗೀತಾ ರಾಜು ವಾಡೇಕರ್ ಸನ್ಮಾನ

ಈ ಅರ್ಥಪೂರ್ಣ ಕಾರ್ಯಕ್ರಮಕ್ಕೆ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ಆಡಳಿತ ಮಂಡಳಿಯ ಕಾರ್ಯದರ್ಶಿಗಳಾದ ಶಿವಪುತ್ರಪ್ಪಾ ಡೆಂಕಿ ಅವರು ವೈದ್ಯರ ತಂಡಕ್ಕೆ ಅಭಿನಂದನೆ ಸಲ್ಲಿಸಿದರು.

ಈ ಕಾರ್ಯಕ್ರಮದಲ್ಲಿ ಮದರ್ ತೆರೆಸಾ ಆಂಗ್ಲ ಮಾಧ್ಯಮ ಶಾಲೆಯ ಪ್ರಾಂಶುಪಾಲರಾದ ನಾಗೇಂದ್ರ ಬಡಿಗೇರ್, ಶಾಲೆಯ ಶಿಕ್ಷಕ ವೃಂದದವರು ಸಿಬ್ಬಂಧಿ ವರ್ಗದವರು ಭಾಗವಹಿಸಿದ್ದರು. ಹಾಗೂ ಮದರ್ ತೆರೆಸಾ ಶಿಕ್ಷಣ ಮಹಾವಿದ್ಯಾಲಯ (ಬಿ.ಇಡಿ)ಯ ಪ್ರಾಂಶುಪಾಲರಾದ ಡಾ.ವನಿತಾ ಜಾಧವ್, ಉಪನ್ಯಾಸಕರು ಸಿಬ್ಬಂಧಿ ವರ್ಗದವರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ಸಚಿವ ಗೋವಿಂದ್ ಕಾರಜೋಳಗೆ ಭೀಮಣ್ಣ ಟಿ. ಬಿಲ್ಲವ್ ಸನ್ಮಾನ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here