ಮೆಟ್ರಿಕ್ ಪೂರ್ವ, ನಂತರ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಆಹ್ವಾನ

2
814

ಕಲಬುರಗಿ: ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ 2022-23ನೇ ಸಾಲಿಗೆ ಮೆಟ್ರಿಕ್ ಪೂರ್ವ, ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ ಹಾಗೂ ಮೆರಿಟ್-ಕಮ್-ಮೀನ್ಸ್ ಸ್ಕಾಲರ್‍ಶಿಪ್‍ಗಾಗಿ ಅಲ್ಪಸಂಖ್ಯಾತರ ಸಮುದಾಯದ ಅರ್ಹ ವಿದ್ಯಾರ್ಥಿಗಳಿಂದ ನ್ಯಾಷನಲ್ ಪೋರ್ಟಲ್‍ದಲ್ಲಿ ಆನ್‍ಲೈನ್ ಮೂಲಕ ಅರ್ಜಿ ಆಹ್ವಾನಿಸಲಾಗಿದೆ ಎಂದು ಕಲಬುರಗಿ ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯ ಜಿಲ್ಲಾ ಅಧಿಕಾರಿಗಳಾದ ಭಕ್ತಮಾರ್ಕಂಡೇಯ ಅವರು ತಿಳಿಸಿದ್ದಾರೆ.

ಅಲ್ಪಸಂಖ್ಯಾತರ ಸಮುದಾಯಕ್ಕೆ ಸೇರಿದ ಮುಸ್ಲಿಂ, ಕ್ರಿಶ್ಚಿಯನ್, ಜೈನ್, ಬೌದ್ಧ, ಸಿಖ್ ಮತ್ತು ಪಾರ್ಸಿ ಸಮುದಾಯಕ್ಕೆ ಸೇರಿದ ವಿದ್ಯಾರ್ಥಿಗಳು ಮೆಟ್ರಿಕ್ ಪೂರ್ವ/ನಂತರದ ಹಾಗೂ ವೃತ್ತಿಪರ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ನಿಗದಿತ ದಿನಾಂಕದೊಳಗೆ ವಿದ್ಯಾರ್ಥಿ ವೇತನಕ್ಕಾಗಿ ಅನ್‍ಲೈನ್ ಮೂಲಕ ಅರ್ಜಿ ಸಲ್ಲಿಸಬೇಕು.

Contact Your\'s Advertisement; 9902492681

ಮೆಟ್ರಿಕ್ ಪೂರ್ವ ವಿದ್ಯಾರ್ಥಿ ವೇತನಕ್ಕಾಗಿ (1ರಿಂದ 10ನೇ ತರಗತಿ) ಅರ್ಜಿ ಸಲ್ಲಿಕೆಗೆ 2022ರ ಸೆಪ್ಟೆಂಬರ್ 30 ಕೊನೆಯ ದಿನವಾಗಿದೆ. ಮೆಟ್ರಿಕ್ ನಂತರ ವಿದ್ಯಾರ್ಥಿ ವೇತನ (ಪಿಯುಸಿ ದಿಂದ ಪಿಜಿ) ಹಾಗೂ ಮೆರಿಟ್-ಕಮ್-ಮೀನ್ಸ್ ಸ್ಕಾಲರ್‍ಶಿಪ್‍ಗಾಗಿ (ಎಲ್ಲಾ ವೃತ್ತಿಪರ ಕೋರ್ಸ್‍ಗಳು) ಅರ್ಜಿ ಸಲ್ಲಿಕೆಗೆ 2022ರ ಅಕ್ಟೋಬರ್ 31 ಕೊನೆಯ ದಿನವಾಗಿದೆ.

ಹೆಚ್ಚಿನ ಮಾಹಿತಿಗಾಗಿ www.scholarship.gov.in ವೆಬ್‍ಸೈಟ್‍ನ್ನು, ಅಲ್ಪಸಂಖ್ಯಾತರ ಸಚಿವಾಲಯದ ಕೇಂದ್ರ ಸರ್ಕಾರದ www.minorityaffairs.gov.in ಪೋರ್ಟಲ್‍ನ್ನು ಹಾಗೂ ಅಲ್ಪಸಂಖ್ಯಾತರ ನಿರ್ದೇಶನಾಲಯದ http://gokdom.kar.nic ಪೋರ್ಟಲ್‍ಗೆ ಲಾಗಿನ್ ಆಗಿ ಮಾಹಿತಿ ಪಡೆದು ಮೇಲ್ಕಂಡ ಕೊನೆಯ ದಿನದೊಳಗಾಗಿ ಅರ್ಜಿ ಸಲ್ಲಿಸಬೇಕು.

ಕಲಬುರಗಿ ಜಿಲ್ಲಾ ಅಲ್ಪಸಂಖ್ಯಾತರ ಮಾಹಿತಿ ಕೇಂದ್ರವನ್ನು ಮತ್ತು ದೂರವಾಣಿ ಸಂಖ್ಯೆ 08472-244006 ಹಾಗೂ ಆಯಾ ತಾಲೂಕಿನ ವಿಸ್ತರಣಾಧಿಕಾರಿಗಳ ಕಚೇರಿ ಹಾಗೂ ಆಳಂದ ಮೊಬೈಲ್ ಸಂಖ್ಯೆ 8147775722, ಅಫಜಲಪೂರ-9741279422, ಚಿಂಚೋಳಿ-8722326201, ಸೇಡಂ-7760680162, ಚಿತ್ತಾಪೂರ-9741168681, ಜೇವರ್ಗಿ-9535775141 ಹಾಗೂ ಕಲಬುರಗಿ-9741279422 ಗಳಿಗೆ ಸಂಪರ್ಕಿಸಲು ಹಾಗೂ ಅಲ್ಪಸಂಖ್ಯಾತರ ರಾಜ್ಯ ಸಹಾಯವಾಣಿ 8277799990ಗೆ ಸಂಪರ್ಕಿಸಲು ಕೋರಲಾಗಿದೆ.

2 ಕಾಮೆಂಟ್ಗಳನ್ನು

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here