ಗುಲಬರ್ಗಾ ವಿವಿಯ ಖೋ-ಖೋ (ಮಹಿಳಾ) ತಂಡ ಭಾಗಿ

0
11

ಕಲಬುರಗಿ: ದಿನಾಂಕ 23 ರಿಂದ 25 ಜನೆವರಿ 2023 ರವರೆಗೆ ಅಲೈಯನ್ಸ್ ವಿಶ್ವವಿದ್ಯಾಲಯ, ಬೆಂಗಳೂರಿನಲ್ಲಿ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಖೋ-ಖೋ(ಮಹಿಳೆ)ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ಖೋ-ಖೋ(ಮಹಿಳೆ) ತಂಡವು ಭಾಗವಹಿಸುತ್ತಿದೆ.

ತಂಡದ ನಾಯಕಿಯಾಗಿ ಕರಿಷ್ಮಾ, ತಂಡದ ಸದಸ್ಯರಾಗಿ ಶುಭಾಂಗಿ, ಅರ್ಚನಾ, ನಿಖೀತಾ, ನಿರ್ಮಲಾ, ಅರ್ಚನಾ ಬಿ, ಶುಷ್ಮಾ, ಕಾವೇರಿ, ರಾಜಶ್ರೀ, ಅರ್ಚನಾ ಆರ್, ಭಾಗ್ಯಶ್ರೀ ಮತ್ತು ಭಾಗಮ್ಮ  ಇವರು ಭಾಗವಹಿಸುವರು. ತಂಡದ ವ್ಯವಸ್ಥಾಪಕರಾಗಿ/ತರಬೇತುದಾರರಾಗಿ ಡಾ.ನಾಗರಡ್ಡಿ ಎಂ.ಭೈರಡ್ಡಿ ದೈಹಿಕ ಶಿಕ್ಷಣ ಭೋದಕರು, ಸರಕಾರಿ ಪ್ರಥಮ ದರ್ಜೆ ಕಾಲೇಜು, ಜೇವರ್ಗಿ ಇವರು ಭಾಗವಹಿಸುವರು.

Contact Your\'s Advertisement; 9902492681

ತಂಡದ ಯಶಸ್ವಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ.ದಯಾನಂದ ಅಗಸರ್, ಕುಲಸಚಿವರುಗಳಾಗದ ಡಾ.ಬಿ.ಶರಣಪ್ಪ, ಡಾ.ಎನ್.ಜಿ.ಕಣ್ಣೂರ, ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ, ಡಾ.ಎಚ್.ಎಸ್.ಜಂಗೆ, ಸಂಯೋಜಕರು ಮತ್ತು ಪ್ರಾಂಶುಪಾಲರು, ಡಾ.ಎಂ.ಎಸ್.ಪಾಸೋಡಿ, ನಿರ್ದೇಶಕರು, ದೈಹಿಕ ಶಿಕ್ಷಣ ವಿಭಾಗ,  ಶ್ರೀ.ಅರುಣಕುಮಾರ ಹಾಗರಗುಂಡಗಿ ಗುಲಬರ್ಗಾ ವಿಶ್ವವಿದ್ಯಾಲಯ, ಕಲಬುರಗಿ ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here