ಕೇಂದ್ರ ಬಜೇಟ್: ವಿಶ್ವಕರ್ಮ ಸಮಾಜದ ಅಭಿವೃದ್ದಿಗೆ ಯೋಜನೆ ಘೋಷಣೆಗೆ ಹರ್ಷ

0
15

ಕಲಬುರಗಿ: ಕೇಂದ್ರ ಬಜೇಟ್‌ನಲ್ಲಿ ವಿಶ್ವಕರ್ಮ ಸಮಾಜವನ್ನು ಗುರುತಿಸಿ ವಿಶ್ವಕರ್ಮ ಸಮಾಜಕ್ಕೆ ಪ್ರಧಾನ ಮಂತ್ರಿ ಮತ್ತು ಹಣಕಾಸು ಸಚಿವರು ವಿಶ್ವಮಕರ್ಮ ಸಮಾಜಕ್ಕೆ ಯೋಜನೆ ತಂದಿರುವುದು ಭಾರತದ ಹಿರಿಮೆ ಮತ್ತು ಸಂಸ್ಕೃತಿಯನ್ನು ಎತ್ತಿ ತೋರಿಸುತ್ತದೆ.

ಇತಿಹಾಸದಲ್ಲಿ ಅತ್ಯಂತ ಪುರಾತನ ಧರ್ಮ ಯಾವುದಾರರು ಇದ್ದಲ್ಲಿ ಅದು ವಿಶ್ವಕರ್ಮ ಸಮಾಜ ಎಂದು ತೊರಿಸಿಕೊಟ್ಟಿರುವ ಕೇಂದ್ರ ಸರ್ಕಾರವು ಅಭಿನಂದನಾರ್ಹವಾಗಿದೆ. ಈ ನಿಟ್ಟಿನಲ್ಲಿ ಪ್ರಧಾನಿ ಮೋದಿ, ಹಾಗೂ ಅವರ ಸಚಿವ ಸಂಪುಟದ ಎಲ್ಲಾ ಸಚಿವರಿಗೆ ಅಭಿನಂದನೆಗಳು ಎಂದು ವಿಶ್ವಕರ್ಮ ಸಮಾಜ ಹೋರಾಟ ಸಮಿತಿಯ ಅಧ್ಯಕ್ಷ ದೇವೇಂದ್ರ ದೇಸಾಯಿ ಕಲ್ಲೂರ ತಿಳಿಸಿದ್ದಾರೆ.

Contact Your\'s Advertisement; 9902492681

ಇದುವರೆಗೆ ಯಾವುದೇ ಪಕ್ಷ ಅಧಿಕಾರಕ್ಕೆ ಬಂದರೂ ವಿಶ್ವಕರ್ಮ ಸಮಾಜದ ಕುರಿತು ಯಾವುದೇ ಯೋಜನೆಗಳನ್ನು ಹಾಕಿಕೊಂಡಿಲ್ಲ. ಮೋದಿ ನೇತೃತ್ವದ ಸರ್ಕಾರವು ನಮ್ಮ ಸಮಾಜವನ್ನು ಕೌಶಲ್ಯಾಭಿವೃದ್ದಿಯಡಿಯಲ್ಲಿ ಗುರುತಿಸಿ ಸನ್ಮಾನ ಯೋಜನೆಯನ್ನು ಬಜೆಟನಲ್ಲಿ ಪ್ರಕಟಿಸಿದೆ.

ಸಮಾಜದ ಗೌರವನ್ನು ಹೆಚ್ಚಿಸಿದ ಬಿಜೆಪಿ ಸರ್ಕಾರ ಅಭಿನಂದನಾರ್ಹವಾಗಿದೆ ಎಂದು ದೇವೇಂದ್ರ ದೇಸಾಯಿ ಕಲ್ಲೂರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here