ಹೆಣ್ಣು – ಪುರುಷ ಸಮಾನರು: ರೇಣುಕಾ

0
5

ಆಳಂದ: ಸಂವಿಧಾನದ ಅಡಿಯಲ್ಲಿ ” ಸ್ತ್ರೀಯರು – ಪುರುಷರು  ಸಮಾನವಾಗಿ ಸ್ಥಾನಮಾನಗಳನ್ನು ಹೊಂದಿದ್ದು ಮಹಿಳೆಯರು ಹೋರಾಟ ಮನೋಭಾವನೆ ಬೆಳೆಸಿಕೊಳ್ಳಿ ”  ಎಂದು ಮುಖ್ಯ ಶಿಕ್ಷಕಿ ರೇಣುಕಾ ಸಂಶಿ ಅವರು ಅಭಿಪ್ರಾಯಪಟ್ಟರು.

ಪಟ್ಟಣದ ಸಮತಾ ಸಭಾ ಭವನದಲ್ಲಿ ಮಂಗಳವಾರ ಅಜಿಲ ಭಾರತ ಶರಣ ಸಾಹಿತ್ಯ ಪರಿಷತ್ತು,ಆಳಂದ ,ದಿ.ಕಲ್ಯಾಣಿ ಗುಂಡಪ್ಪಾ ಖಾನಾಪೂರ ಸ್ಮರಣಾರ್ಥ ದತ್ತಿ ಉಪನ್ಯಾಸ ಹಾಗೂ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ,ಕವಿಗೋಷ್ಠಿ ಮತ್ತು ಪುಸ್ತಕ ಪರಿಚಯ ಕಾರ್ಯಕ್ರಮದಲ್ಲಿ ” ಸ್ತ್ರೀ  ಸಂವೇದನೆ ಮತ್ತು ಶರಣರು ”  ಕುರಿತು ಉಪನ್ಯಾಸ ನೀಡಿ ಮಾತನಾಡಿದ ಅವರು,ಮಹಿಳೆಯರ ಸಾಹಸ,ಹೋರಾಟ ,ಶಕ್ತಿ ಸಾಮರ್ಥ್ಯ ಮೆಚ್ಚುವಂತದ್ದು,ಆದರ್ಶ ಮಹಿಳೆಯಾಗಿದ್ದ‍ಾರೆ ಎಂದು ಬಣ್ಣಿಸಿದರು.

Contact Your\'s Advertisement; 9902492681

ಉಪನ್ಯಾಸಕ ರಮೇಶ್ ಮಾಡಿಯಾಳಕರ ಅವರು,ಮುಖಂಡ  ಬಿ.ಆರ್.ಪಾಟೀಲರ ಪುಸ್ತಕ ಪರಿಚಯಿಸಿದರು.ಬಳಿಕ 30ಕ್ಕೂ ಹೆಚ್ಚು ಕವಿಗಳು ಕವಿತೆಯನ್ನು ವಾಚಿಸಿದರು.

ಉಪನ್ಯಾಸ,ಪತ್ರಕರ್ತ ಸಂಜಯ ಪಾಟೀಲ,ಪ್ರಭಾಕರ ಸಲಗರ,ಸಂಸ್ಥೆಯ ಶಿಕ್ಷಕರು,ಉಪನ್ಯಾಸಕರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.

ವಿದ್ಯಾರ್ಥಿ ಮೇಘಾ ಚೀಚಕೋಟಿ ಸ್ವಾಗತ ಗೀತೆ ಹಾಡಿದರು.ಮುಖ್ಯಗುರು ಎಲ್.ಎಸ್.ಬೀದಿ ಸ್ವಾಗತಿಸಿದರು.ಶಿಕ್ಷಕ ಕಾಮಣ್ಣ ಸುತಾರ ನಿರೂಪಿಸಿದರುಮ ಸಿದಾರ್ಥ ಹಸೂರೆ ವಂದಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here