ಜೇವರ್ಗಿ ಮಂದೆವಾಲ ಪಿಎಚ್ ಸಿಯಿಂದ ಮತದಾನ ಜಾಗೃತಿ ಜಾಥಾ

0
61

ಜೇವರ್ಗಿ; ಸಾರ್ವತ್ರಿಕ ವಿಧಾನಸಭಾ ಚುನಾವಣೆ ಹಿನ್ನೆಲೆ ಯಲ್ಲಿ ಜೇವರ್ಗಿ ತಾಲ್ಲೂಕ  ಮಂದೆವಾಲ ಗ್ರಾಮದ  ಪ್ರಾಥಮಿಕ ಆರೋಗ್ಯ ಕೇಂದ್ರದ ವತಿಯಿಂದ ಹಮ್ಮಿಕೊಂಡಿದ್ದ ಮತದಾನ ಜಾಗೃತಿ ಪ್ರಭಾತ ಪೇರಿ ಜಾಥಾಕ್ಕೆ  ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ರೇಣುಕಾ ದೇವರಮನಿ ಅವರು ಚಾಲನೆ ನೀಡಿದರು.

ನಂತರ ಮಾತನಾಡಿ ಅವರು ಭಾರತದ ಸಂವಿಧಾನ 18 ವರ್ಷ ಮೇಲ್ಪಟ್ಟ ಎಲ್ಲರಿಗೂ ಮತದಾನದ ಹಕ್ಕು  ನೀಡಿದ್ದು, ಪ್ರತಿಯೊಬ್ಬರು ಮತ ಚಲಾಯಿಸಿ, ಪ್ರಜಾಪ್ರಭುತ್ವ ವ್ಯವಸ್ಥೆ ಗಟ್ಟಿಗೊಳಿಸಬೇಕು . ಮತದಾನ ಜನ ಜಾಗೃತಿಗೆ ನಮ್ಮ ಆರೋಗ್ಯ ಇಲಾಖೆಯಿಂದ ಗ್ರಾಮದ ಜನರಿಗೆ ಜಾಗೃತಿ ಮೂಲಕ ಮತದಾನ ಪ್ರಮಾಣ ಹೆಚ್ಚಿಸಲು ವಯೋವೃದ್ದರು, ಅಂಗವಿಕಲರಿಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಇದೇ ಮೊದಲ ಬಾರಿಗೆ ಚುನಾವಣಾ ಅಯೋಗ ಮನೆಯಿಂದಲೇ ಮತದಾನ ಮಾಡುವ ಅವಕಾಶ ಕಲ್ಪಿಸಿದೆ. ಇದನ್ನು ಸದ್ಬಳಕೆ ಮಾಡಿಕೊಂಡು ಶೇಕಡಾವಾರು ಮತದಾನ ಪ್ರಮಾಣ ಹೆಚ್ಚಿಸಬೇಕು ಎಂದರು.

Contact Your\'s Advertisement; 9902492681

ಇದೇ ಸಂಧರ್ಭದಲ್ಲಿ ಪ್ರಾಥಮಿಕ ಆರೋಗ್ಯ ನೀರಿಕ್ಷಣಾಧಿಕಾರಿ ಶ್ವೇತಾ ರೆಡ್ಡಿ ಅವರು ನನ್ನ ಮತ ನನ್ನ ಹಕ್ಕು , ಪ್ರತಿ ಮತದಾನ ಅತ್ಯಮೂಲ್ಯ ತಪ್ಪದೆ ಮತದಾನ ಮಾಡಿ. ಮತದಾನ ಮಾಡುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯ. ಎಂಬ ಘೋಷಣೆ ಕೂಗಿ ಗ್ರಾಮದ ಜನರಿಗೆ ಜಾಗೃತಿ ಮೂಡಿಸಿದರು.

ಪ್ರಮುಖರಾದ  ಡಾ. ಸಿದ್ದು ಗೌಡ , ಹಿರಿಯ ‌ಪ್ರಾಥಮಿಕ ಆರೋಗ್ಯ ಕೇಂದ್ರದ ಎಲ್‌ ಹೆಚ್ ವಿ,  ಪದ್ಮಾವತಿ , ಔಷಧ ತಜ್ಞರಾದ  ರಾಜಶೇಖರ , ಪ್ರಾಥಮಿಕ ಆರೋಗ್ಯ ಸುರಕ್ಷಾಧಿಕಾರಿ  ರೇಣುಕಾ ದ್ಯಾಮಾರಿ , ಆರೋಗ್ಯ ನಿರಿಕ್ಷಣಾಧಿಕಾರಿ ಉಲ್ಪತ‌ ಬೇಗಂ , ಸಮುದಾಯದ ಆರೋಗ್ಯಾಧಿಕಾರಿಗಳಾದ ಅಜ್ರೊದ್ದಿನ , ರುಕ್ಸಾರ್.  ಭಗವಂತ ಹಾಗೂ ಆಶಾ ಕಾರ್ಯಕರ್ತೆಯರಾದ  ಗೀತಾ, ಮಂಜುಳ,  ಸಂಗೀತಾ. ಭಾಗವಹಿಸಿದ್ದರು.

 

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here