ಭಾರತದಲ್ಲಿ ಯುವತಿಯರ ಸ್ವಾತಂತ್ರ್ಯಕ್ಕೆ ಧಕ್ಕೆ; ಕಲಬುರಗಿಯಲ್ಲಿ SFI ವಿದ್ಯಾರ್ಥಿನಿಯರ 2 ದಿನದ ರಾಜ್ಯಮಟ್ಟದ ಸಮಾವೇಶ

0
54

ಕಲಬುರಗಿ: ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಮಹಿಳೆಯರ ಮೇಲೆ ಅಮಾನವೀಯ ಕೃತ್ಯ ನಡೆಸಲಾಗುತ್ತಿದೆ. ಯುವತಿಯರ ಶಿಕ್ಷಣದ ಹಕ್ಕುಗಳನ್ನು ಧಮನ ಮಾಡಲಾಗುತ್ತಿದೆ. ಬಲವಂತದ ಧರ್ಮ ಆಚರಣೆಗೆ ಪುಷ್ಟಿ ನೀಡಲಾಗುತ್ತಿದೆ. ಸ್ವಾತಂತ್ರ್ಯ ಭಾರತದಲ್ಲಿ ದಿನನಿತ್ಯ ಯುವತಿಯರ ಸ್ವಾತಂತ್ರ್ಯ ಹರಣ ನಡೆಯುತ್ತಿರುವುದು ದುರಂತವಾಗಿದೆ ಎಂದು ಎಸ್.ಎಫ್.ಐ ದೆಹಲಿ ಕೇಂದ್ರ ಸಮಿತಿ ಸಹಕಾರ್ಯದರ್ಶಿ ದಿಫ್ಸೀತಾ ಧರ್ ಅಸಮಾಧಾನ ವ್ಯಕ್ತಪಡಿಸಿದರು.

ನಗರದ ಪಂಡಿತ್ ರಂಗಮಂದಿರದಲ್ಲಿ ಆಯೋಜಿಸಿದ ಶಿಕ್ಷಣದ ಹಕ್ಕಿಗಾಗಿ ಮತ್ತು ಘನತೆಯ ಭವಿಷ್ಯಕ್ಕಾಗಿ ಎಸ್‌ಎಫ್‌ಐನಿಂದ ವಿದ್ಯಾರ್ಥಿನಿಯರ 2 ದಿನದ ರಾಜ್ಯಮಟ್ಟದ ಸಮಾವೇಶದಲ್ಲಿ ಮುಖ್ಯ ಭಾಷಣಕಾರರಾಗಿ ಅವರು ಮಾತನಾಡಿದರು. ಕಳೆದ ವರ್ಷ ರಾಜ್ಯದಲ್ಲಿ ವಿದ್ಯಾರ್ಥಿನಿಯರು ಹಿಜಾಬ್ ಧರಸಿ ಶಾಲೆಗೆ ಹೋಗುವಂತಿಲ್ಲ ಎಂದು ನಿರ್ಭಂದಿಸಲಾಗಿತ್ತು. ಸಂವಿಧಾನದ ಆಶಯವನ್ನೇ ದಿಕ್ಕರಿಸಿದ ಸರಕಾರದ ನಡೆ ಇಡೀ ನಾಗರಿಕ ಸಮಾಜ ತಲೆ ತಗ್ಗಿಸುವಂತೆ ಮಾಡಿತ್ತು. ಎಂದು ಅಂದಿನ ಸರಕಾರದ ವಿರುದ್ಧ ದಿಫ್ಸೀತಾ ಗುಡುಗಿದರು.
ಬೇಟಿ ಪಢಾವು, ಬೇಟಿ ಬಚಾವ್ ದೇಶದಲ್ಲಿ ದಿನನಿತ್ಯ ಯುವತಿಯರ ಮೇಲೆ ದೌರ್ಜನ್ಯ, ಅತ್ಯಾಚಾರ ಎಸಗಿ ಹಾಡುಹಗಲೇ ಮಹಿಳೆಯರನ್ನು ಬರ್ಬರವಾಗಿ ಹತ್ಯೆ ಮಾಡಲಾಗುತ್ತಿದೆ. ಆದರೂ ಕೇಂದ್ರ ಸರಕಾರ ಅತ್ಯಾಚಾರಿಗಳ ವಿರುದ್ಧ ಯಾವುದೇ ಕಠಿಣವಾದ ಕಾನೂನು ಕ್ರಮಕೈಗೊಳ್ಳದಿರುವುದು ಮಹಿಳೆಯರಿಗೆ ಮಾಡಿದ ದೊಡ್ಡ ಮೋಸ, ವಂಚನೆಯಾಗಿದೆ. ಇಂತಹ ಸರಕಾರವನ್ನು ಅಧಿಕಾರದಿಂದ ತೆಗೆಯಬೇಕು ಎಂದು ಯುವತಿಯರಿಗೆ ಕರೆ ನೀಡಿದರು.

Contact Your\'s Advertisement; 9902492681

ಎಸ್.ಎಫ್.ಐ ಕೇಂದ್ರ ಸಮಿತಿ ಉಪಾಧ್ಯಕ್ಷ ನಿತೀಶ ನಾರಾಯಣ ಮಾತನಾಡಿ, ಆಯೋಗದ ವರದಿ ಪ್ರಕಾರ ಭಾರತದಲ್ಲಿ ಪ್ರತಿ ಸೆಕೆಂಡಿಗೆ ಮಹಿಳೆಯರ ಮೇಲೆ ಅತ್ಯಾಚಾರ, ಕೊಲೆ ನಡೆಯುತ್ತಿದೆ. ಆದರೂ ಸರಕಾರ ಮೌನವಹಿಸಿದೆ. ಮಹಿಳೆಯರ ಶಿಕ್ಷಣಕ್ಕೆ ಆಧ್ಯತೆ ನೀಡುತ್ತೇವೆ ಎಂದು ಹೇಳುವ ಸರಕಾರದಿಂದಲೇ ಮಹಿಳೆಯರಿಗೆ ಶಿಕ್ಷಣದಿಂದ ವಂಚಿಸಲಾಗುತ್ತಿದೆ. ಎಂದು ಕಳವಳ ವ್ಯಕ್ತಪಡಿಸಿದರು.

ಪದವಿ ಶಿಕ್ಷಣ ಇಲಾಖೆ ಜಿಲ್ಲಾ ಉಪ ನಿರ್ದೇಶಕರಾದ ಶಿವಶರಣಪ್ಪ ಮುಳೆಗಾಂವ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ಎಸ್.ಎಫ್.ಐ ರಾಜ್ಯಾಧ್ಯಕ್ಷ ಅಮರೇಶ ಕಡಗದ ಮಾತನಾಡಿದರು. ಜನವಾದಿ ಮಹಿಳಾ ಸಂಘಟನೆ ರಾಜ್ಯ ಘಟಕದ ಅಧ್ಯಕ್ಷೆ ಡಾ.ಮೀನಾಕ್ಷಿ ಬಾಳಿ ಮಾತನಾಡಿದರು.

ಡಾ.ಶರಣಪ್ಪ ಸೈದಾಪೂರ, ದಾ.ಜೇಬಾ ಪರವೀನ, ಡಾ.ಸಂತೋಷ ಹುಂಫ್ಳಿ, ಮಾಲಾಶ್ರೀ ಮತ್ತಿಮೂಡ, ಬೃಂದಾ ಧನ್ನಿ,ಶೈಲಶ್ರೀ ಬಗಲಿ, ಲವಿತ್ರ ಇದ್ದರು. ಎಸ್.ಎಫ್.ಐ ರಾಜ್ಯ ಕಾರ್ಯದರ್ಶಿ ಭೀಮನಗೌಡ ಸುಂಕೇಶ್ವರಹಾಳ ಪ್ರಾಸ್ತಾವಿಕವಾಗಿ ಮಾತನಾಡಿದರು ಮೇಘಾ ಚಿಚಕೋಟ ಸ್ವಾಗತಿಸಿದರು. ಎಸ್.ಎಫ್.ಐ ಜಿಲ್ಲಾ ಸಂಚಾಲಕಿ ಸುಜಾತಾ ನಿರೂಪಿಸಿದರು. ಸುಕನ್ಯಾ ವಂದಿಸಿದರು.

ಲಂಬಾಣಿ ಯುವತಿಯರ ಲಂಬಾಣಿ ನೃತ್ಯ ನೋಡುಗರ ಗಮನ ಸೆಳೆಯಿತು. ನಗರದ ಐಟಿಐ ಕಾಲೇಜು ವಿದ್ಯಾರ್ಥಿನಿಯರ ಸಾಮಾಜಿಕ ನಾಟಕ ಪ್ರದರ್ಶನ ಮಾಡಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here