ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ; ಐಕ್ಯತಾ ಹೋರಾಟ ಸಮಿತಿ ಮುಖಂಡರ ಸುದ್ದಿಗೋಷ್ಠಿ

0
18

ಸುರಪುರ: ದೇಶ ದೇಶದಲ್ಲಿನ ದೀನ ದಲಿತ ಶೋಷಿತರು ಉಳಿಯಬೇಕಾದರೆ ಸಂವಿಧಾನ ಉಳಿಯುವುದು ಮುಖ್ಯವಾಗಿದೆ ಎಂದು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಕ್ರಾಂತಿಕಾರಿ ಬಣದ ರಾಜ್ಯ ಸಂಘಟನಾ ಸಂಚಾಲಕ ಮಲ್ಲಿಕಾರ್ಜುನ ಕ್ರಾಂತಿ ಮಾತನಾಡಿದರು.

ನಗರದಲ್ಲಿನ ತಮ್ಮ ಕಚೇರಿ ಆವರಣದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿ,ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ಬಿಜೆಪಿ ನೇತೃತ್ವದ ಎನ್.ಡಿ.ಎ ಸರಕಾರ ಮಾತೆತ್ತಿದರೆ ಸಂವಿಧಾನ ಬದಲಾವಣೆ ಮಾಡುತ್ತೇವೆ ಎನ್ನುತ್ತಾರೆ,ಸಂವಿಧಾನ ಉಳಿದರೆ ದೇಶ ಉಳಿಯುತ್ತದೆ ಎನ್ನುವದನ್ನು ಅರಿತುಕೊಂಡು ದೇಶದಲ್ಲಿ ಈಗ ನಡೆಯುತ್ತಿರುವ ಲೋಕಸಭಾ ಚುನಾವಣೆಯಲ್ಲಿ ಎಲ್ಲಾ ದಲಿತ 12 ಸಂಘಟನೆಗಳ ಐಕ್ಯತಾ ಹೋರಾಟ ಸಮಿತಿ ಈಬಾರಿಯ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಲಿದೆ ಎಂದರು.

Contact Your\'s Advertisement; 9902492681

ನಮ್ಮ ರಾಜ್ಯ ಸಮಿತಿಯ ಮುಖಂಡರ ತೀರ್ಮಾನದಂತೆ ಇಂದು ಸುದ್ದಿಗೋಷ್ಠಿ ನಡೆಸಿ ಘೋಷಣೆ ಮಾಡುತ್ತಿದ್ದು,ರಾಜ್ಯದಲ್ಲಿ ಮತ್ತು ನಮ್ಮ ಸುರಪುರ ವಿಧಾನಸಭಾ ಕ್ಷೇತ್ರ ಉಪ ಚುನಾವಣೆ ಹಾಗೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸುತ್ತೇವೆ ಎಂದರು.

ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿವೆ,ಮಣಿಪುರದಂತಲ್ಲಿ ದಲಿತರು,ಆದಿವಾಸಿಗಳ ಮೇಲೆ ನಿರಂತರ ಅತ್ಯಾಚಾರ ಕೊಲೆಗಳು ನಡೆಯುತ್ತಿವೆ,ಅಭಿವೃದ್ಧಿ ಎನ್ನುವುದು ಸಂಪೂರ್ಣ ಮರೆತು ಹೋಗಿರುವ ಬಿಜೆಪಿಯನ್ನು ದೇಶದಿಂದ ನಿರ್ಮೂಲನೆ ಮಾಡಬೇಕಿದೆ,ಅದಕ್ಕಾಗಿ ನಮ್ಮ ಸಂಘಟನೆ ಮತ್ತು ಐಕ್ಯತಾ ಹೋರಾಟ ಸಮಿತಿ ಕಾಂಗ್ರೆಸ್ ಪಕ್ಷ ಬೆಂಬಲಿಸುತ್ತದೆ ಎಂದು ತಿಳಿಸಿದರು.

ಕೆಲವರು ತಮ್ಮ ಸ್ವಯಂ ಲಾಭಕ್ಕಾಗಿ ಬಿಜೆಪಿಗೆ ಹೋಗುತ್ತಾರೆ,ಅದರಬಗ್ಗೆ ಜನರಲ್ಲಿ ನಮ್ಮ ಕುರಿತು ಗೊಂದಲ ಮೂಡದಿರಲಿ ಎನ್ನುವ ಕಾರಣಕ್ಕೆ ಇಂದು ಸ್ಪಷ್ಟನೆ ನೀಡುತ್ತಿದ್ದು,ರಂಜಾನ್ ಹಬ್ಬದ ನಂತರ ನಮ್ಮ ವಿಧಾನಸಭಾ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ಪರವಾಗಿ ಪ್ರಚಾರಕ್ಕೆ ಹೋಗುತ್ತೇವೆ,ಕಳೆದ ಚುನಾವಣೆಯಲ್ಲಿ ನಾವೆಲ್ಲರು ಬೆಂಬಲಿಸಿದ್ದರಿಂದ 25 ಸಾವಿರ ಅಂತರದಲ್ಲಿ ರಾಜಾ ವೆಂಕಟಪ್ಪ ನಾಯಕ ಗೆದ್ದಿದ್ದರು,ಈಬಾರಿ ರಾಜಾ ವೇಣುಗೋಪಾಲ ನಾಯಕ 50 ಸಾವಿರ ಮತಗಳ ಅಂತರದಲ್ಲಿ ಗೆಲ್ಲಲಿದ್ದಾರೆ ಎಂದರು.

ಇದೇ ಸಂದರ್ಭದಲ್ಲಿ ಮುಖಂಡ ಮಹಾದೇವಪ್ಪ ಬಿಜಾಸಪುರ ಮಾತನಾಡಿ,ಬಿಜೆಪಿ ಕೇವಲ ಹಿಂದು ಮುಸ್ಲೀಂ ಎನ್ನುವದನ್ನೆ ರಾಜಕೀಯ ಬಂಡವಾಳ ಮಾಡಿಕೊಂಡಿದೆ,10 ವರ್ಷಗಳ ಕಾಲ ಜಾತಿ ಧರ್ಮಗಳ ಮಧ್ಯದಲ್ಲಿ ರಾಜಕೀಯ ಮಾಡಿ ಕಾಳಹರಣ ಮಾಡಿದ್ದು ಬಿಟ್ಟರೆ ಬೇರೆನು ಮಾಡಿಲ್ಲ.ದೇಶದಲ್ಲಿನ ದಲಿತರು,ಹಿಂದುಳಿದವರು,ಅಲ್ಪಸಂಖ್ಯಾತರ ತುಳಿಯುವ ಕೆಲಸ ಮಾಡಿದೆ.ಈಗ ಈಶ್ವರಪ್ಪ,ಪ್ರತಾಪ ಸಿಂಹ,ಸದಾನಂದಗೌಡ ಅವರು ಹಿಂದುಳಿದ ವರ್ಗದವರೆಂದು ಅವರಿಗೆ ಟಿಕೆಟ್ ಕೊಡದೆ ವಂಚಿಸಿದ್ದಾರೆ ಎಂದರು.

ಈ ಸಂದರ್ಭದಲ್ಲಿ ಸಂಘಟನೆ ಮುಖಂಡರಾದ ಮಲ್ಲಿಕಾರ್ಜುನ ಕುರಕುಂದಿ,ರವಿಚಂದ್ರ ಬೊಮ್ಮನಹಳ್ಳಿ,ಶೇಖರ ಜೀವಣಗಿ,ಬುದ್ಧಿವಂತ ನಾಗರಾಳ,ಮಾನಪ್ಪ ಕರಡಕಲ್,ಮಾನಪ್ಪ ಬಿಜಾಸಪುರ,ಹಣಮಂತ ಬಾಲಾಜಿ,ಹನುಮಂತ ಮಹಲ್‍ರೋಜಾ,ಮೂರ್ತಿ ಬೊಮ್ಮನಹಳ್ಳಿ,ಜಟ್ಟೆಪ್ಪ ನಾಗರಾಳ,ಬಸವರಾಜ ದೊಡ್ಡಮನಿ,ಮಹೇಶಕುಮಾರ ಸುಂಗಲ್,ಮಲ್ಲಿಕಾರ್ಜುನ ತಳ್ಳಳ್ಳಿ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here