ಮಾರವಾಡಿ ಹಾಗೂ ಜೈನ್ ಸಮಾಜದ ಸಭೆಯಲ್ಲಿ ಕಾಂಗ್ರೆಸ್‌ ಅಭ್ಯರ್ಥಿ ಪರವಾಗಿ ಮತ ಯಾಚನೆ

0
7

ಕಲಬುರಗಿ; ಕಳೆದ ಲೋಕಸಭೆ ಚುನಾವಣೆಯಲ್ಲಿ ಹಿರಿಯ ನಾಯಕರಾದ ಡಾ. ಮಲ್ಲಿಕಾರ್ಜುನ ಖರ್ಗೆಯವರ ಸೋಲು ಈ ಭಾಗದ ಪ್ರಗತಿಗೆ ಪೆಟ್ಟು ನೀಡಿದೆ ಎಂದಿರುವ ಕೆಕೆಆರ್ ಡಿಬಿ ಅಧ್ಯಕ್ಷ ಅಜಯ್ ಸಿಂಗ್ ಕಳೆದ ಬಾರಿಯ ತಪ್ಪು ಈ ಬಾರಿ ಮಾಡದೆ ಈ ಸಲ ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗೆ ಮತ ನೀಡಬೇಕು, ಅಭಿವೃದ್ಧಿಗೆ ಬೆಂಬಲಿಸಬೇಕೆಂದರು.

ಮಾರವಾಡಿ ಹಾಗೂ ಜೈನ್ ಸಮಾಜದ ಸಭೆಯಲ್ಲಿ ಭಾಗವಹಿಸಿ ಅವರು ಮಾತನಾಡುತ್ತ, ದಿವಂಗತ ಧರಂಸಿಂಗ್ ಹಾಗೂ ಹಿರಿಯ ನಾಯಕ ಮಲ್ಲಿಕಾರ್ಜುನ‌ ಖರ್ಗೆ ಅವರ 50 ವರ್ಷಗಳ ಸಾರ್ವಜನಿಕರ ಸೇವೆ ನೆನಪಿಸಿಕೊಂಡರು.

Contact Your\'s Advertisement; 9902492681

ಸಂಸದರಾಗಿ ಹೋದ ಡಾ. ಉಮೇಶ್ ಜಾಧವ ಮಲ್ಲಿಕಾರ್ಜುನ ಖರ್ಗೆ ಅವರು ಮಾಡಿದ ಕೆಲಸದಲ್ಲಿ ಶೇ. 0.1 ಕೆಲಸ ಸಹ ಮಾಡಿಲ್ಲ. ಕಳೆದ ಬಾರಿಯ ಖರ್ಗೆಯವರ ಸೋಲಿನಿಂದಾಗಿ ನಮ್ಮ ಭಾಗದ ಅಭಿವೃದ್ದಿ ಮೇಲೆ ಹೊಡೆತ ಬಿದ್ದಿದೆ ಎಂದರು. ಈ ಬಾರಿ ತಪ್ಪಿನ ಪುನರಾವರ್ತನೆ ಆಗದಂತೆ ಎಚ್ಚರದಿಂದ ಇದ್ದು ಮತಗಟ್ಟೆಗೆ ಹೋದ ನಂತರ ಕಾಂಗ್ರೆಸ್‌ಗೆ ಮತ ಹಾಕುವಂತೆ ಕೋರಿದರು.

ಸಭೆಯಲ್ಲಿ ಮತ ಯಾಚಿಸಿದ ರಾಧಾಕೃಷ್ಣ ದೊಡ್ಮನಿ, ತಮ್ಮನ್ನು ಕಲಬುರಗಿ ಸಂಸದರನ್ನಾಗಿ ಆಯ್ಕೆ ಮಾಡಿ ಕಳಿಸಿದರೆ ನಗರ ಹಾಗೂ ಜಿಲ್ಲೆಯ ಅಭಿವೃದ್ದಿಗೆ ಯತ್ನಿಸೋದಾಗಿ ಹೇಳಿದರು.

ಸಚಿವ ಶರಣಪ್ರಕಾಶ ಪಾಟೀಲ, ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಿ, ಈ ಸಲದ ಚುನಾವಣೆಯಲ್ಲಿ ಭಾವನಾತ್ಮಕವಾಗಿ ಯೋಚನೆ ಮಾಡದೇ ವಾಸ್ತವದ ಸಂಗತಿ ಹಾಗೂ ಅಭಿವೃದ್ದಿ ಆಧಾರದ ಮೇಲೆ ಯೋಚಿಸಿ ಮತದಾನ ಮಾಡಿರೆಂದರು.

ಮಾರವಾಡಿ ಹಾಗೂ ಜೈನ್ ಸಮಾಜಕ್ಕೆ ರಾಜಕೀಯ ಸ್ಥಾನಮಾನ ಹಾಗೂ ಪದ್ಮಾವತಿ ದೇವಾಲಯ ನಿರ್ಮಾಣ‌, ದಿಗಂಬರ್ ಮಂದಿರ ನಿರ್ಮಾಣಕ್ಕೆ ಕ್ರಮ ಕೈಗೊಳ್ಳಲಾಗುವುದು ಜತೆಗೆ ಜೈನ್ ಭವನ್ ನಿರ್ಮಾಣ ಕುರಿತಂತೆ ಪ್ರಸ್ತಾಪ ಸರ್ಕಾರದ‌ ಮುಂದಿದ್ದು ಅಗತ್ಯ ಕ್ರಮಕೈಗೊಳ್ಳಲಾಗುವುದು ಎಂದರು.

ಹರ್ಯಾಣದ ಅಂಬಾಲ ಮೂಲದ ಅಶೋಕ ಜೈನ್‌, ಡಿಸಿಸಿ ಅಧ್ಯಕ್ಷ ಜಗದೇವ ಗುತ್ತೇದಾರ, ಕಲಬುರಗಿ ಉತ್ತರ ಶಾಸಕಿ ಕನೀಜ್ ಫಾತೀಮಾ, ಜಿಡಿಎ ಅಧ್ಯಕ್ಷ ಮಜರ್ ಖಾನ್, ಮಾರವಾಡಿ ಸಮಾಜದ ಅಧ್ಯಕ್ಷ ಲಕ್ಷ್ಮೀ ರಮಣ್ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here