ಶ್ರೀ ಮಹರ್ಷಿ ವಾಲ್ಮೀಕಿ ನಾಯಕ ಸಂಘದ ಮುಖಂಡರ ಸುದ್ದಿಗೋಷ್ಠಿ; ರಾಜೀನಾಮೆ ಪಡೆದರೆ ಉಗ್ರ ಹೋರಾಟದ ಎಚ್ಚರಿಕೆ

0
6

ಸುರಪುರ: ಶ್ರೀ ಮಹರ್ಷಿ ವಾಲ್ಮೀಕಿ ಅಭಿವೃಧ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾಗುವ 87 ಕೋಟಿ ರೂಪಾಯಿ ಹಣ ವರ್ಗಾವಣೆಗೂ ಸಚಿವ ಬಿ.ನಾಗೇಂದ್ರ ಅವರಿಗೂ ಯಾವುದೇ ಸಂಬಂಧವಿಲ್ಲ,ಅವರ ಮೇಲಿನ ಆರೋಪ ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಶ್ರೀ ಮಹರ್ಷಿ ವಾಲ್ಕೀಕಿ ನಾಯಕ ಸಂಘದ ತಾಲೂಕ ಕಾರ್ಯಾಧ್ಯಕ್ಷ ರಮೇಶ ದೊರೆ ಆಲ್ದಾಳ ಆರೋಪಿಸಿದರು.

ನಗರದ ರಿಕ್ರಿಯೇಷನ್ ಕ್ಲಬ್ ಆವರಣದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಭಾಗವಹಿಸಿ ಮಾತನಾಡಿ, ಬಿ. ನಾಗೇಂದ್ರ ಅವರು ಪರಿಶಿಷ್ಟ ಪಂಗಡದ ಪ್ರಭಾವಿ ನಾಯಕರಾಗಿದ್ದಾರೆ ಅವರ ಬೆಳವಣಿಗೆ ಸಹಿಸದ ಕೆಲ ಪಟ್ಟಭದ್ರ ಹಿತಾಸಕ್ತಿಗಳು ಅವರ ವಿರುದ್ಧ ಷಢ್ಯಂತ್ರ ಮಾಡಿ ಸಚಿವರನ್ನು ಮೂಲೆ ಗುಂಪು ಮಾಡುವ ಹುನ್ನಾರು ನಡೆಸಲಾಗಿದೆ ಎಂದು ದೂರಿದರು.

Contact Your\'s Advertisement; 9902492681

ಸಚಿವ ಬಿ, ನಾಗೇಂದ್ರ ಅವರು ರಾಜಕೀಯ ಪ್ರವೇಶ ಮಾಡಿದಾಗಿನಿಂದಲೂ ಯಾವುದೇ ಕಪ್ಪು ಚುಕ್ಕೆ ಇಲ್ಲದೆ ಬಡವರಿಗಾಗಿ ದೀನ ದಲಿತರಿಗಾಗಿ, ಹಿಂದುಳಿದ ವರ್ಗದ ಏಳ್ಗೆಗಾಗಿ ಹಗಲಿರುಳು ಶ್ರಮಿಸುತ್ತಿದ್ದಾರೆ. ಅಂತವರ ಮೇಲೆ ಕೆಲವರು ಸುಳ್ಳು ಆರೋಪ ಮಾಡಿ ಸಚಿವ ಸ್ಥಾನದ ರಾಜಿ ನಾಮೆ ಕೇಳುತ್ತಿರುವುದನ್ನು ಸಮಾಜ ಉಗ್ರವಾಗಿ ಖಂಡಿಸುತ್ತಿದೆ ಎಂದು ಕಿಡಿ ಕಾರಿದರು.

ವೆಂಕಟೇಶ ಬೇಟೆಗಾರ ಮಾತನಾಡಿ ನಿಗಮದ ನೌಕರ ಚಂದ್ರಶೇಖರ ಅವರು ಇಲಾಖೆಯಲ್ಲಿ ಲೆಕ್ಕಾಧಿಕಾರಿಯಾಗಿ ಕರ್ತವ್ಯ ನಿರ್ವ ಹಿಸುತ್ತಿದ್ದರು. ಸಚಿವರ ಸಂಬಂಧ ಏನಿದ್ದರು ವ್ಯವಸ್ಥಾಪಕರ ಜೊತೆಗೆ ಇರುತ್ತದೆ ಲೆಕ್ಕಾಧಿಕಾರಿಗೆ ಒತ್ತಡ ಹೇರುವ ಪ್ರಶ್ನೆಯೇ ಬರುವುದಿಲ್ಲ. ಭ್ರಷ್ಠಾಚಾರದಲ್ಲಿ ಭಾಗಿಯಾದವರ ಮೇಲೆ ಶಿಸ್ತುಕ್ರಮ ಜರುಗಿಸಲಿ ಅದು ಬಿಟ್ಟು ನಿಷ್ಪಪಕ್ಷಪಾತದಿಂದ ಇರುವಸಚಿವ ಬಿ. ನಾಗೇಂದ್ರ ಅವರನ್ನು ಈ ಪ್ರಕರಣದಲ್ಲಿ ತಳುಕು ಹಾಕುತ್ತಿರುವುದು ಸರಿಯಲ್ಲ ಎಂದರು.

ಆತ್ಮಹತ್ಯೆ ನಡೆದಿರುವುದು ಬೇರೆ ಕಾರಣ ಇರಬಹುದು ಘಟನೆಯಲ್ಲಿ ಸಚಿವರ ಪಾತ್ರ ಎಳ್ಳಷ್ಟು ಇಲ್ಲಾ. 87 ಕೋಟಿ ಹಣ ವರ್ಗಾವಣೆ ಆಗಿರುವ ಕುರಿತು ಸಮಗ್ರ ತನಿಖೆ ಮಾಡಿಸಬೇಕು ಮಾನ್ಯ ಮುಖ್ಯಂತ್ರಿಯವರು ಯಾವುದೇ ಕಾರಣಕ್ಕೂ ಸಚಿವರ ರಾಜಿನಾಮೆ ನೀಡುವುದಕ್ಕೆ ಒತ್ತಡ ಹೇರ ಬಾರದು ಒಂದು ವೇಳೆ ಸಚಿವರ ರಾಜಿನಾಮೆ ಪಡೆದರೆ ರಾಜ್ಯಾದ್ಯಂತ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಕೆ ನೀಡಿದರು.

ಇದೇ ಸಂದರ್ಭದಲ್ಲಿ ವಕೀಲ ಬಲಭೀಮ ನಾಯಕ,ಶ್ರೀನಿವಾಸ ದೊರೆ ಮಾಲಗತ್ತಿ ಮಾತನಾಡಿದರು.ಮುಖಂಡರಾದ ವಿಜಯಕುಮಾರ ಚಿಟ್ಟೆ, ಗೋಪಾಲ ನಾಯಕ, ಮಾರ್ಥಂಡಪ್ಪ ದೊರೆ, ರಾಜು ದರಬಾರಿ, ದೇವಿಂದ್ರ ಚಿಕ್ಕನಳ್ಳಿ, ನಿಂಗಪ್ಪ ಬೈರಿಮಡ್ಡಿ, ಅಮರಪ್ಪ ಶಖಾಪುರ ಇತರರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here