ಮದುವೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದಾಗಲೇ ಹಾರಿಹೋಯ್ತು ಯುವಕನ ಪ್ರಾಣಪಕ್ಷಿ

0
121

ಕಲಬುರಗಿ: ಮದುವೆಯ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಯುವಕ ಓರ್ವ ಸಾವನ್ನಪ್ಪಿರುವ ವಿಸ್ಮಯಕಾರಿ ದಾರುಣ್ಯ ಘಟನೆ, ಚಿತ್ತಾಪುರ ತಾಲೂಕಿನ ಹೊಸೂರ ಗ್ರಾಮದಲ್ಲಿ ನಂವೆಬರ್ 30 ರಂದು ನಡೆದಿದೆ.

ಇದೀಗ ಘಟನೆಯ ಬಗ್ಗೆನಿನ ವಿಡಿಯೋ ವೈರಲ್ ಆಗಿರುವ ಮೂಲ ಬೆಳಕಿಗೆ ಬಂದಿದೆ. ಅಶೋಕ (25) ಎಂಬ ಯುವಕ ಡಾನ್ಸ್ ಮಾಡುತ್ತಲೇ ಪ್ರಾಣ ಬಿಟ್ಟಿದ್ದು ಯುವಕ, ನ.30 ರಂದು ಚಿತ್ತಾಪುರ ತಾಲೂಕಿನ ಹೊಸೂರ ಗ್ರಾಮದಲ್ಲಿ ತನ್ನ ಸ್ನೇಹಿತನ ಮದುವೆ ಕಾರ್ಯದಲ್ಲಿ ಪಾಲ್ಗೊಂಡಿದ ಅಶೋಕ ರಾತ್ರಿ ನಡೆದ ಮದುವೆ ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಲೇ ಇಹಲೋಕ ತ್ಯಜಿಸಿದ್ದಾನೆ.

Contact Your\'s Advertisement; 9902492681

ನಿರಂತರವಾಗಿ 15 ರಿಂದ 20 ನಿಮಿಷಗಳ ಕಾಲ ಡ್ಯಾನ್ಸ್ ಮಾಡುತ್ತದ್ದ ಅಶೋಕ ಕೊನೆಗೆ ಇದ್ದಕ್ಕಿದ್ದಂತೆ ಕುಸಿದು ಬಿದ್ದಿದ್ದಾನೆ. ತಕ್ಷಣವೇ ಆಸ್ಪತ್ರೆಗೆ ಸಾಗಿಸುವಾಗ ಮಾರ್ಗ ಮಧ್ಯದಲ್ಲಿಯೇ ಸಾವನ್ನಪ್ಪಿದ್ದಾನೆ ಎಂದು ತಿಳಿದು ಬಂದಿದ್ದು, ಇನ್ನು ದೃಶ್ಯ ಮೊಬೈಲ್ ವಿಡಿಯೋದಲ್ಲಿ ಸೆರೆಯಾಗಿದೆ.

ಲಘು ಹೃದಯಾಘಾತದಿಂದ ಸಾವು ಸಂಭವಿಸಿರ ಬಹುದೆಂದು ಶಂಕಿಸಲಾಗಿದೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here