ಗುಲ್ಬರ್ಗಾ ವಿವಿ ಕುಲಪತಿಗಳಾಗಿ ಸ್ಥಳೀಯ ಅಭ್ಯರ್ಥಿ ಅಗಸರ ನೇಮಕಕ್ಕೆ ಸಮಿತಿಯ ಹರ್ಷ

0
49

ಕಲಬುರಗಿ: ಗುಲಬರ್ಗಾ ವಿಶ್ವವಿದ್ಯಾಲಯದ ನೂತನ ಕುಲಪತಿ ಗಳಾಗಿ ಸರ್ಕಾರ ಕಲ್ಯಾಣ ಕರ್ನಾಟಕದ  ಸ್ಥಳೀಯವರಾದ ದಯಾನಂದ ಅಗಸರರವರನ್ನು ನೇಮಕ ಮಾಡಿರುವದು ಸ್ವಾಗತಾರ್ಹ ಕ್ರಮವಾಗಿದೆ ಎಂದು ಹೈದ್ರಾಬಾದ ಕರ್ನಾಟಕ ಜನಪರ ಸಂಘರ್ಷ ಸಮಿತಿಯ ಸಂಸ್ಥಾಪಕ ಅಧ್ಯಕ್ಷರಾದ ಲಕ್ಷ್ಮಣ ದಸ್ತಿ ಹರ್ಷ ವ್ಯಕ್ತಪಡಿಸಿದ್ದಾರೆ.

ಈ ಕುರಿತು ಸಮಿತಿಯಿಂದ ಪತ್ರಿಕಾ ಪ್ರಕಟಣೆ ನೀಡಿ ಸುಮಾರು ದಿನಗಳಿಂದ ಈ ಭಾಗದ ಜನಮಾನಸದ ಕೂಗಿಗೆ ಪೂರಕವಾಗಿ ಕಳೆದ ವರ್ಷದಿಂದ ಗುಲಬರ್ಗಾ ವಿಶ್ವವಿದ್ಯಾಲಯದ  ಕುಲಪತಿ ಸ್ಥಾನಕ್ಕೆ ಸ್ಥಳೀಯ ಅಭ್ಯರ್ಥಿಯನ್ನೆ ನೇಮಕ ಮಾಡಬೇಕೆಂದು ಅಗ್ರಹಿಸಿ  ಮುಖ್ಯಮಂತ್ರಿಗಳಿಗೆ ಮತ್ತು ಉನ್ನತ ಶಿಕ್ಷಣ ಸಚಿವರಿಗೆ ಅದರಂತೆ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳಿಗೆ ನಿರಂತರ  ಮನವಿ  ಮಾಡಿಕೊಂಡಿರುವದಕ್ಕೆ ಸ್ಪಂಪನೆ ಮಾಡಿ,  ರಾಜಕೀಯ ಇಚ್ಛಾಶಕ್ತಿ ಪ್ರದರ್ಶಿಸಿಸಿರುವದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ.

Contact Your\'s Advertisement; 9902492681

ಲಕ್ಷ್ಮಣ ದಸ್ತಿ ಸಮಿತಿ ಸದಸ್ಯರ ನೇತೃತ್ವದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯಕ್ಕೆ ಭೇಟಿ ನೀಡಿ  ನೂತನ  ಕುಲಪತಿಗಳಾಗಿ ನೇಮಕವಾದ ಪ್ರೋ.ದಯಾನಂದ ಅಗಸರರವರನ್ನು ಗೌರವ ಸನ್ಮಾನಿಸಿ ಶುಭ ಹಾರೈಸಿ,  ವಿಶ್ವವಿದ್ಯಾಲಯದ  ಸಮಗ್ರ ಅಭಿವೃದ್ಧಿಗೆ ನೂತನ ಕುಲಪತಿಗಳು  ತಮ್ಮ ಬದ್ಧತೆಯನ್ನು ಪ್ರದರ್ಶಿಸಲು ಮನವಿ ಮಾಡಿದರು. ಈ ಕುರಿತು ಪ್ರತಿಕ್ರಿಯಿಸಿದ ನೂತನ ಕುಲಪತಿ ದಯಾನಂದ ಅಸಗರ ಸರ್ಕಾರ  ತಮಗೆ ವಹಿಸಿರುವ ಈ ಗುರುತರ ಜವಾಬ್ದಾರಿಯಗೆ  ತಕ್ಕಂತೆ  ಎಲ್ಲರ  ಸಹಕಾರದೊಂದಿಗೆ ವಿಶ್ವವಿದ್ಯಾಲಯದ ರಚನಾತ್ಮಕ ಪ್ರಗತಿಗೆ ಶ್ರಮಿಸುವದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ  ಮುಖಂಡರಾದ ಮನೀಷ ಜಾಜು, ಲಿಂಗರಾಜ ಸಿರಗಾಪೂರ, ಅಬ್ದುಲ ರಹೀಮ,ಮಹ್ಮದ್ ಮೀರಾಜೂದ್ದಿನ, ಮಲ್ಲಿನಾಥ ಸಂಗಶೆಟ್ಟಿ, ವೀರೇಶ ಪುರಾಣಿಕ, ಶಿವಲಿಂಗಪ್ಪ ಭಂಡಕ,ಮುತ್ತಣ್ಣ ನಾಡಗೇರಿ, ಅಸ್ಲಮ ಚೌಂಗೆ ಸೇರಿದಂತೆ ಮುಂತಾದವರು ನಿಯೋಗದಲ್ಲಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here