ಮಳೆಗಾಗಿ ಪ್ರಾರ್ಥಿಸಿ ಸಾತನೂರನಲ್ಲಿ ಹಳ್ಳದ ಜಾತ್ರೆ

0
23

ಚಿತ್ತಾಪುರ:ತಾಲೂಕಿನ ಸಾತನೂರ ಗ್ರಾಮದಲ್ಲಿ ಮಳೆಗಾಗಿ ಪ್ರಾರ್ಥಿಸಿ ರೈತರು ಬಸವಣ್ಣನ ಮೂರ್ತಿಯ ಮುಖ ತಿರುಗಿಸಿ ಭಕ್ತಿಯಿಂದ ಪೂಜೆ ಮಾಡಿ,ಹಳ್ಳದ ಜಾತ್ರೆ ನಡೆಸಿದರು.

ಗ್ರಾಮದ ಹೊರವಲಯದಲ್ಲಿರುವ ಚೌಡಮ್ಮ ಬಾವಿ ಹತ್ತಿರ ಇರುವ ಬಸವಣ್ಣನ ಮೂರ್ತಿಯನ್ನು ಊರಿನ ರೈತರು ಪೂರ್ವದಿಂದ ಪಶ್ಚಿಮಕ್ಕೆ ತಿರುಗಿಸಿ ಪೂಜೆ ಸಲ್ಲಿಸಿ ನಂತರ ಐದು ದಿವಸದ ನಂತರ ಮತ್ತೆ ಪೂರ್ವಕ್ಕೆ ತಿರುಗಿಸಿ ಮಾಲಿ ಗೌಡರಿಂದ ಪೂಜೆ ಸಲ್ಲಿಸಿ ಮಳೆ ಬರಲಿ ಎಂದು ಗ್ರಾಮದ ರೈತರು ಪ್ರಾರ್ಥನೆ ಸಲ್ಲಿಸಿದರು.ಪೂಜೆ ಸಲ್ಲಿಸಿದ ನಂತರ ಮಳೆ ಬಂದಿದು ಪವಾಡವೇ ಅನ್ನಬಹುದು. ಬಿತ್ತನೆ ಮಾಡಿದ ಬೆಳೆ ಒಣಗುತ್ತಿದರಿಂದ ಮಳೆ ಅವಶ್ಯಕವಾಗಿತ್ತು.ಮೂರ್ತಿ ತಿರುಗಿಸಿ ಪೂಜೆ ಸಲ್ಲಿಸಿದ ನಂತರ ಮಳೆ ಸುರಿದಿದ್ದು,ರೈತರ ಮುಖದಲ್ಲಿ ಮಂದಹಾಸ ಮೂಡಿಸಿತು.ಮಳೆ ಬಂದಿದ್ದು ರೈತರಿಗೆ ಭಾರಿ ಅನುಕೂಲವಾಗಿದೆ ಈ ಮಳೆಯನ್ನು ಬಂಗಾರದ ಮಳೆ ಎಂದು ರೈತ ಶರಣು ಬೊಮನಹಳ್ಳಿ ಸಂತೋಷ ವ್ಯಕ್ತಪಡಿಸಿದವರು.

Contact Your\'s Advertisement; 9902492681

ಹಲಗೆ,ಡೊಳ್ಳು,ಬಾಜಿಯೊಂದಿಗೆ ಗ್ರಾಮದಿಂದ ಬಸವಣ್ಣ ಮೂರ್ತಿವರಿಗೆ ನೈವೇದ್ಯದೊಂದಿಗೆ ಮೆರವಣಿಗೆ ಮಾಡಲಾಯಿತು.ಗ್ರಾಮಸ್ಥರೆಲ್ಲರು ಬಸವಣ್ಣನಿಗೆ ನೈವೇದ್ಯ ಸಲ್ಲಿಸಿ,ಸ್ವಾಮಿಗಳಿಗೆ ಹೊರಣಗಡಬು,ತುಪ್ಪ ಊಟ ಮಾಡಿಸಿದರು.ಮಾಲದಿ,ಕಡಬು,ಬಿಳಿ ಜೋಳದ ರೊಟ್ಟಿ,ಸಜ್ಜೆ ರೊಟ್ಟಿ,ಹಿಂಡಿ,ಅನ್ನ ಸೇರಿ ವಿವಿಧ ಬಗೆಯ ಅಡುಗೆ ತಯಾರಿಸಿ ತಂದು ಊಟ ಸವಿದರು.

ಹಲವು ವರ್ಷಗಳಿಂದ ರೈತರ ನಂಬಿಕೆಯಂತೆ ಮಳೆಯಾಗುತ್ತಿದೆ.ಪ್ರತಿ ವರ್ಷವೂ ಮಳೆಗಾಗಿ ಹಳ್ಳ ಬಸವಣ್ಣ ಜಾತ್ರೆ ಮಾಡುತ್ತಾರೆ.ಇದೊಂದು ಪವಾಡವೆಂದು ಊರಿನ ಗ್ರಾಮಸ್ಥರು ಹೇಳುತ್ತಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here