ಛಾಯಾಗ್ರಾಹಕರಿಗೆ ವಿಶೇಷ ಪರಿಹಾರ ಪ್ಯಾಕೇಜ್ ನೀಡುವಂತೆ ಸಿಎಂಗೆ ಮನವಿ

0
33

ಕಲಬುರಗಿ: ಜಿಲ್ಲೆಯ ವೃತ್ತಿಪರ ಛಾಯಾಗ್ರಾಹಕರು ಕರೋನಾ ಎರಡನೇ ಅಲೆಯಿಂದಾಗಿ ತೀವ್ರ ಸಂಕಷ್ಠಕ್ಕೆ ಗುರಿಯಾಗಿದ್ದು, ವಿಶೇಷ ಪರಿಹಾರದ ಪ್ಯಾಕೇಜ್ ಘೋಷಿಸಬೇಕೆಂದು ಕಲಬುರಗಿ ಜಿಲ್ಲಾ ಪೋಟೋಗ್ರಾಫರ್ ಅಸೋಸಿಯೇಷನ್ ವತಿಯಿಂದ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಕಲಬುರಗಿ ಜಿಲ್ಲೇಯಾದಂತ ವೃತ್ತಿಪರ ಛಾಯಾಗ್ರಾಹಕರು ಸಾರ್ವಜನಿಕವಾಗಿ ಛಾಯಾಚಿತ್ರ ಹಾಗೂ ಚಿತ್ರಿಕರಣ ಸೇವೆ ಸಲ್ಲಿಸುತ್ತಿದ್ದು, ಪ್ರತಿಯೊಬ್ಬರು ಜೀವನದ ಅವಿಸ್ಮರಣೆಯ ಕ್ಷಣಗಳನ್ನು ದಾಖಲಿಸಿ ನೆನಪಿನ ಬುತ್ತಿಯನ್ನು ಕಟ್ಟಿಕೊಡುವ ಕಾಯಕವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಸ್ವಾಭಿಮಾನದಿಂದ ಬದುಕು ಕಟ್ಟಿಕೊಂಡು ಸರಕಾರಕ್ಕೆ ಹೊರೆಯಾಗದಂತೆ ಸ್ವಯಂ ಉದ್ಯೋಗ ಮಾಡುತ್ತಾ ನಿರುದ್ಯೋಗಿ ಯುವಕರಿಗೆ ಕೆಲಸ ಕಲಿಸಿಕೊಟ್ಟು ಅವರ ಜೀವನ ಮಾರ್ಗಕ್ಕೆ ಕಾರಣರಾಗಿದ್ದಾರೆ ಎಂದರು ಅಸೋಸಿಯೇಷನ್‌ನ ಪ್ರಧಾನ ಕಾರ್ಯದರ್ಶಿ ಶರಣಬಸಪ್ಪ ಎಸ್.ಕಣ್ಣಿ ಅವರು ತಿಳಿಸಿರು.

Contact Your\'s Advertisement; 9902492681

ಇತ್ತೀಚನ ವರ್ಷಗಳಲ್ಲಿ ತಂತ್ರಜ್ಞಾನದ ಅವಿಷ್ಕಾರದಿಂದ ವೃತ್ತಿ ಜನರ ಬೇಡಿಕೆ ಕಡಿಮೆಯಾಗಿದೆ ಜೀವನ ಸಾಗಿಸುವುದು ಕಷ್ಠಕರವಾಗಿದೆ. ಕರೋನಾ ಮಹಾಮಾರಿಯ ಎರಡನೇ ಅಲೆಯಿಂದಾಗಿ ಛಾಯಾಚಿತ್ರಗ್ರಾಹಕರು ಆರ್ಥಿಕವಾಗಿ ಸಂಕಷ್ಠಕೀಡಾಗಿದ್ದು, ಸರಕಾರದ ನಿಯಮಾನುಸಾರ ಸ್ಟುಡಿಯೋಗಳು ಮುಚ್ಚಲ್ಪಟ್ಟಿದ್ದು ಹಾಗೂ ಯಾವುದೇ ಮದುವೆ ಮತ್ತು ಇತರೆ ಸಮಾರಂಭಗಳನ್ನು ತಡೆಹಿಡಿಯಲಾಗಿದೆ ಹೀಗಾಗಿ ಕಳೆದ ಎರಡು ವರ್ಷಗಳಿಂದ ಯಾವುದೇ ರೀತಿಯ ಕೆಲಸವಿಲ್ಲದೇ ಛಾಯಾಗ್ರಾಹಕರು ಆರ್ಥಿಕವಾಗಿ ಸಂಕಷ್ಠಕ್ಕೆ ಇಡಾಗಿದ್ದಾರೆ ಎಂದು ತಿಳಿಸಿದರು.

ಸರಕಾರ ಲಾಕ್‌ಡೌನ್ ಘೋಷಿಸಿರುವುದರಿಂದ ಹಾಗೂ ಸರಕಾರದ ನಿರ್ಭಧದಿಂದ ೨೦೨೧ ಅಂತ್ಯದವರೆಗೂ ಯಾವುದೇ ಮದುವೆ ಮತ್ತು ಇತರೆ ಕಾರ್ಯಕ್ರಮಗಳು ಸಿಗುವುದಿಲ್ಲ. ಹೀಗಾಗಿ ಕುಟುಂಬದ ನಿರ್ವಹಣೆ, ಮಕ್ಕಳ ಶಾಲಾ ಶುಲ್ಕ, ಮನೆಯ ಬಾಡಿಗೆ ಹಾಗೂ ಅಂಗಡಿಯ ಬಾಡಿಗೆ ಮತ್ತು ವಿದ್ಯುತ್, ನೀರು ಹಾಗೂ ಸಾಲದ ಹೊರೆ ಕಷ್ಠಕರವಾಗಿದೆ ಎಂದು ಮನವಿಯಲ್ಲಿ ತಮ್ಮಗಳ ಸಮಸ್ಯೆಗಳನ್ನು ಆಲಿಸಬೇಕೆಂದು ಮನವಿ ಮಾಡಿದರು.

ಈ ವಿಷಯದ ಬಗ್ಗೆ ಕಳೆದ ವರ್ಷದಿಂದ ಸರಕಾರಕ್ಕೆ ಮನವಿ ಮಾಡುತ್ತ ಬಂದಿದ್ದೇವೆ ಅದರಂತೆ ಕಳೆದ ವರ್ಷದಲ್ಲಿ ಅಂದರೆ ೬ನೇ ನವೆಂಬರ್ ೨೦೨೦ ರಂದು ಛಾಯಾಗ್ರಾಹಕರಿಗೆ ವಿಶೇಷ ಪರಿಹಾರದ ಪ್ಯಾಕೇಜ್ ಆದಷ್ಟು ಬೇಗನೆ ನೀಡಬೇಕೆಂದು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಲಾಗಿತ್ತು. ಆದರೂ ಸಹ ಇಲ್ಲಿಯವರೆಗೆ ಯಾವುದೇ ಪರಿಹಾರ ಸರಕಾರದಿಂದ ನೀಡಿರುವುದಿಲ್ಲ ಆದಕಾರಣ ದಯಮಾಡಿ ಛಾಯಾಗ್ರಾಹಕರಿಗೆ ವಿಶೇಷ ಪರಿಹಾರದ ಪ್ಯಾಕೇಜ್‌ನ್ನು ನೀಡಬೇಕೆಂದು ಮನವಿ ಮಾಡಲಾಯಿತು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here