ವಲಗುಂದ : ರಾಷ್ಟ್ರೀಯ ರೈತರ ದಿನಾಚರಣೆ

0
4

ನವಲಗುಂದ: ಮಾಜಿ ಪ್ರಧಾನಿ ದಿವಂಗತ ಚರಣಸಿಂಗ್ ಅವರ ಜನ್ಮದಿನದ ಅಂಗವಾಗಿ ನಡೆದ ರಾಷ್ಟ್ರೀಯ ರೈತ ದಿನದ ಕಾರ್ಯಕ್ರಮದಲ್ಲಿ ಕಾಂಗ್ರೆಸ್‌ ಮುಖಂಡ ಎನ್.ಎಚ್.ಕೋನರಡ್ಡಿ ನೇತೃತ್ವದಲ್ಲಿ ಗುರುವಾರ ಪಟ್ಟಣದ ಹುತಾತ್ಮ ಬಸಪ್ಪ ಲಕ್ಕುಂಡಿ ವೀರಗಲ್ಲಿಗೆ ಮಾಲಾರ್ಪಣೆ ಮಾಡಲಾಯಿತು. ರೈತರಿಗೆ ಎದುರಾಗಿರುವ ಸಂಕಷ್ಟಗಳು ದೂರವಾಗಲಿ ಎಂದು ಪ್ರಾರ್ಥನೆ ಸಲ್ಲಿಸಲಾಯಿತು.

ಕೋನರಡ್ಡಿ ಮಾತನಾಡಿ ‘‌ಚರಣಸಿಂಗ್ ರೈತರ ಸಾಮಾಜಿಕ ಹಾಗೂ ಆರ್ಥಿಕ ಅಭಿವೃದ್ಧಿಗಾಗಿ ಅಧುನಿಕ ಕೃಷಿ ಪದ್ಧತಿಗಳನ್ನು ಅಳವಡಿಸಿ ಅನ್ನದಾತರಿಗೆ ಪ್ರೋತ್ಸಾಹ ನೀಡಿದ್ದರು. ಆದರೆ ಈಗಿನ ಕೇಂದ್ರ ಸರ್ಕಾರ ರೈತರಿಗೆ ಮಾರಕವಾದ ಮೂರು ಕೃಷಿ ಕಾಯ್ದೆಗಳನ್ನು ತಂದು ರೈತ ವಿರೋಧಿ ಧೋರಣೆಗೆ ಕಾರಣವಾಯಿತು’ ಎಂದರು.

Contact Your\'s Advertisement; 9902492681

‘ಮಹದಾಯಿ, ಕಳಸಾ ಬಂಡೂರಿ ಯೋಜನೆಗೆ ಟೆಂಡರ್ ಕರೆದು ಕಾಮಗಾರಿ ಪ್ರಾರಂಭಿಸಲು ಹೋರಾಟ ಮಾಡಿದರೂ ಸರ್ಕಾರ ಸ್ಪಂದಿಸುತ್ತಿಲ್ಲ. ರೈತ ಸುರಕ್ಷಾ ಪ್ರಧಾನಮಂತ್ರಿ ಫಸಲ ಬೀಮಾ ಯೋಜನೆಯಿಂದ 2018ರಿಂದ 2021ರ ವರೆಗೆ ಮುಂಗಾರು, ಹಿಂಗಾರು ಬೆಳೆವಿಮೆ ಪರಿಹಾರ ಬಿಡುಗಡೆಯಾಗಲಿಲ್ಲ. ಪ್ರಕೃತಿ ವಿಕೋಪದಿಂದಲು ರೈತರಿಗೆ ಸಾಕಷ್ಟು ಹಾನಿಯಾಗಿದ್ದು ಈಗಲಾದರೂ ರಾಜ್ಯ ಹಾಗೂ ಕೇಂದ್ರ ಸರ್ಕಾರ ಎಚ್ಚೆತ್ತುಕೊಂಡು ಪರಿಹಾರ ನೀಡಿ ರೈತರನ್ನು ಸಂಕಷ್ಟದಿಂದ ಪಾರು ಮಾಡಬೇಕು’ ಎಂದು ಆಗ್ರಹಿಸಿದರು.

ಪುರಸಭೆ ಸದಸ್ಯರಾದ ಜೀವನ ಪವಾರ, ಹನಮಂತ ವಾಲೀಕಾರ, ಶಿವಾನಂದ ತಡಸಿ, ಮುಖಂಡರಾದ ನಿಜಗುಣಿ ಗಾಡದ, ವೀರಭದ್ರಗೌಡ ಪಾಟೀಲ, ಆನಂದ ಹವಳಕೋಡ, ಅಬ್ಬು ಕುನ್ನಿಬಾವಿ, ರವಿ ತೋಟದ, ಬಸನಗೌಡ ಪಾಟೀಲ, ಕುಮಾರ ಲಕ್ಕಮ್ಮನವರ, ಅಪ್ಪಣ್ಣ ನದಾಫ, ಹುಚ್ಚಪ್ಪ ಅವರಕೇರಿ ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here