ಬೆಳೆ ಪರಿಹಾರ ವಿತರಣೆಯಲ್ಲಿ ಅವ್ಯವಹಾರ:ಅಧಿಕಾರಿಗಳ ವಿರುಧ್ಧ ಕ್ರಮಕ್ಕೆ ಡಿಎಸ್‍ಎಸ್ ಮನವಿ

0
10

ಸುರಪುರ: ತಾಲೂಕಿನ ವಿವಿಧ ಗ್ರಾಮಗಳಲ್ಲಿ ಮಳೆಯಿಂದ ಹಾನಿಗೊಳಗಾದ ರೈತರ ಬೆಳೆಗಳಿಗೆ ಪರಿಹಾರ ವಿರತಣೆಯಲ್ಲಿ ಅವ್ಯವಹಾರ ನಡೆದಿದ್ದು ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಮುಖಂಡರು ಆಗ್ರಹಿಸಿ ನಗರದ ತಹಸೀಲ್ದಾರ್ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಮುಖಂಡರು,ಕಕ್ಕೇರಾ ಹೋಬಳಿಯ ದೇವತ್ಕಲ್,ಕೋನ್ಹಾಳ,ಹಂದ್ರಾಳ ಎಸ್.ಡಿ ಗ್ರಾಮಗಳಲ್ಲಿ 2022-23ನೇ ಸಾಲಿನಲ್ಲಿ ಮಹಾ ಮಳೆಯಿಂದ ರೈತರ ಬೆಳೆಗಳು ಹಾಳಾಗಿದ್ದು ಸರಿಯಾದ ಪರಿಹಾರವನ್ನು ನೀಡಿಲ್ಲ.ಅಲ್ಲದೆ ಅನೇಕ ರೈತರು ಜಮೀನುಗಳಲ್ಲಿ ಸರ್ವೇ ಸಂದರ್ಭದಲ್ಲಿ ಅಧಿಕಾರಿಗಳು ಹತ್ತಿ ಬೆಳೆದವರಿಗೆ ಭತ್ತ ಎಂದು ನಮೂದಿಸಿ ಭತ್ತ ಇರುವ ಜಮೀನುಗಳಲ್ಲಿ ಹತ್ತಿ ಎಂದು ಸುಳ್ಳು ಬೆಳೆ ಸಮೀಕ್ಷೆ ವರದಿ ಮಾಡಿದ್ದರಿಂದ ನುರಾರು ರೈತರು ಸರಕಾರದ ಪರಿಹಾರ ದಿಂದ ವಂಚಿತರಾಗಿ ತೊಂದರೆ ಪಡುವಂತಾಗಿದೆ.ಆದ್ದರಿಂದ ಕೂಡಲೇ ಈ ಅವ್ಯವಹಾರವನ್ನು ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕ್ರಿಮಿನಲ್ ಕೇಸ್ ದಾಖಲು ಮಾಡಿ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಒತ್ತಾಯಿಸುತ್ತೇವೆ,ಒಂದು ವೇಳೆ ನಮ್ಮ ಮನವಿಗೆ ಸ್ಪಂಧಿಸದಿದ್ದಲ್ಲಿ ಮುಂದಿನ ದಿನಗಳಲ್ಲಿ ರೈತರೊಂದಿಗೆ ಉಗ್ರ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದರು.

Contact Your\'s Advertisement; 9902492681

ನಂತರ ತಹಸೀಲ್ದಾರರಿಗೆ ಮನವಿ ಸಲ್ಲಿಸಿದರು.ಪ್ರತಿಭಟನೆಯಲ್ಲಿ ಸಂಘಟನೆಯ ಜಿಲ್ಲಾ ಸಂಘಟನಾ ಸಂಚಾಲಕ ಶಿವಲಿಂಗ ಹಸನಾಪುರ,ತಾಲೂಕು ಸಂಚಾಲಕ ತಿಪ್ಪಣ್ಣ ಶೆಳ್ಳಗಿ,ಮುಖಂಡರಾದ ಶೇಖರ ಮಂಗಳೂರು,ಎಮ್.ಪಟೇಲ್,ರಾಜು ಬಡಿಗೇರ,ಚನ್ನಬಸಪ್ಪ ತಳವಾರ,ಖಾಜಾ ಅಜ್ಮೀರ್,ಮಾನಪ್ಪ ಶೆಳ್ಳಗಿ,ಶರ್ಮತ ಖುರೇಶಿ,ಮಾನಪ್ಪ ಶೆಳ್ಳಗಿ,ಪಾರಪ್ಪ ದೇವತ್ಕಲ್,ಮೌನೇಶ ದೇವತ್ಕಲ್,ಮೌನೇಶ ತಿಂಥಣಿ,ಹಣಮಂತ ದೊಡ್ಮನಿ,ಶ್ರವಣಮೂರ್ತಿ,ಭೀಮರಾಯ ತಳವಾರ,ಹಣಮಂತ ರತ್ತಾಳ,ಯಲ್ಲಪ್ಪ ರತ್ತಾಳ ಸೇರಿದಂತೆ ಅನೇಕರಿದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here