ಚಿತ್ತಾಪುರಕ್ಕೆ ಯಾರೇ ಬಂದ್ರೂ ಕೈ ಗೆಲುವು ಖಚಿತ

0
69

ವಾಡಿ: ರಾಜ್ಯ ಸೇರಿದಂತೆ ಬಿಜೆಪಿಯ ದೇಹಲಿಯ ನಾಯಕರು ಆಗಮಿಸಿ ಚಿತ್ತಾಪುರ ಮತಕ್ಷೇತ್ರದಲ್ಲಿ ಮತಯಾಚನೆ ಮಾಡಿದರೂ ಕಾಂಗ್ರೆಸ್ ಅಭ್ಯರ್ಥಿ ಗೆಲ್ಲುವುದನ್ನು ಮಾತ್ರ ಯಾರಿಂದಲೂ ತಡೆಯಲಾಗದು ಎಂದು ವಾಡಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಸೈಯ್ಯದ್ ಮಹೆಮೂದ್ ಸಾಹೇಬ ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಪಟ್ಟಣದಲ್ಲಿ ಗುರುವಾರ ಸುದ್ದಿಗಾರರೊಂದಿಗೆ ಮಾತನಾಡಿ ಪ್ರತಿಕ್ರೀಯಿಸಿದ ಮಹೆಮೂದ್ ಸಾಹೇಬ, ಅಭಿವೃದ್ಧಿ ವಿಷಯದಲ್ಲಿ ಕ್ಷೇತ್ರದ ಜನರ ಮನೆಮಾತಾಗಿರುವ ಶಾಸಕ ಪ್ರಿಯಾಂಕ್ ಖರ್ಗೆ ಅವರು ಯುವಕರ, ಮಹಿಳೆಯರ, ರೈತರ, ಕಾರ್ಮಿಕರ ಭವಿಷ್ಯವಾಗಿದ್ದಾರೆ. ಕೋವಿಡ್ ಕಾಲದಲ್ಲಿ ಎಲ್ಲರೂ ಮನೆ ಸೇರಿಕೊಂಡಿದ್ದರೆ ರಾಜ್ಯದ ಏಕೈಕ ಶಾಸಕ ಪ್ರಿಯಾಂಕ್, ಕೋವಿಡ್ ನೀಯಮಗಳನ್ನು ಉಲ್ಲಂಘಿಸಿ ಕೊರೊನಾ ಸೊಂಕಿತರ ಯೋಗಕ್ಷೇಮ ವಿಚಾರಿಸಿದ್ದಾರೆ. ಕೋವಿಡ್ ಕೇರ್‌ಗಳಿಗೆ ಅಗತ್ಯ ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವ ಮೂಲಕ ರೋಗಿಗಳಿಗೆ ಧೈರ್ಯ ತುಂಬಿದ್ದಾರೆ. ಅಭಿವೃದ್ಧಿಯ ದೂರದೃಷ್ಠಿ ಹೊಂದಿರುವ ಅಭ್ಯರ್ಥಿಯನ್ನು ಸೋಲಿಸುವುದಾಗಿ ಬಿಜೆಪಿ ಹಗಲುಗನಸು ಕಾಣುತ್ತಿದೆ ಟೀಕಿಸಿದ್ದಾರೆ.

Contact Your\'s Advertisement; 9902492681

ಕಾಂಗ್ರೆಸ್ ಅಭ್ಯರ್ಥಿಯ ವಿರುದ್ಧ ಒಬ್ಬ ಉತ್ತಮ ವ್ಯಕ್ತಿಯನ್ನು ಕಣಕ್ಕಿಳಿಸಲು ಬಿಜೆಪಿಗೆ ಸಾಧ್ಯವಾಗಿಲ್ಲ. ಬಿಜೆಪಿ ಚಿತ್ತಾಪುರಕ್ಕೆ ತನ್ನ ಅಭ್ಯರ್ಥಿಯ ಹೆಸರು ಪ್ರಕಟಿಸುತ್ತಿದ್ದಂತೆ ಜನರಿಂದ ಟೀಕೆಗಳು ಬಿರುಗಾಳಿಯಂತೆ ಹರಿದು ಬರುತ್ತಿವೆ. ಅನೇಕ ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಿಜೆಪಿ ಅಭ್ಯರ್ಥಿಯ ವಿರುದ್ಧ ವಿವಿಧ ರಾಜ್ಯಗಳ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ. ಇದು ಇಡೀ ಕ್ಷೇತ್ರದ ಜನತೆಗಷ್ಟೇಯಲ್ಲ, ಇವರ ಕೀರ್ತಿ ರಾಜ್ಯದಾದ್ಯಂತ ಹಬ್ಬಿದೆ. ಅಭ್ಯರ್ಥಿಯತ ಆಯ್ಕೆಯ ವಿರುದ್ಧ ಸ್ವಪಕ್ಷದ ನಾಯvಕರು ಮತ್ತು ಕಾರ್ಯಕರ್ತರು ಬಹಿರಂಗವಾಗಿ ಅಸಮಾಧಾನ ಹೊರಹಾಕಿದ್ದಾರೆ. ಇದರ ನಡುವೆಯೂ ರಾಜ್ಯ ಮತ್ತು ರಾಷ್ಟçಮಟ್ಟದ ಬಿಜೆಪಿ ನಾಯಕರು ಯಾವ ಮುಖ ಇಟ್ಟುಕೊಂಡು ಚಿತ್ತಾಪುರಕ್ಕೆ ಬಂದು ಮತಯಾಚನೆ ಮಾಡುತ್ತಾರೆ? ಎಂದು ಮಹೆಮೂದ್ ಸಾಹೇಬ ಪ್ರಶ್ನಿಸಿದ್ದಾರೆ.

ಕ್ಷೇತ್ರದ ಜನರು ಪ್ರಜ್ಞಾವಂತರಿದ್ದಾರೆ. ಅಭ್ಯರ್ಥಿಯ ವ್ಯಕ್ತಿತ್ವ ಮತ್ತು ಜೀವನದ ಹಿನ್ನೆಲೆಯನ್ನು ಸೂಕ್ಷö್ಮವಾಗಿ ಅರ್ಥಮಾಡಿಕೊಳ್ಳುತ್ತಾರೆ. ಮೆರವಣಿಗೆಯಲ್ಲಿ ಸಾಗರದಷ್ಟು ಜನರನ್ನು ಸೇರಿಸಿದರೆ ಚುನಾವಣೆ ಗೆಲ್ಲಲಾಗುವುದಿಲ್ಲ. ಮತದಾರರ ಹೃದಯ ಗೆದ್ದವರು ಮಾತ್ರ ಗೆಲ್ಲುತ್ತಾರೆ. ಆ ವ್ಯಕ್ತಿತ್ವ ಕಾಂಗ್ರೆಸ್ ಅಭ್ಯರ್ಥಿ ಪ್ರಿಯಾಂಕ್ ಖರ್ಗೆ ಹೊಂದಿದ್ದಾರೆ. ಚಿತ್ತಾಪುರಕ್ಕೆ ಮೋದಿ, ಅಮಿತ್‌ಶಾ, ಬೊಮ್ಮಾಯಿ, ಯಡಿಯೂರಪ್ಪ ಯಾರೇ ಬಂದ್ರೂ ಏನೂ ಪ್ರಯೋಜನವಾಗುವುದಿಲ್ಲ. ಎದುರಾಳಿಗಳು ಎಸೆಯುವ ಎಲ್ಲಾ ರೀತಿಯ ಕುತಂತ್ರದ ಪ್ರತಿರೋಧಗಳನ್ನು ಎದುರಿಸಲು ಕಾಂಗ್ರೆಸ್ ಕಾರ್ಯಕರ್ತರು ಸಿದ್ಧರಾಗಿದ್ದಾರೆ. ಚಿತ್ತಾಪುರದಲ್ಲಿ ಬಿಜೆಪಿ ಅಭ್ಯರ್ಥಿ ಸೋಲುವುದು ನೂರಕ್ಕೆ ನೂರು ಖಚಿತ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here