ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ದಸಂಸ ಮನವಿ

0
39

ಶಹಾಬಾದ: ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮಂಗಳವಾರ ದಸಂಸ ಒಕ್ಕೂಟ ದಲಿತ ಸಂಘ? ಸಮಿತಿ ಸಂಘಟನೆಗಳ ಜಂಟಿ ವೇದಿಕೆಯು ತಹಸೀಲ್ದಾರ ಮುಖಾಂತರ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಾತನಾಡಿದ ದಸಂಸ ರಾಜ್ಯ ಸಂಘಟನಾ ಸಂಚಾಲಕ ಮರೆಪ್ಪ ಹಳ್ಳಿ, ಎಸ್‌ಸಿಪಿ ಟಿಎಸ್‌ಪಿ ಹಣದ ದುರ್ಬಳಕೆ, ಅವ್ಯವಹಾರ ಹಾಗೂ ಸದ್ಬಳಕೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಬೇಕು. ಕರೋನಾ ಮತ್ತು ಫಂಗಸ್‌ಗೆ ಒಳಗಾಗಿರುವ ಎಲ್ಲರಿಗೂ ಉಚಿತವಾಗಿ ಲಸಿಕೆ, ಔ?ದೋಪಚಾರ, ಆಸ್ಪತ್ರೆಗಳಲ್ಲಿ ಬೆಡ್ ಹಾಗೂ ಆಕ್ಸಿಜನ್ ವ್ಯವಸ್ಥೆಯನ್ನು ಕಲ್ಪಿಸಬೇಕು. ಕರೋನಾ ವಾರಿಯರ್ಸ್‌ಗಳಾಗಿ ಹಗಲಿರುಳು ಅವಿಶ್ರಾಂತವಾಗಿ ದುಡಿಯುತ್ತಿರುವ ವೈದ್ಯರು, ನರ್ಸ್‌ಗಳು, ಆಶಾಕಾರ್ಯಕರ್ತೆಯರು ಹಾಗೂ ಆಸ್ಪತ್ರೆಯ ಡಿ ದರ್ಜೆ ನೌಕರರ ಸಂಬಳವನ್ನು ಹೆಚ್ಚಿನ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಿಕೊಡಿ, ಕೇಂದ್ರ ಹಾಗೂ ರಾಜ್ಯ ಸರಕಾರಗಳು ರೂಪಿಸಿರುವ ಕೃಷಿ ಹಾಗೂ ಕಾರ್ಮಿಕ ವಿರೋಧಿ ಕಾನೂನುಗಳನ್ನು ವಾಪಸ್ ಪಡೆದುಕೊಳ್ಳಬೇಕು.

Contact Your\'s Advertisement; 9902492681

ದಲಿತ, ಹಿಂದುಳಿದ, ಅಲ್ಪಸಂಖ್ಯಾತ ಬಡತನ ಹಿನ್ನೆಲೆಯ ವಿದ್ಯಾರ್ಥಿಗಳಿಗೆ ಮಾಸಿಕ ನಿರುದ್ಯೋಗ ಭ್ಯತೆಯನ್ನು ನೀಡಬೇಕು. ಬಾಕಿ ಇರುವ ವಿದ್ಯಾರ್ಥಿಗಳ ಸ್ಕಾಲರ್‌ಶಿಪ್ ಅನ್ನು ತಕ್ಷಣ ಮಂಜೂರು ಮಾಡುವ ನಿಟ್ಟಿನಲ್ಲಿ ಸಮಾಜ ಕಲ್ಯಾಣ ಸಚಿವರು ಸೂಕ್ತ ಕ್ರಮವನ್ನು ಕೈಗೊಳ್ಳಬೇಕು. ಪಡಿತರ ಚೀಟಿಯ ಮೂಲಕ ಗ್ರಾಮಿಣ ಪ್ರದೇಶದ ಬಡವರಿಗೆ ಕೊಡುವ ಆಹಾರ ಪದಾರ್ಥ ಹಾಗೂ ದವಸಧಾನ್ಯಗಳನ್ನು ಪ್ರಮಾಣವನ್ನು ಹೆಚ್ಚಿಸಿ ಉಚಿತವಾಗಿ ನೀಡಬೇಕು ಹಾಗೂ ಮುಂಬರಲಿರುವ ಕರೋನಾದ ಮೂರನೇ ಅಲೆಯಲ್ಲಿ ಎದುರಿಸಲುವ ಸಲುವಾಗಿ, ನಗರ, ಪಟ್ಟಣಗಳಲ್ಲಿರುವ ಲಾಡ್ಜ್‌ಗಳು, ಭವನಗಳು ಮತ್ತು ಕಲ್ಯಾಣ ಮಂಟಪ ಕಟ್ಟಡಗಳನ್ನು ವಶಪಡಿಸಿಕೊಂಡು ಅವುಗಳನ್ನು ಸುಸಜ್ಜಿತವಾದ ಕರೋನಾ ಚಿಕಿತ್ಸಾ ಸೆಂಟರ್‌ಗಳನ್ನಾಗಿ ಪರಿವರ್ತಿಬೇಕು ಮತ್ತು ರಾಜ್ಯದಾದ್ಯಂತ ಹೆಚ್ಚುತ್ತಿರುವ ದಲಿತರ ಮೇಲಿನ ದೌರ್ಜನ್ಯ ಕುರಿತು ಚರ್ಚಿಸಲು ದಲಿತ ಸಂಘಟನೆಗಳ ಮುಖಂಡರನ್ನು ಸರ್ಕಾರ ಕೂಡಲೇ ಆನ್‌ಲೈನ್ ಸಭೆಯನ್ನು ಕರೆಯಬೇಕು ಎಂಬ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

ಶಿವರುದ್ರ ಗಿರೆನೂರ್,ಮರೆಪ್ಪ ಮೇತ್ರೆ, ಮಲ್ಲಣ್ಣ ಮಸ್ಕಿ,ಪೂಜಪ್ಪ ಮೇತ್ರೆ,ಮಲ್ಲಿಕಾರ್ಜುನ ಕಟ್ಟಿ,ಸತೀಶ ಕೋಬಾಳ, ಮಲ್ಲಿಕಾರ್ಜುನ ಹಳ್ಳಿ ಸೇರಿದಂತೆ ಅನೇಕರು ಇದ್ದರು.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here