ಸುಭಾಷ್ ಗುತ್ತೇದಾರ ಅವರಿಗೆ ಮಂತ್ರಿ ಮಾಡಲು ಮನವಿ

0
6

ಆಳಂದ: ಜಿಲ್ಲೆಯ ಹಿರಿಯ ಬಿಜೆಪಿ ಶಾಸಕ ಸುಭಾಷ್ ಆರ್ ಗುತ್ತೇದಾರ ಅವರನ್ನು ಸಚಿವರನ್ನಾಗಿ ಮಾಡಬೇಕೆಂದು ತಾಲೂಕಾ ವೀರಮಾಹೇಶ್ವರ ಜಂಗಮ ಕ್ಷೇಮಾಭಿವೃದ್ಧಿ ಸಂಘದ ತಾಲೂಕಾ ಅಧ್ಯಕ್ಷ ರುದ್ರಯ್ಯ ಎನ್ ಹಿರೇಮಠ ಬಿಜೆಪಿ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.

ಆಳಂದ ಮತಕ್ಷೇತ್ರದಿಂದ ನಾಲ್ಕು ಬಾರಿ ವಿಧಾನಸಭೆಗೆ ಆಯ್ಕೆಯಾಗಿರುವ ಇವರು ಜಿಲ್ಲೆಯಲ್ಲಿಯೇ ಅತ್ಯಂತ ಹಿರಿಯ ಬಿಜೆಪಿ ಶಾಸಕರಾಗಿದ್ದಾರೆ ಅಲ್ಲದೇ ತಾಲೂಕಿನಲ್ಲಿ ಸರ್ವ ಸಮುದಾಯಗಳನ್ನು ಸಮನಾಗಿ ಕಂಡು ಎಲ್ಲರನ್ನು ಜೊತೆಯಾಗಿ ಕರೆದುಕೊಂಡು ಹೋಗುವ ಸ್ವಭಾವ ಹೊಂದಿದ್ದಾರೆ ಮೇಲಾಗಿ ಸ್ವತಂತ್ರಭಾರತದ ಇತಿಹಾಸದಲ್ಲಿ ಆಳಂದ ಮತಕ್ಷೇತ್ರದಲ್ಲಿ ಪ್ರಥಮ ಬಾರಿ ಬಿಜೆಪಿಯನ್ನು ಗೆಲ್ಲಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ ಆದರಿಂದ ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಸಂಪುಟದಲ್ಲಿ ಶಾಸಕ ಸುಭಾಷ್ ಆರ್ ಗುತ್ತೇದಾರರಿಗೆ ಸಚಿವರನ್ನಾಗಿ ಮಾಡಿ ಹೊಸ ಇತಿಹಾಸ ರಚನೆಗೆ ಅವಕಾಶ ಮಾಡಿಕೊಡಬೇಕೆಂದು ಭಾರತೀಯ ಜನತಾ ವರಿಷ್ಠರಲ್ಲಿ ಮನವಿ ಮಾಡಿದ್ದಾರೆ.

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here