ಈಡಿಗ ಸಮಾಜಕ್ಕೆ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆಗೆ ಡಿಸಿಗೆ ಮನವಿ

0
55

ಕಲಬುರಗಿ: ಈಡಿಗ ಸಮಾಜಕ್ಕೆ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮ ಸ್ಥಾಪನೆ ಮಾಡಬೇಕೆಂದು ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ದಿಂದ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದರು.

ಸಮಾಜವು ಮುನ್ನಲೆಗೆ ಬರಬೇಕಾದರೇ, ಸೇಂದಿ ಸದರಿ ಈಡಿಗ ಸಮಾಜವು ತಲಾತಲಾಂತರದಿಂದ ನಂಬಿಕೊಂಡು ಬಂದಿರುವ ಕುಲಕಸಬು ಸೇಂದಿ ಮಾರಾಟವಾಗಿದ್ದು. ಇದನ್ನು ಕರ್ನಾಟಕ ಸರ್ಕಾರ ನಿಷೇಧ ಮಾಡಿರುವುದರಿಂದ ಅವರಲ್ಲ ನಿರುದ್ಯೋಗದ ಸಮಸ್ಯೆ ಮತ್ತು ಆರ್ಥಿಕ ಮುಗ್ಗಟ್ಟಿನ ಸಮಸ್ಯೆಯಿಂದ ಬಳಲಿ, ಅತ್ಯಂತ ಹಿಂದುಆದ ಸಮಾಜವಾಗಿರುತ್ತದೆ.

Contact Your\'s Advertisement; 9902492681

ಇದನ್ನೂ ಓದಿ: ಕಲಬುರಗಿ ಪೇಟೆ ಧಾರಣೆ

ಮಾರಾಟ ಮಾಡಲು ಅವಕಾಶ ಮಾಡದಿದ್ದರೆ ಅವರಿಗೆ ಸರ್ಕಾರಿ ನೌಕರಿ ಕೊಡಬೇಕು. ಹಾಗೂ ಇವರಿಗೆ ಶ್ರೀ ನಾರಾಯಣಗುರು ಅಭಿವೃದ್ಧಿ ನಿಗಮವನ್ನು ಮಂಜೂರು ಮಾಡಿ ೫೦೦ ಕೋಟೆ ಅನುದಾನ ನೀಡಬೇಕು. ಅನೇಕ ವರ್ಷಗಳಿಂದ ವಿನೂತನವಾಗಿ ಹೋರಾಟ ಮಾಡಿದರೂ ಸಹಿತ ಸರ್ಕಾರವು ಇದರ ಬಗ್ಗೆ ಯಾವುದೇ ರೀತಿಯ ಕ್ರಮ ಕೈಗೊಳ್ಳದೇ ಇರುವುದರಿಂದ ಈ ಸಮಾಜಕ್ಕೆ ಮಾಡಿದ ದೊಡ್ಡ ಅನ್ಯಾಯವಾಗಿರುತ್ತದೆ. ಆದಕಾರಣ ಮಾನ್ಯರವರಲ್ಲಿ ನಮ್ಮ ಸಂಘಟನೆ ಪರವಾಗಿ ವಿನಂತಿ ಮಾಡಿಕೊಳ್ಳುತ್ತಿದ್ದೇವೆ. ಒಂದು ವೇಳೆ ಇದರ ಬಗ್ಗೆ ಯಾವುದೇ ಕ್ರಮಕೈಗೋಳ್ಳದೇ ಹೋದರೆ ಕಲಬುರಗಿ ನಗರಕ್ಕೆ ಮುಖ್ಯಮಂತ್ರಿಗಳು ಬಂದಾಗ ಮುತ್ತಿಗೆ ಹಾಕುವದು ಅನಿವಾರ್ಯವಾಗುವದು  ಎಂದರು.

ಈ ಸಂದರ್ಭದಲ್ಲಿ ಕಲ್ಯಾಣ ಕರ್ನಾಟಕ ಕನ್ನಡಪರ ಸಂಘಟನೆಗಳ ಒಕ್ಕೂಟ ಜಿಲ್ಲಾಧ್ಯಕ್ಷ ಸಚೀನ್ ಫರಹತಾಬಾದ, ವಿಭಾಗೀಯ ಅಧ್ಯಕ್ಷ ಮಂಜುನಾಥ ನಾಲವಾರಕರ, ಗೌರವ ಅಧ್ಯಕ್ಷ ಜಗನ್ನಾಥ ಸೂರ್ಯವಂಶಿ, ಕಾಶಿನಾಥ ಮಾಳಗೆ ಇತತರರು ಇದ್ದರು.

ಇದನ್ನೂ ಓದಿ: 2 ವರ್ಷದ ಬಾಲಕ ಮುಜಮ್ಮಿಲ್ ಹತ್ಯೆ: ಆರೋಪಿಗಳ ಬಂಧನಕ್ಕೆ ಆಗ್ರಹಿಸಿ ಪ್ರತಿಭಟನೆ

ಪ್ರತ್ಯುತ್ತರ ಬಿಟ್ಟು

Please enter your comment!
Please enter your name here