ಕಲಬುರಗಿ: ಪೀರನವಾಡಿಯಲ್ಲಿ ಕ್ರಾಂತಿವೀರ ಸಂಗೋಳ್ಳಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದಕ್ಕಾಗಿ ಕರ್ನಾಟಕ ವಿಜಯ ಸೇನೆ ಕಲಬುರಗಿ ಜಿಲ್ಲಾದ್ಯಕ್ಷರಾದ ರಾಜು ಹಿರೇಮಠ ಅವರು ಹರ್ಷ ವ್ಯಕ್ತಪಡಿಸಿದ್ದಾರೆ.
ದೇಶದ ಸ್ವತಂತ್ರ್ಯಕ್ಕಾಗಿ ಹೋರಾಡಿದ ಕ್ರಾಂತಿವೀರ
ಸಂಗೋಳ್ಳಿ ರಾಯಣ್ಣ ಯುವ ಪೀಳಿಗೆಗೆ ಮಾದರಿಯಾಗಿದ್ದು, ಪ್ರತಿಯೊಬ್ಬ ಭಾರತೀಯನಲ್ಲಿ ರಾಯಣ್ಣನ ಹೋರಾಟದ ಕಿಚ್ಚು ಅಜಾರಮರ ಎಂಬುವದು ಪೀರನವಾಡಿ ಘಟನೆಯಿಂದ ಮತ್ತೊಮ್ಮೆ ಸಾಬೀತಾಗಿದೆ ಎಂದಿದ್ದಾರೆ.
ಎಮ್ ಇ ಎಸ್ ಪುಂಡರ ದಬ್ಬಾಳಿಕೆಯಿಂದ ಕನ್ನಡಪರ ಸಂಘಟಕರ ಮೇಲೆ ಕೇಸ ದಾಖಳಿಸಿದ್ದು, ವಾಪಸ್ಸ ಪಡೆಯದಿದ್ದಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಅವರು ಎಚ್ಚರಿಕೆ ನೀಡಿದರು.
ಮರಾಠಿಗರು ದಬ್ಬಾಳಿ ಮೂಲಕ ಪೀರನವಾಡಿಯಲ್ಲಿ ರಾಯಣ್ಙ ಪ್ರತಿಮೆ ಪ್ರತಿಷ್ಠಾಪನೆಗೆ ಅಡ್ಡಿಪಡಿಸಿದ ಕಾರಣ, ಕನ್ನಡಿಗರೆಲ್ಲಾ ಒಗ್ಗಟ್ಟಾಗಿ ರಾಯಣ್ಣನ ಪ್ರತಿಮೆ ಪ್ರತಿಷ್ಠಾಪನೆ ಮಾಡಿದ್ದು, ದೇಶಭಕ್ತರಲ್ಲಿ ಸಂತೋಷದ ವಾತಾವರಣ ಮನೆ ಮಾಡಿದ್ದು, ದೇಶದ ಸ್ವತಂತ್ರ್ಯ ಹೋರಾಟಗಾರರ ಹೆಸರಿಗೆ ಯಾರಾದರು ಧಕ್ಕೆ ಉಂಟು ಮಾಡುವಂತಹ ಕೆಲಸ ಮಾಡಿದರೆ ಎಲ್ಲಾ ದೇಶಭಕ್ತರು ಒಗ್ಗಟ್ಟಿನ ಮೂಲಮಂತ್ರದೊಂದಿಗೆ ಹೋರಾಡಬೇಕಾಗುತ್ತದೆ ಎಂದು ಪುಂಡರಿಗೆ ಅವರು ಎಚ್ಚರಿಕೆ ನೀಡಿದ್ದಾರೆ.