ವಿಷಯ ವೈವಿದ್ಯ Archives - Page 11 of 14 - ಇ ಮೀಡಿಯಾ ಲೈನ್
ಮನೆ ವಿಷಯ ವೈವಿದ್ಯ

ವಿಷಯ ವೈವಿದ್ಯ

ವಿಷಯ ವೈವಿದ್ಯ ಸುದ್ದಿ

ಕಣ್ಗೆ ಶೃಂಗಾರ ಗುರು ಹಿರಿಯರ ನೋಡುವುದು ಕರ್ಣಕ್ಕೆ ಶೃಂಗಾರ ಪುರಾತನರ ಸುನೀತಂಗಳ ಕೇಳುವುದು ವಚನಕ್ಕೆ ಶೃಂಗಾರ ಸತ್ಯವ ನುಡಿವುದು ಸಂಭಾಷಣೆಗೆ ಶೃಂಗಾರ ಸದ್ಭಕ್ತರ ನುಡಿಗಡಣ ಕರಕ್ಕೆ ಶೃಂಗಾರ ಸತ್ಪಾತ್ರಕ್ಕೀವುದು ಜೀವಿಸುವ ಜೀವನಕ್ಕೆ ಶೃಂಗಾರ ಗಣಮೇಳಾಪ ಇವಿಲ್ಲದ ಜೀವಿಯ ಬಾಳುವೆ ಏತಕ್ಕೆ ಬಾರದಯ್ಯ ಚನ್ನಮಲ್ಲಿಕಾರ್ಜುನ- ಅಕ್ಕಮಹಾದೇವಿ ಕಣ್ಗೆ ಶೃಂಗಾರ ಗುರುಹಿರಿಯರ ನೋಡುವುದು; ಬದುಕನ್ನು ಎತ್ತರಿಸುವ ಜೀವನ ಹೊರಗಿನ ಸಾಧನಗಳಿಂದ ಆಗುವುದಿಲ್ಲ. ಒಳಗಿನ ಗುಣಗಳಿಂದ. ಅಂತೆಯೇ ಕಣ್ಣಿಗೆ ಸಾಧನವಾಗಿ...
ಕಿಡಿ ಕಿಡಿ ಕೆದರಿದಡೆ ಎನಗೆ ಹಸಿವು ತೃಷೆಯಡಗಿತ್ತೆಂಬೆನು ಮುಗಿಲು ಹರಿದು ಬಿದ್ದಡೆ ಎನಗೆ ಮಜ್ಜನಕ್ಕೆರೆದರೆಂಬೆನು ಗಿರಿ ಮೇಲೆ ಬಿದ್ದಡೆ ಎನಗೆ ಪುಷ್ಪವೆಂಬೆನು ಚೆನ್ನಮಲ್ಲಿಕಾರ್ಜುನಯ್ಯ ಶಿರ ಹರಿದು ಬಿದ್ದಡೆ ಪ್ರಾಣ ನಿಮಗರ್ಪಿತವೆಂಬೆನು - ಅಕ್ಕಮಹಾದೇವಿ ಅಕ್ಕನ ವ್ಯಕ್ತಿತ್ವ ನದಿಯಿದ್ದಂತೆ. ಈ ಹಿಂದೆ ಭೈರಾಗಿ ಬಂದ, ಹಸಿವು, ತೃಷೆಗಳು ಕಾಡಿದವು. ಅವೆಲ್ಲವನ್ನು ಗೆದ್ದು ಕಾಡಿನ ಹಾದಿ ಹಿಡಿದ ಆಕೆ ಆ ಪ್ರಕೃತಿಯಲ್ಲಿ ಒಂದಾದಳು. ಅಧ್ಯಾತ್ಮದ...
ಚಿಲಿಮಿಲಿ ಎಂದೋದುವ ಗಿಳಿಗಳಿರಾ ನೀವು ಕಾಣಿರೆ ಸರವೆತ್ತಿ ಪಾಡುವ ಕೋಗಿಲೆಗಳಿರಾ ನೀವು ಕಾಣಿರೆ ಎರಗಿ ಬಂದಾಡುವ ದುಂಬಿಗಳಿರಾ ನೀವು ಕಾಣಿರೆ ಕೊಳನ ತಡಿಯೊಳಗಾಡುವ ಹಂಸೆಗಳಿರಾ ನೀವು ಕಾಣಿರೆ ಗಿರಿ ಗವ್ಹರದೊಳಗಾಡುವ ನವಿಲುಗಳಿರಾ ನೀವು ಕಾಣಿರೆ ಚೆನ್ನಮಲ್ಲಿಕಾರ್ಜುನನೆಲ್ಲಿದ್ದಹನೆಂದು ನೀವು ಹೇಳಿರೆ -ಅಕ್ಕ ಮಹಾದೇವಿ ಕಾಡುಮೃಗಗಳಿಗೆ, ಕಾಮುಕರಿಗೆ ಈ ಯಾವುದಕ್ಕೂ ಹೆದರದ ಅಕ್ಕ ನೀರಿನಲ್ಲಿ ಬಿದ್ದ ಕಟ್ಟಿಗೆ ತುಂಬುವ ಹಾಗೆ ಸಂಪೂರ್ಣವಾಗಿ ಚೆನ್ನಮಲ್ಲಿಕಾರ್ಜುನನಿಗೆ ಸಮರ್ಪಿತಳಾಗಿದ್ದಳು. ಭಕ್ತ ಸಾಕ್ಷಾತ್...
ಹಸಿವೆ ನೀನು ನಿಲ್ಲು ನಿಲ್ಲು ತೃಷೆಯೆ ನೀನು ನಿಲ್ಲು ನಿಲ್ಲು ಕಾಮವೆ ನೀನು ನಿಲ್ಲು ನಿಲ್ಲು ಕ್ರೋಧವೆ ನೀನು ನಿಲ್ಲು ನಿಲ್ಲು ಮೋಹವೆ ನೀನು ನಿಲ್ಲು ನಿಲ್ಲು ಮದವೆ ನೀನು ನಿಲ್ಲು ನಿಲ್ಲು ಮಚ್ಚರವೆ ನೀನು ನಿಲ್ಲು ನಿಲ್ಲು ಸಚರಾಚರವೆ ನೀನು ನಿಲ್ಲು ನಿಲ್ಲು ನಾನು ಚೆನ್ನಮಲ್ಲಿಕಾರ್ಜುನ ದೇವರ ಅವಸರದ ಓಲೆಯನೊಯ್ಯುತ್ತಲಿದ್ದೇನೆ -ಅಕ್ಕ ಮಹಾದೇವಿ ಬೀಜದ ಯಾತ್ರೆ ಮತ್ತು ಬೆಳವಣಿಗೆ ಬೀಜವಾಗುವವರೆಗೆ. ಅಲ್ಲಿಗೆ ಅದರ ಪಯಣ ಮುಗಿಯುತ್ತದೆ. ಅದೇರೀತಿ...
ಹಸಿವಾದೊಡೆ ಬಿಕ್ಷಾನ್ನಗಳುಂಟು ತೃಷೆಯಾದೊಡೆ ಕೆರೆ ಹಳ್ಳ ಬಾವಿಗಳುಂಟು ಶಯನಕೆ ಹಾಳು ದೇಗುಲಗಳುಂಟು ಆತ್ಮ ಸಂಗಾತಕೆ ನೀನೆನಗುಂಟು ಚನ್ನಮಲ್ಲಿಕಾರ್ಜುನ - ಅಕ್ಕಮಹಾದೇವಿ ಜಗತ್ತು ಹಿಂದೆಂದೂ ಕಂಡರಿಯದ, ಕೇಳಿರದ ಅಪೂರ್ವ ನಿರ್ಣಯವನ್ನು ಅಕ್ಕಮಹಾದೇವಿ ಕೈಗೊಳ್ಳಲು ಅಸಾಮಾನ್ಯ, ಅಸಾಧಾರಣ ಧೈರ್ಯ, ಪರಮಾತ್ಮನ ಅನುಭಾವ ಕಾರಣವಾಯಿತು. ಆಕೆಯ ಎದುರಿಗೆ ಆಗ ಎರಡು ದಾರಿಗಳಿದ್ದವು. ಒಂದು ಸುರಕ್ಷತೆಯ ಗುರುಮನೆಯ ದಾರಿ. ಇನ್ನೊಂದು ನೆಮ್ಮದಿಯ ಗೂಡು ಹೆತ್ತಮ್ಮನ ತವರು ಮನೆ....
ಗಗನದ ಗುಂಪ ಚಂದ್ರಮ ಬಲ್ಲುದಲ್ಲದೆ ಕಡೆಯಲಿದ್ದಾಡುವ ಹದ್ದು ಬಲ್ಲುದೆ ಅಯ್ಯ ನದಿಯ ಗುಂಪ ತಾವರೆ ಬಲ್ಲುದಲ್ಲದೆ ಕಡೆಯಲ್ಲಿದ್ದ ಹೊನ್ನಾವರಿಕೆ ಬಲ್ಲುದೆ ಅಯ್ಯ ಪುಷ್ಪದ ಪರಿಮಳವ ತುಂಬಿ ಬಲ್ಲುದಲ್ಲದೆ ಕಡೆಯಲಿದ್ದಾಡುವ ನೊರಜು ಬಲ್ಲುದೆ ಅಯ್ಯ ಚೆನ್ನಮಲ್ಲಿಕಾರ್ಜುನಯ್ಯ ನಿಮ್ಮ ಶರಣರ ನಿಲವ ನೀವೆ ಬಲ್ಲಿರಲ್ಲದೆ ಈ ಕೋಣನ ಮೈಮೇಲಣ ಸೊಳ್ಳೆಗಳೆತ್ತ ಬಲ್ಲವಯ್ಯ ----- ಕಲ್ಯಾಣದ ಜಂಗಮರ ಆಗಮನದಿಂದ ಅರಮನೆ ಗುರುಮನೆಯಾಗಿದೆ. ಮಹಾದೇವಿ ಹಂಬಲದುಂಬಿದ ಮನದಿಂದ, ಕಕ್ಕುಲಾತಿಯಿಂದ ಮಂತ್ರಪುರುಷ ಬಸವಣ್ಣನನ್ನು...
ತನು ಕರಗದವರಲ್ಲಿ ಮಜ್ಜನವನೊಲ್ಲೆಯಯ್ಯ ನೀನು ಮನಕರಗದವರಲ್ಲಿ ಪುಷ್ಟಪವನೊಲ್ಲೆಯಯ್ಯ ನೀನು ಹದುಳಿಗದವರಲ್ಲಿ ಗಂಧಾಕ್ಷತೆಯನೊಲ್ಲೆಯಯ್ಯ ನೀನು ಕಣ್ದೆರೆಯದವರಲ್ಲಿ ಆರತಿಯನೊಲ್ಲೆಯಯ್ಯ ನೀನು ಭಾವಶುದ್ಧವಿಲ್ಲದವರಲ್ಲಿ ಧೂಪವನೊಲ್ಲೆಯಯ್ಯ ನೀನು ಪರಿಣಾಮಿಗಳಲ್ಲದವರಲ್ಲಿ ನೈವೇದ್ಯವನೊಲ್ಲೆಯಯ್ಯ ನೀನು ತ್ರಿಕರಣಶುದ್ಧವಿಲ್ಲದವರಲ್ಲಿ ತಾಂಬೂಲವನೊಲ್ಲೆಯಯ್ಯ ನೀನು ಹೃದಯಕಮಲ ಅರಳದವರಲ್ಲಿ ಇರಲೊಲ್ಲೆಯಯ್ಯ ನೀನು ಎನ್ನಲ್ಲಿ ಏನುಂಟೆಂದು ಕರಸ್ಥಲವನಿಂಬುಗೊಂಡೆ ಹೇಳಾ ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಅಕ್ಕನ ಜೀವನ ಒಂದು ದನಿಕ್ಕೆ ರೂಪುಗೊಂಡದ್ದಲ್ಲ. ತಕ್ಷಣಕ್ಕೆ ಆಕಾಶದಿಂದ ಬಿದ್ದ ಮಳೆ ಹನಿಯೂ ಅಲ್ಲ. ಮಳೆಹನಿಯೊಂದು ಸಿಂಪಿನಲ್ಲಿ ಬಿದ್ದು ರತ್ನವಾದಂತೆ ಅವಳ ಬದುಕು.ಒಂದು...
ಹಂದಿಯೂ ಮದಕರಿಯೂ ಒಂದೇ ದಾರಿಯಲ್ಲಿ ಸಂಧಿಸಿದೆಡೆ ಹಂದಿಗಂಜಿ ಮದಕರಿ ಕೆಲಕ್ಕೆ ಸಾರಿದಡೆ ಈ ಹಂದಿಯದು ಕೇಸರಿಯಪ್ಪುದೆ ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ದೇವ ಸೌಂದರ್ಯವೇ ಧರೆಗಿಳಿದಂತೆ, ಆಂತರಿಕ ಮತ್ತು ಬಾಹ್ಯ ಸೌಂದರ್ಯದಿಂದ ಕಂಗೊಳಿಸುತ್ತಿದ್ದ ಅಕ್ಕನ ನಿಲುವು ಅರಿಯದ ಕೌಶಿಕ ತನ್ನ ಕಾಕದೃಷ್ಟಿ ಹಾಕಿ ಬಯಲ ಚೇತನವನ್ನು ಕಟ್ಟಿ ಹಾಕುವೆ ಎಂಬ ಭ್ರಮೆಯಲ್ಲಿರುತ್ತಾನೆ. ಉಪಾಯಭರಿತಳಾದ ಅಕ್ಕ ಐದು ವಾರದ ವ್ರತದಲ್ಲಿ ಗುರು ಲಿಂಗ ಜಂಗಮ ಸೇವೆಯಲ್ಲಿ...
ಅಯ್ಯ ನಿಮ್ಮ ಶರಣರ ಬರವಿಂಗೆ ಗುಡಿ ತೋರಣವ ಕಟ್ಟುವೆ ಅಯ್ಯ ನಿಮ್ಮ ಶರಣರ ಬರವಿಂಗೆ ಮಡುಹಿನಲ್ಲಿ ಪಟ್ಟವ ಕಟ್ಟುವೆ ಅಯ್ಯ ನಿಮ್ಮ ಶರಣರೆನ್ನ ಮನೆಗೆ ಬಂದಡೆ ಅವರ ಶ್ರೀಪಾದವನೆನ್ನ ಹೃದಯದಲ್ಲಿ ಬಗೆದಿಟ್ಟುಕೊಂಬೆ ಕಾಣಾ ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಎಚ್ಚರಿರಬೇಕು ನಡೆ-ನುಡಿಯಲ್ಲಿ, ಮಚ್ಚರವಿರಬೇಕು ಭವ ಸಾಗರದಲ್ಲಿ, ಹುಚ್ಚನಾಗಿರಬೇಕು ಜನರ ಕಣ್ಣಿನಲ್ಲಿ, ಮನ ಅಚ್ಚೊತ್ತಿದಂತಿರಬೇಕು ಲಿಂಗದಲ್ಲಿ, ಇಂತೀ ಗುಣವುಳ್ಳಾತನೆ ಭಕ್ತ ಜೇಔರ್ಗಿಯ ಷಣ್ಮುಖ ಶಿವಯೋಗಿಗಳ ಈ ವಚನದಂತೆ ಬಾಳ್ಯದಲ್ಲಿಯೇ...
ಸಾವಿಲ್ಲದಾಗುವಿಕೆ, ಸಾವಿಲ್ಲದವರನ್ನು ಪಡೆವ ಹಂಬಲದಾಕೆ ಅಕ್ಕ -------- ಅಯ್ಯ ಕತ್ತಲೆಯ ಕಳೆದುಳಿದ ಸತ್ಯ ಶರಣರ ಪರಿಯನೇಂನೆಬೆನಯ್ಯ ಘನವನೊಳಕೊಂಡ ಮನದ ಮಹಾನುಭಾವಿಗಳ ಬಳಿವಿಡಿದು ಬದುಕಿದೆನಯ್ಯ ಅಯ್ಯ ನಿನ್ನಲ್ಲಿ ನಿಂದು ಬೇರೊಂದರಿಯದ ಲಿಂಗ ಸುಖಿಗಳ ಸಂಗದಲ್ಲಿ ದಿವ ಕಳೆಯಿಸಯ್ಯ ಚನ್ನಮಲ್ಲಿಕಾರ್ಜುನ -ಅಕ್ಕಮಹಾದೇವಿ ಹುಟ್ಟಿನೊಂದಿಗೆ ಸಾವು, ಸುಖದೊಂದಿಗೆ ದುಃಖ ಇವೆರಡೂ ಒಟ್ಟಿಗೆ ಬೆನ್ನ ಅಂಟಿಕೊಂಡಂತೆ ಬಂದಿರುವುದು ನಮಗೆಲ್ಲರಿಗೆ ತಿಳಿದಿರುವ ವಿಷಯ. ಆದರೆ ಅಕ್ಕ ಅಕ್ಕ ಇದನ್ನು ಸಹಜವಾಗಿ ತೆಗೆದುಕೊಳ್ಳದೆ ಇದರಿಂದ...
- Advertisement -

LATEST NEWS

MUST READ